Saturday, 23rd November 2024

ಪುಟಿದೆದ್ದಿದೆ ಷೇರುಪೇಟೆ ಸೆನ್ಸೆಕ್ಸ್: 600 ಪಾಯಿಂಟ್ಸ್‌ ಏರಿಕೆ

ಮುಂಬೈ : ಹೂಡಿಕೆದಾರರನ್ನ ಚಿಂತೆಗೀಡುಮಾಡಿದ್ದ ಮುಂಬೈ ಷೇರುಪೇಟೆ ಸೆನ್ಸೆಕ್ಸ್ 600ಕ್ಕೂ ಅಧಿಕ ಪಾಯಿಂಟ್ಸ್‌ ಏರಿಕೆ ಪುಟಿದೆದ್ದಿದೆ.

ರಾಷ್ಟ್ರೀಯ ಷೇರುಪೇಟೆ ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 171.25 ಪಾಯಿಂಟ್ಸ್ ಏರಿಕೆಗೊಂಡು 11,449.25 ಪಾಯಿಂಟ್ಸ್‌ ದಾಖಲಿ ಸಿದೆ. ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ 646.40 ಪಾಯಿಂಟ್ಸ್ ಏರಿಕೆಗೊಂಡು 38,840.32 ಪಾಯಿಂಟ್ಸ್‌ ಗಳಿಸಿದೆ.

ಸೆನ್ಸೆಕ್ಸ್ ಪುಟಿದೇಳಲು ಪ್ರಮುಖವಾಗಿ ಕಾರಣವಾದ ರಿಲಯನ್ಸ್ ಇಂಡಸ್ಟ್ರೀಸ್ ಶೇ 7 ಕ್ಕಿಂತ ಹೆಚ್ಚು ಏರಿಕೆಯಾಗುವ ಮೂಲಕ 200 ಬಿಲಿಯನ್ ಡಾಲರ್ ಮಾರುಕಟ್ಟೆ ಬಂಡವಾಳ ಮೌಲ್ಯ ತಲುಪಿದ ಭಾರತದ ಮೊದಲ ಕಂಪನಿಯೆನಿಸಿದೆ.

ರಿಲಯನ್ಸ್, ಬಿಪಿಸಿಎಲ್, ಅದಾನಿ ಎಂಟರ್‌ಪ್ರೈಸಸ್, ಐಡಿಎಫ್‌ಸಿ ಫಸ್ಟ್‌ ಬ್ಯಾಂಕ್, ಏಷ್ಯನ್ಸ್ ಪೈಂಟ್ಸ್, ಹೆಚ್‌ಪಿಸಿಎಲ್, ಗ್ರೇಸಿಯಂ, ಐಒಸಿ, ಆಯಕ್ಸಿಸ್ ಬ್ಯಾಂಕ್ ಶೇಕಡಾ 3ಕ್ಕೂ ಅಧಿಕ ಏರಿಕೆ ದಾಖಲಿಸಿದೆ.

ನಷ್ಟ ಅನುಭವಿಸಿದ ಷೇರುಗಳು:

ಟಾಟಾ ಸ್ಟೀಲ್, ಭಾರ್ತಿ ಏರ್‌ಟೆಲ್, ಕೋಟಕ್ ಮಹೀಂದ್ರಾ, ಟೈಟಾನ್ ಕಂಪನಿ, ಹೆಚ್‌ಡಿಎಫ್‌ಸಿ ಬ್ಯಾಂಕ್, ಟೆಕ್ ಮಹೀಂದ್ರಾ, ಹೆಚ್‌ಸಿಎಲ್‌ ಟೆಕ್, ಸನ್‌ ಫಾರ್ಮಾ, ಬಜಾಜ್ ಆಟೋ