Saturday, 27th July 2024

ಒಂದು ದೇಶ ಒಂದು ಚುನಾವಣೆ ಕುರಿತು ಶಾಸಕಾಂಗದ್ದು ಅಂತಿಮ ನಿರ್ಧಾರ

ಪುಣೆ: ದೇಶದಲ್ಲಿ ಏಕಕಾಲಕ್ಕೆ ಲೋಕಸಭೆ ಹಾಗೂ ರಾಜ್ಯಸಭೆ ಚುನಾವಣೆ ನಡೆಸಲು ಚುನಾವಣಾ ಆಯೋಗ ಸಿದ್ಧವಿದ್ದು, ಇದರ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳುವುದು ಶಾಸಕಾಂಗಕ್ಕೆ ಬಿಟ್ಟಿದ್ದು ಎಂದು ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತ ರಾಜೀವ್‍ಕುಮಾರ್ ಹೇಳಿದ್ದಾರೆ.

ಪುಣೆಯಲ್ಲಿ ನಡೆದ ಮತದಾರರ ಪರಿಷ್ಕರಣೆ ಪಟ್ಟಿ ಬಿಡುಗಡೆ ವಿಶೇಷ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಒಂದು ದೇಶ ಒಂದು ಚುನಾವಣೆ ಎಂಬುದು ಈಗಾಗಲೇ ಬಹಳ ಚರ್ಚೆಗೆ ಗ್ರಾಸವಾಗಿದೆ. ಆದರೆ, ಲೋಕಸಭೆ ಹಾಗೂ ರಾಜ್ಯಸಭಾ ಚುನಾವಣೆ ಯನ್ನು ಏಕಕಾಲದಲ್ಲಿ ನಿಭಾಯಿಸಲು ನಾವು ಸಿದ್ಧರಿದ್ದೇವೆ ಎಂದು ತಿಳಿಸಿದರು.

ರಾಜ್ಯಗಳ ವಿಧಾನಸಭೆ ಚುನಾವಣೆಯನ್ನು ಏಕಕಾಲದಲ್ಲಿ ನಡೆಸುವ ವ್ಯಾಪ್ತಿ ನಮಗೆ ಬರುವುದಿಲ್ಲ. ಶಾಸಕಾಂಗ ಇದರ ಬಗ್ಗೆ ನಿರ್ಧಾರ ಕೈಗೊಳ್ಳಬೇಕಾಗುತ್ತದೆ. ಆದರೆ, ಇದಕ್ಕೆ ಬೃಹತ್ ಸಂಪನ್ಮೂಲ ಬೇಕಾಗುವುದರ ಜತೆಗೆ ಹಲವು ಚಟುವಟಿಕೆಗಳಲ್ಲಿ ಏರು ಪೇರಾಗ ಲಿದೆ ಎಂದು ಅಭಿಪ್ರಾಯಪಟ್ಟರು.

ಕೇಂದ್ರ ಸರ್ಕಾರ ಒಂದು ದೇಶ ಒಂದು ಚುನಾವಣೆ ಬಗ್ಗೆ ಪ್ರಸ್ತಾವನೆ ಮುಂದಿಟ್ಟಿದೆ. ಕಳೆದ 1952, 1957 ಮತ್ತು 1962ರಲ್ಲಿ ಲೋಕ ಸಭೆ ಹಾಗೂ ಎಲ್ಲ ರಾಜ್ಯಗಳ ವಿಧಾನಸಭೆಗೆ ಏಕಕಾಲಕ್ಕೆ ಮತದಾನ ನಡೆದಿತ್ತು. ಆದರೆ, 1968 ಮತ್ತು 69ರಲ್ಲಿ ಹಲವು ರಾಜ್ಯ ಗಳಲ್ಲಿ ವಿಧಾನಸಭೆ ಅವ ಪೂರ್ವ ವಿಸರ್ಜನೆಗೊಂಡಿತ್ತು.

1970ರಲ್ಲೂ ಕೂಡ ನಾಲ್ಕನೆ ಲೋಕಸಭೆ ಅವ ಪೂರ್ವ ವಿಸರ್ಜನೆ ಯಾದ ಹಿನ್ನೆಲೆಯಲ್ಲಿ ಏಕಕಾಲದ ಚುನಾವಣೆಗೆ ತೆರೆ ಬಿದ್ದಿತ್ತು ಎಂದು ಮಾಹಿತಿ ನೀಡಿದರು.

ಏಕಕಾಲದಲ್ಲಿ ಚುನಾವಣೆ ಮಾಡುವುದರಿಂದ ಮಾನವ ಶ್ರಮ, ಸಮಯ ಮತ್ತು ಭಾರೀ ಮೊತ್ತದ ಹಣ ಉಳಿತಾಯವಾಗಲಿದೆ. ಮೂಲ ಸೌಕರ್ಯ, ಸಿಬ್ಬಂದಿ, ರಕ್ಷಣಾ ವೆಚ್ಚ ಕೂಡ ಕಡಿಮೆಯಾಗುವ ಸಾಧ್ಯತೆ ಇದೆ ಎಂದು ಹೇಳಿದರು.

error: Content is protected !!