Saturday, 27th July 2024

ಗುಜರಾತ್ ವಿಧಾನಸಭೆ: ಕಾಂಗ್ರೆಸ್ 43 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ

ಅಹಮದಾಬಾದ್: ಗುಜರಾತ್ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ 43 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ.

43 ಅಭ್ಯರ್ಥಿಗಳ ಪೈಕಿ 32 ಮಂದಿ ಹೊಸ ಮುಖಗಳು ಎಂದು ಪಕ್ಷ ಹೇಳಿದೆ. ವಡೋದರ ದಂತಹ ನಗರಗಳಲ್ಲಿ ಕಾಂಗ್ರೆಸ್ ಮೊದಲ ಬಾರಿಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.

ಪ್ರಮುಖವಾಗಿ ರಾಜ್ಯಸಭಾ ಸದಸ್ಯ ಅಮೀ ಯಾಜ್ಞಿಕ್ ಅವರು ಬಿಜೆಪಿಯ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ವಿರುದ್ಧ ಬಿಜೆಪಿ ಭದ್ರಕೋಟೆಯಾದ ಅಹಮದಾಬಾದ್‌ನ ಘಟ್ಲೋಡಿಯಾ ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ. 2017 ರ ಚುನಾವಣೆಯಲ್ಲಿ ಪಟೇಲ್ ಅವರು ಅತಿ ಹೆಚ್ಚು ಅಂತರದಿಂದ ಗೆದ್ದಿದ್ದರು. ಪಟ್ಟಿಯಲ್ಲಿರುವ ಇತರ ಪ್ರಮುಖ ಹೆಸರುಗಳಲ್ಲಿ ಭಾವನಗರದ ಮಹುವಾ ಕ್ಷೇತ್ರದಿಂದ ಕನುಭಾಯಿ ಕಲ್ಸಾರಿಯಾ ಸೇರಿದ್ದಾರೆ. ಅವರು ಬಿಜೆಪಿ ಶಾಸಕರಾಗಿದ್ದಾಗ 2012 ರಲ್ಲಿ ನಿರ್ಮಾ ಸ್ಥಾವರದ ವಿರುದ್ಧ ನಡೆಸಿದ್ದ ಆಂದೋ ಲನಕ್ಕೆ ಹೆಸರುವಾಸಿಯಾಗಿದ್ದಾರೆ.

ಗುಜರಾತ್ ಕಾಂಗ್ರೆಸ್ ನ ಮಾಜಿ ಅಧ್ಯಕ್ಷ ಅರ್ಜುನ್ ಮೊದ್ವಾಡಿಯಾ ಪೋರ್ ಬಂದರ್ ಕ್ಷೇತ್ರದಿಂದ ಮತ್ತೊಮ್ಮೆ ಸ್ಪರ್ಧಿಸಲಿದ್ದಾರೆ. ಈ ಕ್ಷೇತ್ರದಿಂದ ಬಿಜೆಪಿ ನಾಯಕ ಬಾಬುಭಾಯ್ ಬೋಖಿರಿಯಾ ವಿರುದ್ಧ ಸತತ ಎರಡು ಚುನಾವಣೆಗಳಲ್ಲಿ ಸೋತಿದ್ದಾರೆ.

error: Content is protected !!