Friday, 13th December 2024

ಕಲೆಕ್ಷನ್​’ನಲ್ಲಿ ‘ದಂಗಲ್’​ ಅನ್ನು ಮೀರಿಸಿದ ‘ಕೆಜಿಎಫ್​: ಚಾಪ್ಟರ್​ 2’

ನವದೆಹಲಿ: ಭಾರತೀಯ ಮಾರುಕಟ್ಟೆಯಲ್ಲಿ ‘ದಂಗಲ್’​ ಸಿನಿಮಾ 387.38 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿ 2ನೇ ಸ್ಥಾನದಲ್ಲಿತ್ತು. ಈಗ ಎಲ್ಲ ನಿರೀಕ್ಷೆ ಳನ್ನೂ ಮೀರಿ ‘ಕೆಜಿಎಫ್​: ಚಾಪ್ಟರ್​ 2’  ಸಿನಿಮಾ ಆ ಸ್ಥಾನವನ್ನು ಕಿತ್ತುಕೊಂಡಿದೆ.

ಗಲ್ಲಾಪೆಟ್ಟಿಗೆಯಲ್ಲಿ ಹಲವು ದಾಖಲೆಗಳನ್ನು ಬರೆದಿರುವ ಈ ಚಿತ್ರದಿಂದ ಯಶ್​ ವೃತ್ತಿಜೀವನಕ್ಕೆ ಬಹು ದೊಡ್ಡ ಯಶಸ್ಸು ಸಿಕ್ಕಂತಾಗಿದೆ.

ಉತ್ತರ ಭಾರತದ ಪ್ರೇಕ್ಷಕರು ಈ ಸಿನಿಮಾವನ್ನು ಹೆಚ್ಚು ಇಷ್ಟಪಟ್ಟಿದ್ದಾರೆ. ಹಿಂದಿ ವರ್ಷನ್​ನಲ್ಲಿ ‘ಕೆಜಿಎಫ್​ 2’ ಚಿತ್ರಕ್ಕೆ ಭರ್ಜರಿ ಕಲೆಕ್ಷನ್​ ಆಗಿದೆ. ಆಮಿರ್​ ಖಾನ್​ ನಟನೆಯ ದಂಗಲ್​’ ಚಿತ್ರದ ದಾಖಲೆ ಯನ್ನು ಧೂಳೀಪಟ ಮಾಡಿದೆ. ನಿರ್ದೇಶಕ ಪ್ರಶಾಂತ್​ ನೀಲ್​ ಅವರ ಜನಪ್ರಿಯತೆ ವಿಶ್ವಮಟ್ಟಕ್ಕೆ ಹೆಚ್ಚಿದೆ.

‘ಕೆಜಿಎಫ್​ 1’ ತೆರೆಕಂಡಾಗ ಅದರ ಎದುರು ಶಾರುಖ್​ ನಟನೆಯ ‘ಜೀರೋ’ ಸಿನಿಮಾ ಮಣ್ಣು ಮುಕ್ಕಿತ್ತು.

22ನೇ ದಿನವೂ ‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಪ್ರತಿ ವೀಕೆಂಡ್​ನಲ್ಲಿ ಹೌಸ್​ಫುಲ್​ ಆಗಿದೆ. 21 ದಿನಕ್ಕೆ ಹಿಂದಿಯಲ್ಲಿ ಈ ಸಿನಿಮಾ ಮಾಡಿರುವುದು ಬರೋಬ್ಬರಿ 391.65 ಕೋಟಿ ರೂಪಾಯಿ! ದಂಗಲ್​ ಸಿನಿಮಾ ಭಾರತೀಯ ಮಾರುಕಟ್ಟೆಯಲ್ಲಿ 387.38 ಕೋಟಿ ರೂಪಾಯಿ ಕಲೆಕ್ಷನ್​ ಮಾಡುವ ಮೂಲಕ 2ನೇ ಸ್ಥಾನದಲ್ಲಿತ್ತು. ಈಗ ಆ ಸ್ಥಾನವನ್ನು ‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾ ಕಿತ್ತುಕೊಂಡಿದೆ. ಮೊದಲ ಸ್ಥಾನದಲ್ಲಿ ‘ಬಾಹು ಬಲಿ 2’ ಸಿನಿಮಾ ಇದೆ.

ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಯಶ್​ ತಮ್ಮ ಡಿಮ್ಯಾಂಡ್​ ಹೆಚ್ಚಿಸಿಕೊಂಡಿದ್ದಾರೆ. ನಟಿ ಶ್ರೀನಿಧಿ ಶೆಟ್ಟಿ ಅವರ ಕಾಲ್​ಶೀಟ್​ಗಾಗಿ ನಿರ್ಮಾಪಕರು ಕ್ಯೂ ನಿಲ್ಲುವಂತಾಗಿದೆ. ಸಿನಿಮಾ ನಿರ್ಮಿಸಿದ ‘ಹೊಂಬಾಳೆ ಫಿಲ್ಮ್ಸ್​’ ಸಂಸ್ಥೆಗೆ ಸಖತ್​ ಲಾಭ ಆಗಿದೆ.

ಸಂಜಯ್​ ದತ್​, ರವೀನಾ ಟಂಡನ್​, ಅಯ್ಯಪ್ಪ, ಅಚ್ಯುತ್​ ಕುಮಾರ್​, ವಸಿಷ್ಠ ಸಿಂಹ ಮುಂತಾದವರ ಪಾತ್ರಗಳು ‘ಕೆಜಿಎಫ್​ 2’ ಚಿತ್ರದಲ್ಲಿ ಶೈನ್​ ಆಗಿವೆ.