ದೀಕ್ಷಿತ್ ಶೆಟ್ಟಿ ನಿರ್ಮಾಣದ 'ವಿಡಿಯೋ' ಚಿತ್ರದ ಟೀಸರ್ ರಿಲೀಸ್; ಸ್ಯಾಂಡಲ್‌ವುಡ್‌ಗೆ ಕಾಲಿಟ್ಟ ಯುಟ್ಯೂಬರ್ ʼದೂತʼ ಸಮೀರ್
Video Kannada Movie: ʼಬ್ಲಿಂಕ್ʼ ಯಶಸ್ಸಿನ ನಂತರ ಮತ್ತೆ ಒಂದಾದ ದೀಕ್ಷಿತ್ ಶೆಟ್ಟಿ ಹಾಗೂ ಶ್ರೀನಿಧಿ ಬೆಂಗಳೂರು ಇದೀಗ ʼವಿಡಿಯೋʼ ಮೂಲಕ ಪ್ರೇಕ್ಷಕರನ್ನು ಹೆದರಿಸಲು ಸಜ್ಜಾಗಿದ್ದಾರೆ. ಬಹುತೇಕ ಹೊಸ ಕಲಾವಿದರೇ ಸೇರಿ ಮಾಡಿರುವ 'ವಿಡಿಯೋ' ಸಿನಿಮಾವು ಹಾರರ್ ಜಾನರ್ ನಲ್ಲಿ ಮೂಡಿಬಂದಿದ್ದು, ಸದ್ಯ ಚಿತ್ರದ ಮೊದಲ ಟೀಸರ್ ರಿಲೀಸ್ ಆಗಿದೆ.

Dheekshith Shetty "Video" Kannada Movie

ಬೆಂಗಳೂರು: ಕನ್ನಡದ 'ದಿಯಾ', 'ಬ್ಲಿಂಕ್' ಹಾಗೂ ತೆಲುಗಿನ 'ದಸರಾ' ಸೇರಿದಂತೆ ಹಲವು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದ ನಟ ದೀಕ್ಷಿತ್ ಶೆಟ್ಟಿ (Dheekshith Shetty) ಇದೀಗ ಹೊಸ ನಿರ್ಮಾಣ ಸಂಸ್ಥೆಯನ್ನು ಹುಟ್ಟು ಹಾಕಿದ್ದಾರೆ. ʼಧೀ ಸಿನಿಮಾಸ್' ಎಂಬ ಪ್ರೊಡಕ್ಷನ್ ಹೌಸ್ ಘೋಷಿಸಿ ನಿರ್ಮಾಪಕರಾಗಿಯೂ ಗುರುತಿಸಿಕೊಂಡಿದ್ದಾರೆ. ʼಬ್ಲಿಂಕ್ʼ ಯಶಸ್ಸಿನ ನಂತರ ದೀಕ್ಷಿತ್ ಶೆಟ್ಟಿ ಹಾಗೂ ಶ್ರೀನಿಧಿ ಬೆಂಗಳೂರು ಇದೀಗ ʼವಿಡಿಯೋʼ ಎಂಬ ಚಿತ್ರದ ಮೂಲಕ ಮತ್ತೆ ಒಂದಾಗಿದ್ದಾರೆ. ಬಹುತೇಕ ಹೊಸ ಕಲಾವಿದರೇ ಸೇರಿ ಮಾಡಿರುವ 'ವಿಡಿಯೋ' ಸಿನಿಮಾವು ಹಾರರ್ ಜಾನರ್‌ನಲ್ಲಿ ಮೂಡಿಬಂದಿದ್ದು, ಸದ್ಯ ಚಿತ್ರದ ಮೊದಲ ಟೀಸರ್ ರಿಲೀಸ್ ಆಗಿದ್ದು ಅಭಿಮಾನಿಗಳು ಮತ್ತಷ್ಟು ಎಕ್ಸೈಟ್ ಆಗಿದ್ದಾರೆ.
