Friday, 19th April 2024

ಮಾಲಿವುಡ್‌ ಸಿನಿಮಾ ನಿರ್ದೇಶಕ ಶವ ಪತ್ತೆ

ಕೊಚ್ಚಿ: ‘ಮಿಜಿಯಿತ್ತಲಿಲ್ ಕಣ್ಣೀರುಮಾಯಿ’ ಚಿತ್ರದ ಮೂಲಕ ಖ್ಯಾತಿ ಪಡೆದ ಮಲಯಾಳಂ ನಿರ್ದೇಶಕ ಪ್ರಕಾಶ್ ಕೋಲೇರಿ(65) ಕೇರಳದ ವಯನಾಡ್ ಜಿಲ್ಲೆಯ ತಮ್ಮ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

ಪ್ರಕಾಶ್‌ ಅವರು ವಯನಾಡ್‌ನಲ್ಲಿರುವ ತನ್ನ ಮನೆಯಲ್ಲಿ ಒಬ್ಬಂಟಿಯಾಗಿ ವಾಸಿಸುತ್ತಿದ್ದರು. ಎರಡು ದಿನಗಳಿಂದ ಮನೆಯಿಂದ ಹೊರ ಬಾರದ ಕಾರಣ ನೆರೆಹೊರೆಯವರು ಅನುಮಾನದಿಂದ ಮನೆ ಪಕ್ಕ ಹೋಗಿ ನೋಡಿದಾಗ ಘಟನೆ ಬೆಳಕಿಗೆ ಬಂದಿದೆ.

1987 ರಲ್ಲಿ ಪ್ರಕಾಶ್‌ ಅವರು ʼ’ಮಿಜಿಯಿತ್ತಲಿಲ್ ಕಣ್ಣೀರುಮಾಯಿ’ ಸಿನಿಮಾದ ಮೂಲಕ ನಿರ್ದೇಶಕ್ಕಿಳಿದಿದ್ದರು. ಬಳಿಕ 1993 ರಲ್ಲಿ ‘ಅವನ್ ಅನಂತ ಪದ್ಮನಾಭನ್’ ಸಿನಿಮಾವನ್ನು ಮಾಡಿದ್ದರು. ಈ ಸಿನಿಮಾದಲ್ಲಿ ಕನ್ನಡದ ರಮೇಶ್‌ ಅರವಿಂದ್‌, ಸುಧಾ ಚಂದ್ರನ್, ಎಂ.ಜಿ.ಸೋಮನ್, ಮಾತ್ತು, ರಾಜನ್ ಪಿ ದೇವ್ ಮತ್ತು ಟಿ.ಜಿ.ರವಿ ಸೇರಿದಂತೆ ಇತರರಿದ್ದರು.

1999 ರಲ್ಲಿ ‘ವರುಣ್ ವರತಿರಿಕ್ಕಿಲ್ಲ’ ಬಿಡುಗಡೆಯಾದ ನಂತರ ಅವರು ಚಿತ್ರರಂಗದಿಂದ ಒಂದಷ್ಟು ಕಾಲ ಬ್ರೇಕ್‌ ಪಡೆದಿದ್ದರು.14 ವರ್ಷಗಳ ವಿರಾಮದ ನಂತರ ಅವರು ‘ಪಾಟ್ಟುಪುಸ್ತಕಂ’ ಮೂಲಕ ನಿರ್ದೇಶನಕ್ಕೆ ಮರಳಿದರು.

Leave a Reply

Your email address will not be published. Required fields are marked *

error: Content is protected !!