Saturday, 27th July 2024

ಕ್ರಿಪ್ಟೋಕರೆನ್ಸಿ ಕಾನೂನಬದ್ಧ ಕರೆನ್ಸಿಯಾಗುವುದಿಲ್ಲ: ಟಿ.ವಿ.ಸೋಮನಾಥನ್

ನವದೆಹಲಿ: ಕ್ರಿಪ್ಟೋಕರೆನ್ಸಿ ಎಂದಿಗೂ ಕಾನೂನಬದ್ಧ ಕರೆನ್ಸಿಯಾಗುವುದಿಲ್ಲ ಎಂದು ಹಣಕಾಸು ಕಾರ್ಯದರ್ಶಿ ಟಿ.ವಿ.ಸೋಮನಾಥನ್, ಖಾಸಗಿ ಡಿಜಿಟಲ್ ಕರೆನ್ಸಿಗಳ ಕಾನೂನುಬದ್ಧತೆಯ ವದಂತಿಗೆ ತೆರೆ ಎಳೆದಿದ್ದಾರೆ.

ಚಿನ್ನ ಹಾಗೂ ವಜ್ರಗಳಂತೆ ವೌಲ್ಯವನ್ನು ಹೊಂದಿದ್ದರೂ ಕ್ರಿಪ್ಟೋ ಕಾನೂನುಬದ್ಧ ಕರೆನ್ಸಿ ಅಲ್ಲ. ಖಾಸಗಿ ಕ್ರಿಪ್ಟೋಕರೆನ್ಸಿಗಳು ಎಂದಿಗೂ ಕಾನೂನುಬದ್ಧ ಕರೆನ್ಸಿ ಆಗದು ಎಂದು ಹೇಳಿದ್ದಾರೆ.

ಕಾನೂನು ಪ್ರಕಾರ, ಕಾನೂನಬದ್ಧ ಕರೆನ್ಸಿ ಎಂದರೆ ಸಾಲಗಳ ಇತ್ಯರ್ಥದಲ್ಲಿ ಅದನ್ನು ಸ್ವೀಕರಿಸಲು ಸಾಧ್ಯ ವಾಗಬೇಕು. ಭಾರತ ಕ್ರಿಪ್ಟೊಕರೆನ್ಸಿಯನ್ನು ಎಂದಿಗೂ ಕಾನೂನುಬದ್ಧ ಕರೆನ್ಸಿಯಾಗಿ ಮಾಡುತ್ತಿಲ್ಲ. ರಿಸರ್ವ್ ಬ್ಯಾಂಕ್‌ನ ಡಿಜಿಟಲ್ ರೂಪಾಯಿ ಮಾತ್ರ ಭಾರತದಲ್ಲಿ ಕಾನೂನುಬದ್ಧ ಕರೆನ್ಸಿ ಎಂದು ಹೇಳಿದ್ದಾರೆ.

error: Content is protected !!