ಸಾಕಷ್ಟು ನೈಜ ಘಟನೆಗಳನ್ನು ಆಧರಿಸಿ ಮಾಡಿರುವ ಈ ಫೌಂಡ್ ಫೂಟೇಜ್ ಜಾನರ್‌ನ ಸಿನಿಮಾವನ್ನು ಶ್ರೀನಿಧಿ ಬೆಂಗಳೂರು ನಿರ್ದೇಶಿಸಿದ್ದಾರೆ. ಹೊಸ ತಲೆಮಾರಿನ ನಿರ್ದೇಶಕರು ಹಾಗೂ ನಟಿಯರು ಸೇರಿ ಟೀಸರ್ ಬಿಡುಗಡೆ ಮಾಡಿದ್ದು ವಿಶೇಷ. ದೆವ್ವದ ಹಾಡು ಹಾಡುವ ಮೂಲಕ ಟೀಸರ್ ಲಾಂಚ್ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಹಾರರ್ ಥ್ರಿಲ್ಲರ್ ಸಿನಿಮಾ ಇದಾಗಿದ್ದು ವೈರಲ್ ಆಗಬೇಕು, ಜನಪ್ರಿಯರಾಗಬೇಕು ಎಂಬ ಕಾರಣಕ್ಕೆ ವ್ಲಾಗ್ ಮಾಡುವವರು, ಯುಟ್ಯೂಬ್ ವಿಡಿಯೊ ಮಾಡುವವರು ಹಾಂಟೆಡ್ ಜಾಗಗಳಿಗೆ ತೆರಳಿ ಬಳಿಕ ಅಲ್ಲಿ ಕಣ್ಮರೆಯಾಗುತ್ತಾರೆ. ಇಂತಹ ಸಾಕಷ್ಟು ನೈಜ ಘಟನೆಗಳನ್ನು ಆಧರಿಸಿ ಮಾಡಿರುವ ಈ ಫೌಂಡ್ ಫೂಟೇಜ್ ಜಾನರ್‌ನ ಸಿನಿಮಾ ಸ್ಯಾಂಡಲ್‌ವುಡ್‌ನಲ್ಲಿ ಹೊಸದೊಂದು ಭಾಷ್ಯ ಬರೆಯಲಿದೆ.
ಇದನ್ನು ಓದಿ: Coolie Movie: ಅಬ್ಬಬ್ಬಾ! 'ಕೂಲಿ' ಸೆಟ್‌ಗೆ ಮಾಸ್ ಆಗಿ ಎಂಟ್ರಿ ಕೊಟ್ಟ ತಲೈವಾ; ಇಲ್ಲಿದೆ ವಿಡಿಯೊ
ಬಹುತೇಕ ಹೊಸ ಕಲಾವಿದರೇ ಸೇರಿ ಮಾಡಿರುವ 'ವಿಡಿಯೋ' ಸಿನಿಮಾದ ಟೀಸರ್ ಹಾರರ್ ಜಾನರ್‌ನಲ್ಲಿ ಮೂಡಿಬಂದಿದೆ. ವಿಶೇಷವೆಂದರೆ ಚಿತ್ರದ ಟೀಸರ್‌ನಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಎಲ್ಲರ ಗಮನವನ್ನು ಸೆಳೆದ ಯುಟ್ಯೂಬರ್ ಸಮೀರ್ ಎಂ.ಡಿ. ಕೂಡ ಕಾಣಿಸಿಕೊಂಡಿದ್ದಾರೆ. ಈ ಹಿಂದೆ ತೆರೆಕಂಡಿದ್ದ ʼ6-5=2ʼ ಸಿನಿಮಾ ಮಾದರಿಯಲ್ಲೇ ಇಲ್ಲಿಯೂ ಫೌಂಡ್ ಫೂಟೇಜ್ ಶೈಲಿಯನ್ನು ಬಳಸಲಾಗಿದೆ. ಭರತ್, ಜೀವನ್ ಶಿವಕುಮಾರ್, ತೇಜೇಶ್, ಪ್ರಿಯಾ ಜೆ ಆಚಾರ್, ನಲ್ಮೇ ನಾಚಿಯಾರ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ದೀಕ್ಷಿತ್ ಶೆಟ್ಟಿ ಬಂಡವಾಳ ಹೂಡಿದ್ದು ಪ್ರಸನ್ ಕುಮಾರ್ ಸಂಗೀತ ನಿರ್ದೇಶನ ಮಾಡಿದ್ದಾರೆ.