Thursday, 19th September 2024

ಪಿಕಪ್ ವ್ಯಾನ್‍ಗೆ ವಿದ್ಯುತ್‌ ಸ್ಪರ್ಶ: 10 ಯಾತ್ರಿಗಳ ಸಾವು

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಕೂಚ್ ಬೆಹಾರ್‍ನಲ್ಲಿ ಶಿವಭಕ್ತರನ್ನು ಹೊತ್ತೊ ಯ್ಯುತ್ತಿದ್ದ ಪಿಕಪ್ ವ್ಯಾನ್‍ಗೆ ವಿದ್ಯುತ್‌ ಸ್ಪರ್ಶ ಗೊಂಡು 10 ಯಾತ್ರಿಗಳು ಮೃತಪಟ್ಟು, 19 ಮಂದಿ ಗಾಯಗೊಂಡಿದ್ದಾರೆ.

ಘಟನೆಯಲ್ಲಿ ಗಾಯಗೊಂಡ ಎಲ್ಲರನ್ನು ಚಂಗ್ರಬಂಧ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಈ ಪೈಕಿ 16 ಜನರನ್ನು ಹೆಚ್ಚಿನ ಚಿಕಿತ್ಸೆಗಾಗಿ ವೈದ್ಯರು ಜಲ್ಪೈಗುರಿ ಆಸ್ಪತ್ರೆಗೆ ಶಿಫಾರಸ್ಸು ಮಾಡಿದ್ದಾರೆ. ವಾಹನದಲ್ಲಿದ್ದ ಡಿಜೆ ಸಿಸ್ಟಂನ ಜನರೇಟರ್‍ನ ವೈರಿಂಗ್‍ನಿಂದ ವಿದ್ಯುಘಾತ ಉಂಟಾಗಿ ಈ ಘಟನೆ ಸಂಭವಿಸಿರ ಬಹುದು.

ಮಧ್ಯರಾತ್ರಿ, ಮೇಖ್ಲಿಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯ ಧಾರ್ಲಾ ಸೇತುವೆ ಯಲ್ಲಿ ಘಟನೆಯೊಂದು ನಡೆದಿದೆ, ಜಲಪೇಶ್‍ಗೆ ತೆರಳು ತ್ತಿದ್ದ ಕನ್ವಾರಿಯಾ ಗಳನ್ನು ಹೊತ್ತೊಯ್ಯುತ್ತಿದ್ದ ಪಿಕ್‍ಅಪ್ ವ್ಯಾನ್‍ಗೆ ವಿದ್ಯುತ್ ಸ್ಪರ್ಶವಾಗಿದೆ. ವಿಚಾರಣೆಯ ಪ್ರಕಾರ, ಡಿಜೆ ಸಿಸ್ಟಂನ ಜನರೇಟರ್ ಅನ್ನು ವಾಹನದ ಹಿಂಭಾಗದಲ್ಲಿ ಅಳವಡಿಸಲಾಗಿದೆ ಎಂದು ಮಠಭಂಗ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅಮಿತ್ ವರ್ಮಾ ತಿಳಿಸಿದ್ದಾರೆ.

ಎಲ್ಲಾ ಪ್ರಯಾಣಿಕರು ಸ್ಟಾಲ್ಕುಚಿ ಪೊಲೀಸ್ ಠಾಣೆ ವ್ಯಾಪ್ತಿಗೆ ಸೇರಿದವರಾಗಿದ್ದು, ಘಟನೆಯ ಬಗ್ಗೆ ಅವರ ಕುಟುಂಬಗಳಿಗೆ ತಿಳಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.