Saturday, 14th December 2024

ಕಿರುತೆರೆಯಲ್ಲಿ ಶ್ರೀಮದ್ ರಾಮಾಯಣ

ಕಿರುತೆರೆಯಲ್ಲಿ ಈ ಹಿಂದೆಯೂ ಹಲವು ಪೌರಾಣಿಕ ಕಥೆಯ ಧಾರಾವಾಹಿಗಳು ಪ್ರಸಾರವಾಗಿವೆ. ಅವುಗಳ ಸಾಲಿಗೆ ಮತ್ತೊಂದು ಪೌರಾಣಿಕ ಧಾರಾವಾಹಿ ಸೇರಿದೆ.

ಅದೇ ಶ್ರೀಮದ್ ರಾಮಾಯಣ ಇದೇ ೨೦ ರಿಂದ ಪ್ರಸಾರ ಆರಂಭಿಸಲಿದೆ. ಸಂಪೂರ್ಣ ನೂತನ ದೃಶ್ಯ ವೈಭವಗಳು ಮತ್ತು ಹೊಸ ನಟರ ತಂಡವು ಈ ಪೌರಾಣಿಕ ಪಾತ್ರಗಳಿಗೆ ಹೊಸ ಜೀವತುಂಬಲಿದೆ. ಇದು ವೀಕ್ಷಕರಿಗೆ ಒಂದು ಅನನ್ಯ ಅನುಭವವನ್ನು ನೀಡಲಿದೆ.

ಆಧುನಿಕ ತಂತ್ರಜ್ಞಾನದಿಂದ ಅದ್ಭುತ ದೃಶ್ಯ ಕಾವ್ಯವನ್ನು ತೆರೆಯಲ್ಲಿ ಕಟ್ಟಿಕೊಡಲಾಗುತ್ತಿದೆ. ವಿಶೇಷ ಎಂದರೆ ಈ ಧಾರಾವಾಹಿಯ ಪ್ರತಿ ಸಂಚಿಕೆ ಯಲ್ಲಿಯೂ ಬಹುಮಾನಗಳನ್ನು ನೀಡಲಾಗುತ್ತಿದೆ. ಪ್ರತಿ ದಿನ ಪ್ರಸಾರವಾಗುವ ಸಂಚಿಕೆಯಲ್ಲಿ ಕೇಳಲಾಗುವ ಪ್ರಶ್ನೆಗೆ ಉತ್ತರಿಸಿದರೆ ಬಹುಮಾನ ನೀಡಲಾಗು ತ್ತದೆ. ಸರಿ ಉತ್ತರ ನೀಡುವ ಇನ್ನೂರ ಐವತ್ತು ವೀಕ್ಷಕರಿಗೆ ಒಂದು ಸಾವಿರ ರು. ನೀಡಲಾಗುತ್ತದೆ ಎಂದು ಧಾರಾವಾಹಿ ತಂಡ ತಿಳಿಸಿದೆ. ಶ್ರೀಮದ್ ರಾಮಾಯಣ ಸೋಮವಾರದಿಂದ ಸಂಜೆ ಆರು ಗಂಟೆಗೆ ಉದಯ ಟಿವಿಯಲ್ಲಿ ಪ್ರಸಾವಾಗಲಿದೆ.