ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ (Bigg Boss Kannada 11) ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟ ರಜತ್ ಕಿಶನ್ ಕೊನೆಯ ಹಂತದ ವರೆಗೆ ಗಟ್ಟಿಯಾಗಿ ಬೇರೂರುವ ಎಲ್ಲ ಲಕ್ಷಣಗಳು ಕಾಣುತ್ತಿವೆ. ಇವರು ಆಡುವ ಶೈಲಿ, ಮಾತುಗಳು, ಕ್ಲಾರಿಟಿ ಎಲ್ಲವೂ ಚೆನ್ನಾಗಿದೆ ಎಂಬ ಟಾಕ್ ಹೊರಗಡೆಯಿಂದ ಕೇಳಿಬರುತ್ತಿದೆ. ಅದರಲ್ಲೂ ಈ ವಾರ ನಾಮಿನೇಷನ್ ಪ್ರಕ್ರಿಯೆ ವೇಳೆ ಮಾತಿನ ಮಲ್ಲಿ ಚೈತ್ರಾ ಕುಂದಾಪುರ ಅವರಿಗೆ ಕೊಟ್ಟ ಕೌಂಟರ್ ನೋಡಿ ಜನರಿಗೆ ಮತ್ತಷ್ಟು ಹತ್ತಿರವಾಗಿದ್ದಾರೆ.
ರಜತ್ರನ್ನು ನಾಮಿನೇಟ್ ಮಾಡಿದ ಚೈತ್ರಾ:
ನಾಮಿನೇಷನ್ ಪ್ರಕ್ರಿಯೆ ವೇಳೆ ಚೈತ್ರಾ ಅವರು ಒಂದು ಹೆಸರನ್ನು ರಜತ್ ಎಂದು ಆಯ್ಕೆ ಮಾಡಿದ್ದಾರೆ. ಇದಕ್ಕೆ ಅವರು ಕಾರಣ ನೀಡಿದ್ದು, ರಜತ್ ಪ್ರತಿ ಬಾರಿ ಬಾಸ್, ಬಾಸ್ ಅಂದಾಗ ಅದರಲ್ಲೊಂದು ವ್ಯಂಗ್ಯ ಕಾಣುತ್ತೆ. ಮನೆಯಿಂದ ಹೊರಗಡೆ ಹೋಗೋದಕ್ಕೆ ರೆಡಿ ಆಗಿದ್ದೀನಿ ಅಂತ ಒಪ್ಪಿಕೊಂಡಿದ್ದಾರೆ ಎಂಬುದು.
ಚೈತ್ರಾ ಅವರ ಮಾತಿಗೆ ತಿರುಗೇಟು ಕೊಟ್ಟ ರಜತ್, ‘ಈವಾಗಲೂ ಹೇಳ್ತೀನಿ ನಮ್ಮ ಬಾಸ್ ಇವರು. ಬರೀ ಬಾಸ್ ಅಂದಿದ್ದಕ್ಕೆ ಮನೆಯಿಂದ ಆಚೆ ಕಳುಹಿಸುತ್ತಾರಂತೆ ಅದಕ್ಕೆ ನಮ್ಮ ಬಾಸ್ ಇವ್ರು. ಬಾಸ್ ನಾನು ಈಗಲೂ ಹೇಳುತ್ತೇನೆ ಕೇಳಿಸಿಕೊಳ್ಳಿ. ನಿಮ್ಮನ್ನ ಮನೆಯಿಂದ ಹೊರಗೆ ಕಳುಹಿಸೋವರೆಗೂ ನಾನು ಹೋಗಲ್ಲ ಬಾಸ್’ ಎಂದು ಹೇಳಿದ್ದಾರೆ.
ಸುದೀಪ್ ಅವರು ಕಳೆದ ವೀಕೆಂಡ್ ನಾಮಿನೇಷನ್ ಮಾಡುವಾಗ ಸರಿಯಾದ, ಸ್ಟ್ರಾಂಗ್ ಕಾರಣ ನೀಡಿ, ಇಲ್ಲದಿದ್ದರೆ ಜೋಕರ್ ಥರಾ ಕಾಣುತ್ತೀರಿ ಎಂದಿದ್ದರು. ಇದೀಗ ನಾಮಿನೇಷನ್ ಪ್ರಕ್ರಿಯೆ ಮುಗಿದ ಬಳಿಕ ಚೈತ್ರಾ ಅವರು ನೀಡಿದ ಕಾರಣದ ಬಗ್ಗೆ ಮನೆಯೊಳಗೆ ಚರ್ಚೆ ನಡೆದಿದೆ. ರಜತ್ ಹಾಗೂ ಚೈತ್ರಾ ಮಧ್ಯೆ ಮಾತಿನ ಚಕಮಕಿ ಆಗಿದೆ.
ನಾನು ಬಾಸ್ ಎಂದು ಗೌರವದಿಂದಲೇ ಕರೆಯುತ್ತೀನಿ. ನೀವು ಇಂಥಹಾ ಕ್ಷುಲ್ಲಕ ಕಾರಣ ನೀಡಿ ನಾಮಿನೇಟ್ ಮಾಡಿದ್ದೀರಿ. ನೀವು ನಾಮಿನೇಷನ್ ಮಾಡಿರಲು ಕೊಟ್ಟಿರೋ ಕಾರಣ ಸರಿಯಿದೆ ಎಂದು ಸುದೀಪ್ ಸರ್ ಹೇಳಿಬಿಟ್ಟರೆ ನಾನು ಅರ್ಧ ಮೀಸೆ ಬೋಳಿಸಿಕೊಳ್ಳುತ್ತೇನೆ. ಬಳಿಕ ಮನೆಯಿಂದ ಹೊರ ಹೋಗುತ್ತೇನೆ ಎಂದು ಹೇಳಿದ್ದಾರೆ.
BBK 11: ಮಹಾರಾಜ-ಯುವರಾಣಿ ಮಧ್ಯೆ ಮಾತಿನ ಯುದ್ಧ: ರಣರಂಗವಾದ ಬಿಗ್ ಬಾಸ್ ಮನೆ