Friday, 13th December 2024

ಕುರ್ಲಾ ಕಾಂಪ್ಲೆಕ್ಸ್‌ನಲ್ಲಿ ಆಪಲ್‌ನ ಮೊದಲ ಚಿಲ್ಲರೆ ಅಂಗಡಿ ಆರಂಭ

ಮುಂಬೈ: ಮಂಗಳವಾರ ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನಲ್ಲಿ ಭಾರತದಲ್ಲಿ ಆಪಲ್‌ನ ಮೊದಲ ಚಿಲ್ಲರೆ ಅಂಗಡಿಯನ್ನು ತೆರೆಯಲಾಗಿದೆ. ಅಭಮಾನಿಗಳು ಕ್ಯೂನಲ್ಲಿ ನಿಂತು ಕಾಯುತ್ತಿರುವ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿವೆ.

ಆಪಲ್ ಸಿಇಒ ಟಿಮ್ ಕುಕ್ ನೂತನ ಅಂಗಡಿಯ ಗ್ರಾಹಕರು, ಅಭಿಮಾನಿಗಳನ್ನು ಸ್ವಾಗತಿಸಿದರು. ಭಾರತದಲ್ಲಿ ಆಪಲ್‌ನ ಎರಡನೇ ಚಿಲ್ಲರೆ ಅಂಗಡಿ ಗುರುವಾರ ದೆಹಲಿ ಯಲ್ಲಿ ಪ್ರಾರಂಭವಾಗಲಿದೆ.

ಭಾರತದಲ್ಲಿ ಆಪಲ್‌ನ ಎರಡು ಚಿಲ್ಲರೆ ಅಂಗಡಿಗಳ ಪ್ರಾರಂಭವು ಹೆಚ್ಚು ಸಾರ್ವಜನಿಕ ಉತ್ಸಾಹವನ್ನು ಉಂಟುಮಾಡಿದೆ ವಿಶೇಷವಾಗಿ ಟೆಕ್ ದೈತ್ಯ ಉತ್ಪನ್ನಗಳ ಬಳಕೆದಾರರಲ್ಲಿ. ಮಳಿಗೆಯ ಅದ್ಧೂರಿ ಉದ್ಘಾಟನೆಯಲ್ಲಿ ಪಾಲ್ಗೊಳ್ಳಲು ಜನರು ಗುಜರಾತ್‌ನಿಂದಲೂ ಬಂದಿದ್ದಾರೆ.