Saturday, 27th July 2024

ಖ್ಯಾತ ನಟಿ ಪ್ರಣಿತಾ ಹೆಸರು ಬಳಸಿ ಲಕ್ಷಾಂತರ ರೂಪಾಯಿ ವಂಚನೆ

ಬೆಂಗಳೂರು: ಖ್ಯಾತ ನಟಿ ಪ್ರಣಿತಾ ಅವರನ್ನು ಪ್ರಚಾರ ರಾಯಭಾರಿಯನ್ನಾಗಿ ಮಾಡುತ್ತೇವೆ ಎಂದು ನಂಬಿಸಿ ಎಸ್.ವಿ.ಗ್ರೂಪ್ ಅಂಡ್ ಡೆವಲಪರ್ಸ್ ಕಂಪನಿಗೆ ಲಕ್ಷಾಂತರ ರೂ. ವಂಚನೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

ಪ್ರಣಿತಾ ಅವರನ್ನು ಎಸ್.ವಿ.ಗ್ರೂಪ್ ಪ್ರಚಾರ ರಾಯಭಾರಿಯನ್ನಾಗಿ ಮಾಡುತ್ತೇನೆ ಎಂದು ಹೇಳಿ ಗ್ರೂಪ್’ನ ಮ್ಯಾನೇಜರ್ ಅವರನ್ನು ಮೊಹಮ್ಮದ್ ಜುನಾಯತ್ ಹಾಗೂ ವರ್ಷ ಎಂಬವರು ಬೆಂಗಳೂರಿನ ಹೋಟೆಲ್ ಗೆ ಕರೆಸಿದ್ದಾರೆ.

ಹೋಟೆಲ್ ಗೆ ಬಂದ ಮ್ಯಾನೇಜರ್ ಗೆ ಮೊದಲು ಹಣ ನೀಡಿದರೆ ನಂತರ ಪ್ರಣಿತಾ ಬಂದು ಪ್ರಚಾರ ರಾಯಭಾರಿಯಾಗಲು ಒಪ್ಪಂದಕ್ಕೆ ಸಹಿ ಹಾಕುತ್ತಾರೆ ಎಂದು ಹೇಳಿದ್ದಾರೆ.

ಮಾತು ನಂಬಿದ ಎಸ್. ವಿ. ಗ್ರೂಪ್ ಮ್ಯಾನೇಜರ್ 13.5 ಲಕ್ಷ ಹಣ ನೀಡಿದ್ದಾರೆ. ಹಣ ಪಡೆದು ಬರುವುದಾಗಿ ಹೇಳಿ ಹೊರಟ ಇಬ್ಬರೂ ಪರಾರಿಯಾಗಿದ್ದಾರೆ. ಇದೀಗ ಲಕ್ಷಾಂತರ ರೂ. ಕಳೆದು ಕೊಂಡಿರುವ ಮ್ಯಾನೇಜರ್ ಪೊಲೀಸ್ ಠಾಣೆಗೆ ದೂರು ನೀಡಲು ಮುಂದಾಗಿದ್ದಾರೆ.

Leave a Reply

Your email address will not be published. Required fields are marked *

error: Content is protected !!