ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ (Yash) ಅವರಿಗೆ ಇಂದು (ಜನವರಿ 8) ಜನ್ಮದಿನದ(Birthday) ಸಂಭ್ರಮ(Yash Birthday). ಅವರಿಗೆ ಎಲ್ಲ ಕಡೆಗಳಿಂದ ವಿಶ್ಗಳು ಹರಿದು ಬರುತ್ತಿವೆ. ಯಶ್‌ಗೆ ಈಗ ಕೇವಲ ಕರ್ನಾಟಕ ಮಾತ್ರವಲ್ಲ ವಿಶ್ವಾದ್ಯಂತ ಅಭಿಮಾನಿಗಳಿದ್ದಾರೆ. ಎಲ್ಲರೂ ಯಶ್‌ಗೆ ಬರ್ತ್ಡೇ ಶುಭಾಶಯ ತಿಳಿಸುತ್ತಿದ್ದಾರೆ. ಅವರಿಗೆ ಮತ್ತಷ್ಟು ಗೆಲುವು ಸಿಗಲಿ ಎಂದು ಫ್ಯಾನ್ಸ್ ಹಾರೈಸುತ್ತಿದ್ದಾರೆ. ಯಶ್ ಅವರು ಏಕಾಏಕಿ ದೊಡ್ಡ ಸ್ಟಾರ್ ಆದವರಲ್ಲ. ಬಣ್ಣದ ಲೋಕಕ್ಕೆ ಕಾಲಿಡುವಾಗ ಅವರಿಗೆ ಯಾವುದೇ ಹಿನ್ನೆಲೆ ಇರಲಿಲ್ಲ. ಧಾರಾವಾಹಿ ಮೂಲಕ ವೃತ್ತಿಜೀವನ ಆರಂಭಿಸಿದ ಯಶ್ ನಂತರ ಚಿತ್ರರಂಗಕ್ಕೆ ಕಾಲಿಟ್ಟರು. ಈಗ ತಮ್ಮ ಸಾಮ್ರಾಜ್ಯವನ್ನು ಪ್ಯಾನ್ ಇಂಡಿಯಾ ಮಟ್ಟಕ್ಕೆ ವಿಸ್ತರಿಸಿಕೊಂಡಿದ್ದಾರೆ.
ಕೆಜಿಎಫ್’ ಕ್ಯಾಪ್ಟನ್ ಅವರ ಹುಟ್ಟುಹಬ್ಬದ ಸಂಭ್ರಮ ಎಲ್ಲೆಲ್ಲೂ ಮೊಳಗಿದೆ. ಕನ್ನಡಿಗ ಯಶ್ ಅವರಿಗೆ ದೇಶದ ಮೂಲೆ ಮೂಲೆಯಲ್ಲಿ ಅಭಿಮಾನಿಗಳು ಇದ್ದು, ಭರ್ಜರಿಯಾಗಿ ಬರ್ತ್ ಡೇ ಸೆಲೆಬ್ರೇಟ್ ಮಾಡುತ್ತಿದ್ದಾರೆ. ಈ ಸಮಯದಲ್ಲಿ ಸಿನಿಮಾ ರಂಗದ ದೊಡ್ಡ ದೊಡ್ಡ ನಟರು ಕೂಡ ರಾಕಿಭಾಯ್ ಯಶ್‌ಗೆ ವಿಶ್ ಮಾಡಿದ್ದಾರೆ. ಯಶ್ ಪ್ಯಾನ್ ಇಂಡಿಯಾ ಸ್ಟಾರ್ ಮಾತ್ರವಲ್ಲ ಪ್ಯಾನ್ ವರ್ಲ್ಡ್ ಸ್ಟಾರ್ ಕೂಡ ಆಗಿ ಬೆಳೆದಿದ್ದಾರೆ. ರಾಕಿಭಾಯ್ ಹವಾ ಪೂರ ಪಶ್ಚಿಮ ತೀರಕ್ಕೆ ಮಾತ್ರ ಅಲ್ಲ ಇಡೀ ಜಗತ್ತಿನಲ್ಲೇ ಸದ್ದು ಮಾಡುತ್ತಿದೆ.
