ನವದೆಹಲಿ: ರಾಜಧಾನಿ ದೆಹಲಿಯ ಇಸ್ರೇಲ್ ರಾಯಭಾರ ಕಚೇರಿ ಬಳಿ ಶುಕ್ರವಾರ ಕಡಿಮೆ ತೀವ್ರತೆಯ ಐಇಡಿ ಸ್ಫೋಟ ಗೊಂಡಿದ್ದು, ಐದರಿಂದ ಆರು ವಾಹನಗಳು ಜಖಂಗೊಂಡಿವೆ ಎಂದು ವರದಿಯಾಗಿದೆ.
ದೆಹಲಿಯ ಔರಂಗಜೇಬ್ ರಸ್ತೆಯಲ್ಲಿರುವ ಇಸ್ರೇಲ್ ರಾಯಭಾರ ಕಚೇರಿಯಿಂದ ಕೆಲವೇ ದೂರದಲ್ಲಿ ಸ್ಫೋಟ ಸಂಭವಿಸಿದ್ದು, ಯಾವುದೇ ಸಾವು, ನೋವು ಸಂಭವಿಸಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. ಘಟನಾ ಸ್ಥಳಕ್ಕೆ ಬಾಂಬ್ ನಿಷ್ಕ್ರಿಯ ದಳ ಹಾಗೂ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.
ದೆಹಲಿ ಪೊಲೀಸರ ವಿಶೇಷ ಸೆಲ್, ಕ್ರೈಂ ಬ್ರಾಂಚ್ ನ ಅಧಿಕಾರಿಗಳು ಸೇರಿದಂತೆ ಗುಪ್ತಚರ ವಿಭಾಗದ ಹಲವು ಹಿರಿಯ ಅಧಿಕಾರಿಗಳು ಘಟನಾ ಸ್ಥಳಕ್ಕೆ ಆಗಮಿಸಿ, ಸ್ಫೋಟದ ತನಿಖೆ ನಡೆಸಿದ್ದಾರೆ.
ಕಚೇರಿ ಬಳಿ ಇರುವ ಫುಟ್ ಪಾತ್ ಬಳಿ ಸ್ಫೋಟ ಸಂಭವಿಸಿದ್ದು, ಘಟನ ಸಮೀಪದಲಿದ್ದ ಹಲವು ಕಾರುಗಳ ವಿಂಡ್ ಸ್ಕ್ರೀನ್ ಗಳಿಗೆ ಹಾನಿಯಾಗಿದೆ. ಇದುವರೆಗೆ ಯಾವುದೇ ಗಾಯಾಳುಗಳ ಕುರಿತು ವರದಿಯಾಗಿಲ್ಲ.