Wednesday, 11th December 2024

ಹಳೆಯ ಕಟ್ಟಡ ಕುಸಿತ: ಕಾರ್ಮಿಕರು ಸಿಲುಕಿರುವ ಶಂಕೆ…!

ಚೆನ್ನೈ : ನಿರ್ಮಾಣ ಹಂತದಲ್ಲಿದ್ದ ಹಳೆಯ ಕಟ್ಟಡವೊಂದು ಕುಸಿದ ಪರಿಣಾಮ ಕೆಲವು ಕಾರ್ಮಿಕರು ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ.

ಚೆನ್ನೈನ ಪ್ಯಾರಿಸ್ ಕಾರ್ನರ್ ಬಳಿಯ ಅರ್ಮೇನಿಯನ್ ಸ್ಟ್ರೀಟ್ನಲ್ಲಿ ಈ ಘಟನೆ ನಡೆದಿದೆ.

ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಗ್ನಿಶಾಮಕ ಮತ್ತು ಪಾರುಗಾಣಿಕಾ ಮತ್ತು ಪೊಲೀಸರು ಸೇರಿದಂತೆ ಅನೇಕ ಸರ್ಕಾರಿ ಸಂಸ್ಥೆಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ.

‘ಇದೀಗ ನಮ್ಮ ಆದ್ಯತೆ ಅವಶೇಷಗಳನ್ನ ತೆರವುಗೊಳಿಸುವುದು ಮತ್ತು ಯಾರಾದರೂ ಅವಶೇಷಗಳ ಅಡಿಯಲ್ಲಿ ಸಿಕ್ಕಿಬಿದ್ದಿದ್ದಾ ರೆಯೇ ಎಂದು ನೋಡುವುದು. ಸ್ಥಳೀಯರು ನೀಡಿದ ಮಾಹಿತಿಯ ಪ್ರಕಾರ, ಕೆಲವು ಜನರು ಅವಶೇಷಗಳ ಅಡಿಯಲ್ಲಿದ್ದಾರೆ ಮತ್ತು ಅವರನ್ನ ರಕ್ಷಿಸಲು ಶೋಧ ಕಾರ್ಯಾಚರಣೆ ನಡೆಯುತ್ತಿದೆ’ ಎಂದು ಚೆನ್ನೈ ಕಾರ್ಪೊ ರೇಷನ್ನ ಪ್ರಧಾನ ಕಾರ್ಯದರ್ಶಿ ಮತ್ತು ಆಯುಕ್ತ ಗಗನ್ದೀಪ್ ಸಿಂಗ್ ಬೇಡಿ ತಿಳಿಸಿದ್ದಾರೆ.