ಪುಣೆ: ಪುಣೆಯ ಐವರ ವಿರುದ್ಧ ಅಪಹರಣ ಹಾಗೂ ಸುಲಿಗೆ ಪ್ರಕರಣದಲ್ಲಿ ದಾಖಲಾದ ಎಫ್‌ಐಆರ್ ವಜಾ ಗೊಳಿಸಬೇಕಾದಲ್ಲಿ ಆರು ತಿಂಗಳು ಪ್ರತಿ ತಿಂಗಳ ಎರಡು ಭಾನುವಾರ ವೃದ್ಧಾಶ್ರಮದಲ್ಲಿ ಕೆಲಸ ಮಾಡಲು ಬಾಂಬೆ ಹೈಕೋರ್ಟ್ ಆದೇಶ ನೀಡಿದೆ.
ಪುಣೆಯ 30 ವರ್ಷ ವಯಸ್ಸಿನ ವ್ಯಕ್ತಿಯೊಬ್ಬರೊಂದಿಗೆ ಸ್ನೇಹ ಬೆಳೆಸಿಕೊಂಡ ಆಪಾದಿತರು ತಮ್ಮದೊಂದು ಆನ್ಲೈನ್ ಬೆಟ್ಟಿಂಗ್ ಗೇಮ್‌ಗಳಲ್ಲಿ ಭಾಗಿ ಯಾಗಲು ಆಹ್ವಾನಿಸಿದ್ದಾರೆ. ತಮ್ಮ ಬಳಿ ಒಂದು ಮೊತ್ತ ಹೂಡಿಕೆ ಮಾಡಿದಲ್ಲಿ ದೊಡ್ಡ ಮಟ್ಟದ ರಿಟರ್ನ್ಸ್ ಪಕ್ಕಾ ಸಿಗುತ್ತದೆ ಎಂದು ನಂಬಿಸಿದ್ದಾರೆ. ಒಪ್ಪಿದ ಆಪಾದಿತ ಒಂದು ಮೊತ್ತ ಹೂಡಿಯೂ ಬಿಟ್ಟಿದ್ದಾನೆ.
ಬೆಟ್ಟಿಂಗ್ ಅಪ್ಲಿಕೇಶನ್‌ನಲ್ಲಿ ಸಂತ್ರಸ್ತನ ಪರವಾಗಿ 30,000 ಪಾಯಿಂಟ್‌ಗಳನ್ನು ಗೆದ್ದು, ಇದಕ್ಕೆ ಪ್ರತಿಯಾಗಿ ಆತನಿಂದ 30 ಲಕ್ಷ ರೂ.ಗಳ ಬೇಡಿಕೆ ಇಟ್ಟಿ ದ್ದಾರೆ. ತನ್ನ ಬಳಿ ಅಷ್ಟು ದುಡ್ಡಿಲ್ಲವೆಂದು ಸಂತ್ರಸ್ತನನ್ನು ಅಪಹರಣ ಮಾಡಿ ಆತನ ಮೇಲೆ ಹಲ್ಲೆ ಮಾಡಿದ್ದಾರೆ ಆಪಾದಿತರು.
ಇದರ ಬೆನ್ನಿಗೇ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ ಸಂತ್ರಸ್ತ, ಆಪಾದಿತರ ವಿರುದ್ಧ ಪುಣೆಯ ವನ್ವಾಡಿ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.
ಹೈಕೋರ್ಟ್‌ನಲ್ಲಿ ವಿಚಾರಣೆ ವೇಳೆ, ಎಫ್‌ಐಆರ್‌ನಿಂದಾಗಿ ತಮಗೆ ಕೆಲಸ ಕಳೆದುಕೊಳ್ಳುವಂತೆ ಆಗಿದೆ ಎಂದು ಆಪಾದಿತರೊಬ್ಬರು ಹೇಳಿದ್ದು, ಬೇರೆ ಕೆಲಸ ಹುಡುಕುವುದು ಕಷ್ಟವಾಗಿದೆ ಎಂದಿದ್ದಾರೆ.
ಅರ್ಜಿದಾರರು ಯುವಕರಾಗಿದ್ದು, ತಮ್ಮ ವೃತ್ತಿಜೀವನವನ್ನು ಹೊಸದಾಗಿ ಪ್ರಾರಂಭಿಸಲು ಬಯಸುತ್ತಾರೆ ಹಾಗೂ ಇದಕ್ಕಾಗಿ ಹಿಂದಿನದನ್ನು ಮರೆತು ಜೀವನದಲ್ಲಿ ನೆಲೆಗೊಳ್ಳಲು ಅವಕಾಶ ಕೊಡುವುದು ಸೂಕ್ತ” ಎಂದು ಪೀಠ ತಿಳಿಸಿದೆ.
ಆರು ತಿಂಗಳ ಅವಧಿಗೆ ಪ್ರತಿ ತಿಂಗಳ ಮೊದಲ ಮತ್ತು ಮೂರನೇ ಭಾನುವಾರದಂದು ಪುಣೆಯಲ್ಲಿರುವ ವೃದ್ಧಾಶ್ರಮಕ್ಕೆ ಹಾಜರಾಗುವಂತೆ ನ್ಯಾಯಾ ಲಯವು ಐದು ಆರೋಪಿ ಅರ್ಜಿದಾರರು ಮತ್ತು ದೂರುದಾರರಿಗೆ ತಿಳಿಸಿದೆ.