Wednesday, 11th December 2024

ಹುಲಿ ಉಗುರು ಧರಿಸಿರುವ ಆರೋಪ: ನಟ ಜಗ್ಗೇಶ್, ದರ್ಶನ್ ಗೆ ಸಂಕಷ್ಟ

ಬೆಂಗಳೂರು : ಹುಲಿ ಉಗುರು ಧರಿಸಿರುವ ಆರೋಪದ ಹಿನ್ನೆಲೆಯಲ್ಲಿ ನಟ ಜಗ್ಗೇಶ್ ಹಾಗೂ ದರ್ಶನ್ ಗೆ ಸಂಕಷ್ಟ ಎದುರಾಗಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ನೋಟಿಸ್ ನೀಡಲು ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ.

ನಟ ಜಗ್ಗೆಶ್ ಹಾಗೂ ದರ್ಶನ್ ಅವರು ಕೊರಳಿನಲ್ಲಿ ಹುಲಿ ಉಗುರು ಧರಿಸಿರುವ ಫೋಟೋಗಳು ವೈರಲ್ ಆದ ಹಿನ್ನೆಲೆಯಲ್ಲಿ ಇಬ್ಬರೂ ನಟರ ವಿರುದ್ಧ ಅರಣ್ಯ ಇಲಾಖೆಗೆ ಅನೇಕರು ದೂರು ನೀಡುತ್ತಿದ್ದಾರೆ.

ಅವರ ವಿರುದ್ಧ ಕ್ರಮಕ್ಕೆ ಅರಣ್ಯ ಇಲಾಖೆ ಮುಂದಾಗಿದ್ದು, ಇಬ್ಬರಿಗೂ ನೋಟಿಸ್ ನೀಡಲು ತಯಾರಿ ನಡೆಸಲಾಗಿದೆ ಎಂದು ಹೇಳಲಾಗುತ್ತಿದೆ.

ನಟ ಜಗ್ಗೇಶ್ ಹಾಗೂ ದರ್ಶನ್ ಅವರು ಧರಿಸಿರುವ ಹುಲಿ ಉಗುರು ನೈಜನತೆ ಪರೀಕ್ಷೆ ನಡೆಸಿ ಕ್ರಮಕ್ಕೆ ಅರಣ್ಯ ಇಲಾಖೆ ಮುಂದಾಗಿದೆ.