Friday, 13th December 2024

ನಿರ್ದೇಶನಕ್ಕೆ ಮರಳಿದ ಕಿಂಗ್ ಕಿಚ್ಚ

ಕಿಚ್ಚ ಸುದೀಪ್ ಕನ್ನಡ ಚಿತ್ರರಂಗ ಮಾತ್ರವಲ್ಲ ಭಾರತೀಯ ಚಿತ್ರರಂಗದಲ್ಲಿಯೂ ಬೇಡಿಕೆ ಪಡೆದ್ದಾರೆ. ಸುದೀಪ್ ನಟ ಮಾತ್ರವಲ್ಲ ನಿರ್ದೇಶಕರಾಗಿಯೂ ಗುರುತಿಸಿಕೊಂಡಿದ್ದಾರೆ.

ದಶಕಗಳ ಬಳಿಕ ಕಿಚ್ಚ ಸುದೀಪ್ ನಿರ್ದೇಶನಕ್ಕೆ ಮರಳಿದ್ದಾರೆ. ಹೌದು ಸುದೀಪ್ ಕೆಕೆ ಚಿತ್ರದ ಮೂಲಕ ನಿರ್ದೆಶನದ ಸಾರಥ್ಯ ವಹಿಸಿಕೊಂಡಿದ್ದಾರೆ.

ಗಾಡ್ ಫಾರ್ಗಿವ್ಸ್, ಐ ಡೋಂಟ್ – ಕಿಂಗ್ ಕಿಚ್ಚ ಎಂಬ ಕುತೂಹಲಕಾರಿ ಅಡಿಬರಹದೊಂದಿಗೆ ಈ ಚಿತ್ರವು ಸೆಟ್ಟೇರಲಿದೆ. ಕಿಚ್ಚ ಸುದೀಪ್ ಹುಟ್ಟುಹಬ್ಬದ ಪ್ರಯುಕ್ತ ಹೊಸ ಚಿತ್ರ ಘೋಷಣೆ ಮಾಡಿರುವ ಕೆಆರ್ ಜಿ ಸ್ಟುಡಿಯೋಸ್ ಆ ಮೂಲಕ ಕಿಚ್ಚ ಸುದೀಪ್ ಅವರಿಗೆ ಭರ್ಜರಿ ಉಡುಗೊರೆ ನೀಡಿದೆ. ಚಿತ್ರ ಪೋಸ್ಟರ್ ಬಿಡುಗಡೆಯಾಗಿದ್ದು, ಕುತೂಹಲ ಹೆಚ್ಚಿಸಿದೆ. ಮುಂದಿನ ವರ್ಷದಿಂದ ಚಿತ್ರೀಕರಣ ಆರಂಭವಾಗಲಿದೆ.

ಕಿಂಗ್ ಕಿಚ್ಚ ಚಿತ್ರವನ್ನು ಕಿಚ್ಚ ಕ್ರಿಯೇಷನ್ಸ್ ಸಹಯೋಗದಲ್ಲಿ ಕೆಆರ್‌ಜಿ ಸ್ಟುಡಿಯೋಸ್‌ನ ಕಾರ್ತಿಕ್ ಗೌಡ ಮತ್ತು ಯೋಗಿ ಜಿ ರಾಜ್ ನಿರ್ಮಿಸಲಿದ್ದಾರೆ. ಕಿಂಗ್ ಕಿಚ್ಚ ಅದ್ದೂರಿ ಬಜೆಟ್ ನ ಚಿತ್ರವಾಗಿದ್ದು, ಪ್ಯಾನ್ ಇಂಡಿಯಾ ಸಿನಿಮಾವಾಗಿ ನಿರ್ಮಾಣವಾಗಲಿದೆ.

ಮೈ ಆಟೋಗ್ರಾಫ್ ಚಿತ್ರದ ಮೂಲಕ ತಮ್ಮ ನಿರ್ದೇಶನದ ಪಯಣವನ್ನು ಆರಂಭಿಸಿದ ಸುದೀಪ್, ಕಿಂಗ್ ಕಿಚ್ಚ ಸಿನಿಮಾದ ನಿರ್ಮಾಣಕ್ಕೂ ಕೈ ಜೋಡಿಸಿದ್ದಾರೆ. ಸುದೀಪ್ ಅವರ ಅಭಿಮಾನಿಗಳು ಕಿಚ್ಚ ಸುದೀಪ್ ನಟನೆಯ ಜತೆಗೆ ಯಾವಾಗ ನಿರ್ದೇಶನಕ್ಕೆ ಮರಳುತ್ತಾರೆ ಎಂದು ಕಾಯುತ್ತಿದ್ದರು. ಹೀಗಿರುವಾಗಲೇ ಫ್ಯಾನ್ಸ್ ಗೆ ಸಿಹಿ ಸುದ್ಧಿ ಸಿಕ್ಕಿದೆ.

ಇದು ಕೆಆರ್‌ಜಿ ಸ್ಟುಡಿಯೋಸ್ ಬ್ಯಾನರ್‌ನಲ್ಲಿ ನಿರ್ಮಾಣ ವಾಗುತ್ತಿರುವ ಆರನೇ ಚಿತ್ರವಾಗಿದೆ. ರತ್ನನ್ ಪ್ರಪಂಚ ಚಿತ್ರದ ಮೂಲರ ನಿರ್ಮಾಣ ಆರಂಭಿಸಿದ ಕೆಆರ್ ಜಿ ಸ್ಡುಡಿಯೋಸ್, ಹಲವು ಸ್ಟಾರ್ ನಟ ಚಿತ್ರವನ್ನು ನಿರ್ಮಾಣ ಮಾಡಿದೆ.ಪ್ಯಾನ್ ಇಂಡಿಯಾ ಸಿನಿಮಾಗಳ ವಿತರಣೆಯ ಜವಾಬ್ದಾರಿಯನ್ನು ಹೊತ್ತು ಯಶಸ್ಬಿಯಾಗಿದೆ. ಈಗ ಬಿಗ್ ಸ್ಟಾರ್ ಸುದೀಪ್ ಅವರೊಂದಿಗೆ ಸಿನಿಮಾ ನಿರ್ಮಾಣ ಮಾಡುತ್ತಿದೆ.

***

ನಾನು ಸುದೀಪ್ ಅವರ ಅಭಿಮಾನಿ. ಅವರ ಸಿನಿಮಾಗಳು ಎಂದರೆ ನನಗೆ ಅಚ್ಚುಮೆಚ್ಚು. ಸುದೀಪ್ ಅವರಿಗಾಗಿ ಸಿನಿಮಾ ನಿರ್ಮಾಣ ಮಾಡಬೇಕು ಎಮನ ಆಸೆಯಿತ್ತು. ಅದು ಈಗ ನನಸಾಗಿದೆ. ಸುದೀಪ್ ಅವರ ನಮ್ಮ ನಿರ್ಮಾಣ ಸಂಸ್ಥೆಯೊAದಿಗೆ ಕೈ ಜೋಡಿಸಿ, ಚಿತ್ರವನ್ನು ನಿರ್ದೇಶಿಸುತ್ತಿರುವುದು ಸಂತಸ ತಂದಿದೆ.

  1. ಕಾರ್ತಿಕ್ ಗೌಡ ಕೆಆರ್ ಜಿ ಸ್ಟಡಿಯೋಸ್ ಮುಖ್ಯಸ್ಥ