ಬಾಲ್ಯ
1986 ಜನವರಿ 8ರಂದು ಹಾಸನ ಜಿಲ್ಲೆಯ ಭುವನಹಳ್ಳಿಯಲ್ಲಿ ಅರುಣ್ ಕುಮಾರ್ ಮತ್ತು ಪುಷ್ಪಾ ದಂಪತಿಯ ಮಗನಾಗಿ ಯಶ್ ಜನಿಸಿದರು. ಇವರ ಬಾಲ್ಯದ ಹೆಸರು ನವೀನ್ ಕುಮಾರ್ ಗೌಡ. ಇವರ ತಂದೆ ಬೆಂಗಳೂರು `ಬಿಎಂಟಿಸಿ’ಯಲ್ಲಿ ಚಾಲಕರಾಗಿ ಕೆಲಸ ಮಾಡುತ್ತಿದ್ದರು. ಎಲ್‌ಕೆಜಿಯಿಂದ ಕಾಲೇಜಿನವರೆಗೆ ಮೈಸೂರಿನ ಮಹಾವೀರ್ಸಂ ಸ್ಥೆಯಲ್ಲಿ ವಿಧ್ಯಾಭ್ಯಾಸವನ್ನು ಮುಗಿಸಿದ ಯಶ್ ತಮ್ಮ ಹದಿನೇಳನೆ ವಯಸ್ಸಿನಲ್ಲಿಯೇ ಕುಟುಂಬಕ್ಕೆ ಸಹಾಯವಾಗಲು ಪಿಯುಸಿಗೆ ಗುಡ್‌ಬೈ ಹೇಳಿ ಕೆಲಸ ಮಾಡಲು ಪ್ರಾರಂಭಿಸಿದರು. `ನವೀನ್ ಪ್ರಾವಿಜನ್ ಸ್ಟೋರ್’ ಎಂಬ ತಮ್ಮದೇ ಸ್ಟೋರ್ ತೆಗೆದು ಕುಟುಂಬದ ಜವಾಬ್ದಾರಿ ವಹಿಸಿಕೊಂಡರು.
ಇಂದು ಯಶ್ 39ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ. ನವೀನ್‌ಕುಮಾರ್ ಗೌಡ ಆಗಿ ಹುಟ್ಟಿದ ಯಶ್, ಇಂದ ರಾಕಿಂಗ್ ಸ್ಟಾರ್ ಆಗಿ ಅಸಂಖ್ಯಾತ ಅಭಿಮಾನಿಗಳ ಆರಾಧ್ಯ ದೈವ ಎನಿಸಿಕೊಂಡಿದ್ದಾರೆ. KGF ರೀತಿಯ ಸೆನ್ಸೇಷನ್ ಸಿನಿಮಾದಿಂದ ದೇಶ ವಿದೇಶದಲ್ಲೂ ರಾಕಿ ಭಾಯ್ ಆಗಿ ಚಿರಪರಿಚಿತರಾಗಿದ್ದಾರೆ. ಯಶ್ ಕಾಲ್‌ಶೀಟ್‌ಗಾಗಿ ಪರಭಾಷಾ ನಿರ್ಮಾಪಕರು ಕ್ಯೂ ನಿಂತಿದ್ದಾರೆ. ಕೇವಲ 18 ಸಿನಿಮಾಗಳಲ್ಲಿ ನಟಿಸಿ, ಸೂಪರ್ ಸ್ಟಾರ್ ಪಟ್ಟಕ್ಕೇರಿದ್ದಾರೆ. ನ್ಯಾಷನಲ್ ಸ್ಟಾರ್ ಆಗಿ ಮೆರೆಯುತ್ತಿದ್ದಾರೆ. ಒಂದೇ ಒಂದು ಸಿನಿಮಾದಿಂದ ಇಡೀ ಭಾರತೀಯ ಚಿತ್ರರಂಗ ಮತ್ತೊಮ್ಮೆ ಸ್ಯಾಂಡಲ್‌ವುಡ್‌ನತ್ತ ತಿರುಗಿ ನೋಡುವಂತೆ ಮಾಡಿದ್ದಾರೆ.
ಕಿರುತೆರೆ ಮೂಲಕ ಬಣ್ಣದ ಬದುಕು ಆರಂಭ
ಯಶ್ ಅವರು ಕಿರುತೆರೆ ಮೂಲಕ ಬಣ್ಣದ ಬದುಕು ಆರಂಭಿಸಿದವರು. ಅವರು ಮೊದಲು ನಟಿಸಿದ ಧಾರಾವಾಹಿ ‘ನಂದ ಗೋಕುಲ’. ಈ ಧಾರಾವಾಹಿಯಲ್ಲಿ ರಾಧಿಕಾ ಪಂಡಿತ್ ಕೂಡ ನಟಿಸಿದ್ದರು. ‘ಮಳೆ ಬಿಲ್ಲು’ ಹಾಗೂ ‘ಪ್ರೀತಿ ಇಲ್ಲದ ಮೇಲೆ’ ಧಾರಾವಾಹಿಗಳಲ್ಲೂ ಯಶ್ ನಟಿಸಿದ್ದರು.
