Sunday, 23rd June 2024

ಕರ್ನಾಟಕದಲ್ಲಿ ಕೈ ಗೆಲುವು, ಮೋದಿಗೆ ಆದ ಸೋಲು: ಜೈರಾಮ್‌ ರಮೇಶ್‌

ವದೆಹಲಿ: ಕರ್ನಾಟಕದಲ್ಲಿ ಕಾಂಗ್ರೆಸ್‌ ಪಕ್ಷದ ಗೆಲುವು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆದ ಸೋಲು ಎಂದು ಕಾಂಗ್ರೆಸ್ ಪಕ್ಷವು ಹೇಳಿದೆ.

ಬಿಜೆಪಿ ತನ್ನ ಚುನಾವಣಾ ಪ್ರಚಾರವನ್ನು ‘ಪ್ರಧಾನಿ ಮೇಲಿನ ಜನಾದೇಶ’ ವನ್ನಾಗಿ ಮಾಡಿಕೊಂಡಿತ್ತು ಎಂದು ಜೈರಾಮ್‌ ರಮೇಶ್‌ ಹೇಳಿದ್ದಾರೆ.

‘ಕರ್ನಾಟಕದಲ್ಲಿ ಫಲಿತಾಂಶಗಳು ಹೊರ ಬೀಳುತ್ತಿದ್ದಂತೆಯೇ ಕಾಂಗ್ರೆಸ್ ಗೆದ್ದಿರುವುದು ಮತ್ತು ಪ್ರಧಾನಿ ಸೋತಿರುವುದು ಖಚಿತ ವಾಗಿದೆ. ಬಿಜೆಪಿಯು ತನ್ನ ಚುನಾವಣಾ ಪ್ರಚಾರ ವನ್ನು ಪ್ರಧಾನಿ ಮೇಲಿನ ಜನಾದೇಶ ಮತ್ತು ರಾಜ್ಯಕ್ಕೆ ಅವರ ‘ಆಶೀರ್ವಾದ’ ಎಂದು ತಿಳಿದು ಕೊಂಡಿತು. ಆದರೆ ಅದನ್ನು ತಿರಸ್ಕರಿಸಲಾಗಿದೆ!’ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಟ್ವೀಟ್ ಮಾಡಿದ್ದಾರೆ.

ಕಾಂಗ್ರೆಸ್‌ ಈ ಬಾರಿ ಚುನಾವಣೆಯನ್ನು ಜೀವನೋಪಾಯ ಮತ್ತು ಆಹಾರ ಭದ್ರತೆ, ಬೆಲೆ ಏರಿಕೆ, ರೈತರ ಸಂಕಷ್ಟ, ವಿದ್ಯುತ್ ಪೂರೈಕೆ, ನಿರುದ್ಯೋಗ ಮತ್ತು ಭ್ರಷ್ಟಾಚಾರದಂತಹ ಸ್ಥಳೀಯ ಸಮಸ್ಯೆಗಳ ಮೇಲೆ ಎದುರಿಸಿದೆ ಎಂದು ಹೇಳಿದರು.

ಕರ್ನಾಟಕದಲ್ಲಿ ಮತವು ಬೆಂಗಳೂರಿನಲ್ಲಿ ಆರ್ಥಿಕ ಬೆಳವಣಿಗೆಯನ್ನು ಸಾಮಾಜಿಕ ಸಾಮರಸ್ಯದೊಂದಿಗೆ ಸಂಯೋಜಿಸುವ ಎಂಜಿನ್‌ಗೆ ಆಗಿದೆ’ ಎಂದು ರಮೇಶ್ ಹೇಳಿದರು.

error: Content is protected !!