Wednesday, 11th December 2024

ಟಿಕೆಟ್ ಇಲ್ಲದೆ ರೈಲುಗಳಲ್ಲಿ ಪ್ರಯಾಣ: ರೂ.100 ಕೋಟಿ ದಂಡ ಸಂಗ್ರಹ

ಮುಂಬೈ:  ರೈಲ್ವೇ ಅಧಿಕಾರಿಗಳು ಟಿಕೆಟ್ ಇಲ್ಲದೆ ರೈಲುಗಳಲ್ಲಿ ಪ್ರಯಾಣಿಸುವವರಿಗೆ ಭಾರಿ ದಂಡ ವಿಧಿಸಿದ್ದಾರೆ. ಸೆಂಟ್ರಲ್ ರೈಲ್ವೇ ಟಿಕೆಟ್ ರಹಿತ ರೈಲ್ವೇ ಪ್ರಯಾಣಿಕರಿಂದ ರೂ.100 ಕೋಟಿ ದಂಡ ಸಂಗ್ರಹಿಸಿದೆ ಎಂದು ಬಹಿರಂಗಪಡಿಸಿದೆ.

ಕಳೆದ ವರ್ಷ ಏಪ್ರಿಲ್‌ನಿಂದ ಈ ವರ್ಷದ ಫೆಬ್ರವರಿ ಅಂತ್ಯದವರೆಗೆ ಈ ಮೊತ್ತದ ದಂಡವನ್ನು ಸಂಗ್ರಹಿಸಲಾಗಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.

ಕಡಿಮೆ ಅವಧಿಯಲ್ಲಿ ಅತಿ ಹೆಚ್ಚು ದಂಡ ವಸೂಲಿ ಮಾಡಿದ ವಿಭಾಗ ಎಂಬ ಹೆಗ್ಗಳಿಕೆಗೆ ಮುಂಬೈ ಪಾತ್ರವಾಗಿದೆ.

ಕಳೆದ ವರ್ಷ 60 ಕೋಟಿ ರೂ.ಗಳ ದಂಡ, ಈ ಬಾರಿ ಹೆಚ್ಚುವರಿಯಾಗಿ 40 ಕೋಟಿ ರೂ. ಸಂಗ್ರಹವಾಗಿದೆ. 18 ಲಕ್ಷ ಟಿಕೆಟ್ ರಹಿತ ಪ್ರಯಾಣಿಕರಿಂದ ಈ ಮೊತ್ತ ಸಂಗ್ರಹಿಸಲಾಗಿದೆ. ಮುಂಬೈ ವಿಭಾಗದ ಅಡಿಯಲ್ಲಿ ಉಪನಗರ ರೈಲುಗಳನ್ನು ಹೊರತುಪಡಿಸಿ, ಎಕ್ಸ್‌ಪ್ರೆಸ್ ರೈಲುಗಳು ಮತ್ತು ಸಾಮಾನ್ಯ ರೈಲುಗಳಿಂದ ಈ ಮೊತ್ತವನ್ನು ಸಂಗ್ರಹಿಸಲಾಗಿದೆ.

ಮುಂಬೈ ವಿಭಾಗದ ಅಡಿಯಲ್ಲಿ 77 ರೈಲು ನಿಲ್ದಾಣಗಳಿದ್ದು, 1,200 ಟಿಸಿಗಳು ಕಾರ್ಯನಿರ್ವಹಿಸುತ್ತಿದ್ದಾರೆ.