Sunday, 16th June 2024

ರಾಜ್ಯಸಭೆಯ ಮಾಜಿ ಸದಸ್ಯ ಚಂದ್ರನ್ ಮಿತ್ರಾ ನಿಧನ

ದೆಹಲಿ: ಹಿರಿಯ ಪತ್ರಕರ್ತ, ರಾಜ್ಯಸಭೆಯ ಮಾಜಿ ಸದಸ್ಯ ಚಂದ್ರನ್ ಮಿತ್ರಾ(65) ಅವರು ಬುಧವಾರ ತಡರಾತ್ರಿ ದೆಹಲಿಯಲ್ಲಿ ನಿಧನರಾದರು.

‘ದಿ ಪಯೋನಿರ್’​ ಪತ್ರಿಕೆ ಸಂಪಾದಕರಾಗಿದ್ದ ಚಂದ್ರನ್​ ಮಿತ್ರಾ, ಕಳೆದ ಜೂನ್​ನಲ್ಲಿ ಹುದ್ದೆಗೆ ರಾಜೀನಾಮೆ ನೀಡಿದ್ದರು. ಆಂಗ್ಲಭಾಷೆ ಮೇಲೆ ಹಿಡಿತ ಸಾಧಿಸಿದ್ದ ಚಂದನ್​, ರಾಜಕೀಯ ವರದಿಗಾರಿಕೆಯಲ್ಲಿ ಪಳಗಿದ್ದರು. ತಮ್ಮ ವರದಿಗಾರಿಕೆಯಿಂದಲೇ ಹೆಚ್ಚು ಪ್ರಸಿದ್ಧಿ ಪಡೆದಿದ್ದರು. ಎರಡು ಬಾರಿ ಬಿಜೆಪಿ ಸಂಸದರಾಗಿ ಆಯ್ಕೆ ಯಾಗಿದ್ದರು.

ಬಿಜೆಪಿಯಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದ ಚಂದನ್​ ಮಿತ್ರ 2018ರಲ್ಲಿ ತೃಣಮೂಲ ಕಾಂಗ್ರೆಸ್ ಸೇರಿದ್ದರು. ಚಂದನ್​ಮಿತ್ರಾ ಮೂಲತಃ ಪಶ್ಚಿಮ ಬಂಗಾಳದ ಹೌರಾ​​ನವರು. ದೆಹಲಿಯ ಪತ್ರಿಕೆಯೊಂದರ ಸಂಪಾದಕ ರಾಗಿದ್ದರು. ಬಿಜೆಪಿ ಪಕ್ಷದ ರಾಜ್ಯಸಭಾ ಸದಸ್ಯರಾಗಿ 2010ರಲ್ಲಿ ಮಧ್ಯಪ್ರದೇಶದಿಂದ ಆಯ್ಕೆಯಾಗಿದ್ದರು. 2016ರವರೆಗೆ ರಾಜ್ಯಸಭಾ ಎಂಪಿಯಾಗಿ ಮುಂದುವರಿದು ನಂತರ ಬಿಜೆಪಿ ತೊರೆದಿದ್ದರು.

ಅವರು ಮಾಧ್ಯಮ ಹಾಗೂ ರಾಜಕೀಯ ಜಗತ್ತಿನಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡರು. ಅವರ ನಿಧನ ಸುದ್ದಿ ನೋವುಂಟು ಮಾಡಿದೆ. ಓಂ ಶಾಂತಿ’ ಎಂದು ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ.

ಚಂದ್ರನ್ ಮಿತ್ರಾ ನಿಧನಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ಕಂಬನಿ ಮಿಡಿದಿದ್ದಾರೆ.

Leave a Reply

Your email address will not be published. Required fields are marked *

error: Content is protected !!