ಅರ್ಜಿ ಹಾಕದೆಯೇ ಹೊಸ ಇ- ಪ್ಯಾನ್ (PAN 2.0) ಅನ್ನು ಇ- ಮೇಲ್ಗೆ (New e-PAN) ಕಳುಹಿಸಿಕೊಡಲಾಗುತ್ತದೆ. ಈಗಾಗಲೇ ಅಸ್ತಿತ್ವದಲ್ಲಿರುವ ಪ್ಯಾನ್ ಕಾರ್ಡ್ಗಳು (old Pan card) ಪ್ಯಾನ್ 2.0 ಯೋಜನೆಯ (PAN 2.0 project) ಅಡಿಯಲ್ಲಿ ಮಾನ್ಯವಾಗಿರುತ್ತದೆ.
ಬಳಕೆದಾರರಿಗೆ ಅವರ ಇ-ಮೇಲ್ ಐಡಿಗೆ ಅದರ ಎಲೆಕ್ಟ್ರಾನಿಕ್ ಆವೃತ್ತಿಯನ್ನು ಕಳುಹಿಸಿಕೊಡಲಾಗುತ್ತದೆ. ಅಧಿಕೃತವಾಗಿ ಕಾರ್ಡ್ ಬೇಕೆಂದು ಬಯಸುವವರು ದೇಶದೊಳಗೆ ವಾಸಿಸುತ್ತಿದ್ದರೆ ಅರ್ಜಿ ಸಲ್ಲಿಸಿ 50 ರೂ. ಪಾವತಿಸಬೇಕಾಗುತ್ತದೆ ಎಂದು ಆದಾಯ ತೆರಿಗೆ ಇಲಾಖೆ (Income Tax Department ) ತಿಳಿಸಿದೆ.
ಪ್ಯಾನ್ ಹೊಂದಿರುವವರು ಇ-ಮೇಲ್, ಮೊಬೈಲ್, ವಿಳಾಸ, ಹೆಸರು, ಹುಟ್ಟಿದ ದಿನಾಂಕದಂತಹ ಯಾವುದೇ ಪ್ಯಾನ್ ವಿವರಗಳನ್ನು ತಿದ್ದುಪಡಿ ಅಥವಾ ಅಪ್ಡೇಟ್ ಮಾಡಲು ಬಯಸಿದರೆ ಪ್ಯಾನ್ 2.0 ಪ್ರಾಜೆಕ್ಟ್ ಪ್ರಾರಂಭವಾದ ಬಳಿಕ ಉಚಿತವಾಗಿ ಮಾಡಬಹುದು ಎಂಬುದಾಗಿ ನೇರ ತೆರಿಗೆಗಳ ಕೇಂದ್ರೀಯ ಮಂಡಳಿಯು ಹೇಳಿದೆ.
ಪ್ಯಾನ್ 2.0 ಯೋಜನೆ ಹೊರತರುವವರೆಗೆ ಪ್ಯಾನ್ ಹೊಂದಿರುವವರು ಇ-ಮೇಲ್, ಮೊಬೈಲ್ ಮತ್ತು ವಿಳಾಸದ ನವೀಕರಣ, ತಿದ್ದುಪಡಿಗಾಗಿ ಆಧಾರ್ ಆಧಾರಿತ ಆನ್ಲೈನ್ ಸೌಲಭ್ಯವನ್ನು ಉಚಿತವಾಗಿ ಪಡೆಯಬಹುದಾಗಿದೆ.
ಆರ್ಥಿಕ ವ್ಯವಹಾರಗಳ ಕ್ಯಾಬಿನೆಟ್ ಸಮಿತಿ (CCEA) 1,400 ಕೋಟಿ ರೂ. ನ ಪ್ಯಾನ್ 2.0 ಯೋಜನೆಗೆ ಅನುಮತಿ ನೀಡಿದ ಒಂದು ದಿನದ ಬಳಿಕ ಈ ಮಾಹಿತಿಯನ್ನು ಬಿಡುಗಡೆ ಮಾಡಲಾಗಿದೆ.
ಪ್ಯಾನ್ ನಲ್ಲಿ ಕ್ಯೂಆರ್ ಕೋಡ್ಗಳು ಇರಲಿದ್ದು, ಇದು ಪ್ಯಾನ್ ನಲ್ಲಿರುವ ಇತರ ವಿವರಗಳ ತ್ವರಿತ ಪರಿಶೀಲನೆಗಾಗಿ ಈ ವೈಶಿಷ್ಟ್ಯವನ್ನು ಈಗಾಗಲೇ ಹೊರತರಲಾಗಿದೆ.
PAN 2.0: ದೇಶದಲ್ಲಿ ಪ್ಯಾನ್ 2.0 ಜಾರಿಗೆ ಕೇಂದ್ರದ ಸಿದ್ಧತೆ; ಏನಿದು ಯೋಜನೆ? ಹಳೆಯ ಪ್ಯಾನ್ ಕಾರ್ಡ್ ಏನಾಗುತ್ತೆ?
ಎಲ್ಲ ಪ್ಯಾನ್ ಮತ್ತು ಟ್ಯಾನ್ ಸಂಬಂಧಿತ ಸೇವೆಗಳು ಆದಾಯ ತೆರಿಗೆ ಇಲಾಖೆಯ ಮೂರು ವಿಭಿನ್ನ e-filing portal, UTIITSL and Protean e-Gov ಪೋರ್ಟಲ್ನಲ್ಲಿ ಲಭ್ಯವಿದೆ. ಇವೆಲ್ಲವೂ ಆದಾಯ ತೆರಿಗೆ ಇಲಾಖೆಯ ಪೋರ್ಟಲ್ ಗೆ ಮಾಹಿತಿಯನ್ನು ಒದಗಿಸುತ್ತವೆ. ಈ ಮೂಲಕ ಅರ್ಜಿ ಹಂಚಿಕೆ, ಆನ್ಲೈನ್ ಮೌಲ್ಯೀಕರಣ, ಆಧಾರ್ನೊಂದಿಗೆ ಲಿಂಕ್ ಮತ್ತು ನವೀಕರಣವನ್ನು ಸಹ ಮಾಡಲಾಗುತ್ತದೆ. ಈ ಸಂಪೂರ್ಣ ಪ್ರಕ್ರಿಯೆಯು ಕಾಗದರಹಿತವಾಗಿರುತ್ತದೆ.