Wednesday, 11th December 2024

ಪುಟ್ಟಕ್ಕನ ಮಕ್ಕಳು ಖ್ಯಾತಿಯ ನಟಿ ಉಮಾಶ್ರೀ ಸಂಭಾವನೆ ಇಷ್ಟಿದೆ ನೋಡಿ…

PuttakkanaMakkalu

ಬೆಂಗಳೂರು: ಹಿರಿಯ ನಟಿ ಉಮಾಶ್ರೀ ಪುಟ್ಟಕ್ಕನ ಮಕ್ಕಳು ಧಾರವಾಹಿ ಮೂಲಕ ಕಿರುತೆರೆಗೆ ಭರ್ಜರಿಯಾಗಿ ಪ್ರವೇಶಿಸಿದ್ದಾರೆ. ಭಾರೀ ಕುತೂಹಲ ಮೂಡಿಸಿದ್ದ ಧಾರವಾಹಿ ಪ್ರಸಾರ ಆರಂಭಗೊಂಡು ಒಂದು ವಾರ ಪೂರೈಸಿದೆ.

ಪುಟ್ಟಕ್ಕನ ಮಕ್ಕಳು ಧಾರವಾಹಿಯ ಪ್ರಮುಖ ಆಕರ್ಷಣೆಯೇ ಉಮಾಶ್ರೀ, ಬೆಳ್ಳಿ ತೆರೆಯಲ್ಲಿ ಮಿಂಚಿ ರಾಜಕೀಯಕ್ಕೆ ಧುಮುಕಿದ್ದ ಈ ನಟಿ ಇದೀಗ ಕಿರುತೆರೆಯಲ್ಲಿ ಮೊದಲ ಬಾರಿ ಕಾಣಿಸಿಕೊಂಡಿದ್ದಾರೆ. ಧಾರವಾಹಿಯಲ್ಲಿ ನಟಿಸಲು ಉಮಾಶ್ರೀ ಪಡೆಯುತ್ತಿರುವ ವೇತನ ಎಷ್ಟು ಗೊತ್ತಾ?

ಜೊತೆ ಜೊತೆಯಲಿ ಖ್ಯಾತಿಯ ನಿರ್ದೇಶಕ ಆರೂರು ಜಗದೀಶ್ ಅವರೇ ಧಾರವಾಹಿ ನಿರ್ದೇಶಿಸುತ್ತಿದ್ದಾರೆ. ಜೊತೆ ಜೊತೆಯಲಿ ಧಾರಾವಾಹಿಯ ಅನಿರುದ್ಧ್ ಗೆ ಅತೀ ಹೆಚ್ಚು ಅಂದರೆ ದಿನವೊಂದಕ್ಕೆ 30 ಸಾವಿರ ರೂ. ವೇತನ ನೀಡಲಾಗುತ್ತಿತ್ತು. ಆದರೆ ಉಮಾಶ್ರೀ ದಿನವೊಂದಕ್ಕೆ 45 ಸಾವಿರ ರೂ. ಸಂಭಾವನೆ ಪಡೆಯುತ್ತಿದ್ದಾರೆ ಎಂದು ಹೇಳಲಾಗಿದೆ.