ಅನಂತರ ‘ಮೊಗ್ಗಿನ ಮನಸು’ ಚಿತ್ರದ ಮೂಲಕ ಹೀರೋ ಆಗಿ ಬಣ್ಣದ ಲೋಕಕ್ಕೆ ಬಂದರು. ಈ ಸಿನಿಮಾ ಸೂಪರ್ ಹಿಟ್ ಆಯಿತು. ಈ ಚಿತ್ರದ ಯಶಸ್ಸಿನ ಬೆನ್ನಲ್ಲೇ ಯಶ್‌ಗೆ ಹಲವು ಆಫರ್ಗಳು ಬಂದವು. ‘ಕಿರಾತಕ’ ಸಿನಿಮಾ ಯಶ್ ವೃತ್ತಿಜೀವನಕ್ಕೆ ಮೈಲೇಜ್ ನೀಡಿತು. 2013ರಲ್ಲಿ ಯಶ್ ಡಬಲ್ ಹಿಟ್ ನೀಡಿದರು. ಅವರ ‘ಗೂಗ್ಲಿ’ ಹಾಗೂ ‘ರಾಜಾಹುಲಿ’ ಚಿತ್ರಗಳು ಯಶಸ್ಸು ಕಂಡವು. ‘ಮಿಸ್ಟರ್ ಆ್ಯಂಡ್ ಮಿಸಸ್ ರಾಮಾಚಾರಿ’, ‘ಮಾಸ್ಟರ್ ಪೀಸ್’ ಚಿತ್ರಗಳು ಕೂಡ ಗೆದ್ದವು.
ರಾಕಿಂಗ್ ಸ್ಟಾರ್‌ನಿಂದ ಪ್ಯಾನ್ ಇಂಡಿಯಾ ಸ್ಟಾರ್
2017ರಿಂದ ಇಲ್ಲಿಯವರೆಗೆ ಯಶ್ ನಟನೆಯ ಎರಡು ಸಿನಿಮಾಗಳು ಮಾತ್ರ ತೆರೆಗೆ ಬಂದಿವೆ. ಅದು ‘ಕೆಜಿಎಫ್’ (2018) ಹಾಗೂ ‘ಕೆಜಿಎಫ್ 2’ (2022). ಇದರಿಂದ ಯಶ್ ಖ್ಯಾತಿ ಸಾಕಷ್ಟು ಹೆಚ್ಚಿದೆ. ‘ಕೆಜಿಎಫ್ 2’ ಚಿತ್ರದಿಂದ ಯಶ್ ಖ್ಯಾತಿ ವಿಶ್ವಮಟ್ಟಕ್ಕೆ ಹಬ್ಬಿದೆ. ಯಶ್‌ಗೆ ವಿದೇಶದಲ್ಲೂ ಅಭಿಮಾನಿ ಬಳಗ ಸೃಷ್ಟಿ ಆಗಿದೆ. ಅವರ ಬರ್ತ್ಡೇಗೆ ವಿದೇಶದಿಂದಲೂ ಶುಭಾಶಯ ಬರುತ್ತಿದೆ.
ಈಗ ಅವರು ‘ಟಾಕ್ಸಿಕ್’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದು, ಈ ಹಿನ್ನಲೆಯಲ್ಲಿಯೇ ಯಶ್ ಅವರು ಅಭಿಮಾನಿಗಳಿಗೆ ಒಂದು ಮುಖ್ಯವಾದ ಸಂದೇಶವನ್ನು ನೀಡಿದ್ದಾರೆ.ಯಾವುದೇ ಆಡಂಬರ ಇಲ್ಲದೇ ತಮ್ಮ ಜನ್ಮದಿನವನ್ನು ಆಚರಿಸುವಂತೆ ಯಶ್ ಅವರು ತಮ್ಮ ಅಭಿಮಾನಿಗಳ ಬಳಿ ಕೇಳಿಕೊಂಡಿದ್ದಾರೆ.
ಈ ಸುದ್ದಿಯನ್ನೂ ಓದಿ: ಬಾಲಿವುಡ್ ನಿರ್ಮಾಪಕ ಯಶ್ ಚೋಪ್ರಾ ಪತ್ನಿ ನಿಧನ