Saturday, 27th July 2024

ಕಾಂತಾರ ಚಿತ್ರದ ಸಪ್ತಮಿ ಗೌಡ ಬಾಲಿವುಡ್‌ಗೆ ಪಾದಾರ್ಪಣೆ

ಬೆಂಗಳೂರು: ರಿಷಬ್ ಶೆಟ್ಟಿಯ ಕಾಂತಾರ ಚಿತ್ರದ ಸಪ್ತಮಿ ಗೌಡ ಅವರಿಗೆ ದೊಡ್ಡ ಬಾಲಿವುಡ್ ಬ್ರೇಕ್ ಸಿಕ್ಕಿದೆ. ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರ ಮುಂಬರುವ ಚಿತ್ರ ದಿ ವ್ಯಾಕ್ಸಿನ್ ವಾರ್ ಮೂಲಕ ಸಪ್ತಮಿ ಬಾಲಿವುಡ್‌ಗೆ ಪಾದಾರ್ಪಣೆ ಮಾಡಲಿದ್ದಾರೆ.
ವ್ಯಾಕ್ಸಿನ್ ವಾರ್ ಸಿನಿಮಾದಲ್ಲಿ ಸಪ್ತಮಿಗೌಡ ನಟಿಸುತ್ತಿದ್ದಾರೆ. ಲಕ್ನೋ ಭಾಗದ ಶೂಟಿಂಗ್ ಮುಗಿಸಿದ್ದು, ಹೈದರಾಬಾದ್ ಶೆಡ್ಯೂಲ್ ನಲ್ಲಿ ಸಪ್ತಮಿ ಗೌಡ ಭಾಗವಹಿಸಲಿದ್ದಾರೆ, ಮುಂದಿನ ಕೆಲ ದಿನಗಳಲ್ಲಿ ಶೂಟಿಂಗ್ ಆರಂಭವಾಗಲಿದೆ ಎಂದು ವಿವೇಕ್ ಅಗ್ನಿಹೋತ್ರ ಹೇಳಿದ್ದಾರೆ.

‘ನಾನು ‘ಕಾಂತಾರ’ ಸಿನಿಮಾವನ್ನುನೋಡಿದ್ದೆ. ಅದರಲ್ಲಿ ಲೀಲಾ ಪಾತ್ರದಲ್ಲಿ ಸಪ್ತಮಿ ಗೌಡ ಅವರ ನಟನೆಯು ನನಗೆ ತುಂಬ ಇಷ್ಟವಾಗಿತ್ತು. ಹಾಗಾಗಿ, ಅವರನ್ನು ಸಿನಿಮಾಕ್ಕೆ ನಮ್ಮ ಆಯ್ಕೆ ಮಾಡಬೇಕು ಎಂದು ನಿರ್ಧರಿಸಿದೆ. ನಾನು ಈ ಬಗ್ಗೆ ಸಪ್ತಮಿಗೆ ಕರೆಮಾಡಿ, ಅಪ್ರೋಚ್ ಮಾಡಿದೆ. ಕೂಡಲೇ ಅವರು ನಟಿಸಲು ಒಪ್ಪಿಕೊಂಡರು. ಅವರು ‘ದಿ ವ್ಯಾಕ್ಸಿನ್ ವಾರ್’ ಸಿನಿಮಾದ ಭಾಗವಾಗಿರುವುದು ನನಗೆ ಖುಷಿ ನೀಡಿದೆ..’ ಎಂದು ಹೇಳಿದ್ದಾರೆ.

ವ್ಯಾಕ್ಸಿನ್ ವಾರ್ ಈ ವರ್ಷ ಆಗಸ್ಟ್ 15 ರಂದು ಹಿಂದಿ, ಇಂಗ್ಲಿಷ್, ಗುಜರಾತಿ, ಪಂಜಾಬಿ, ಭೋಜ್ಪುರಿ, ಬೆಂಗಾಲಿ, ಮರಾಠಿ, ತೆಲುಗು, ತಮಿಳು, ಕನ್ನಡ, ಉರ್ದು ಮತ್ತು ಅಸ್ಸಾಮಿ ಸೇರಿದಂತೆ 11 ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.
error: Content is protected !!