Thursday, 19th September 2024

ರೈತರ ಪ್ರತಿಭಟನೆಗೆ ತಡೆಯಾಜ್ಞೆ: ಅರ್ಜಿ ವಿಚಾರಣೆ ಇಂದು

ನವದೆಹಲಿ: ಗಣರಾಜ್ಯೋತ್ಸವ ದಿನ ಪ್ರತಿಭಟನಾ ನಿರತ ರೈತರು ಹಮ್ಮಿಕೊಳ್ಳಲು ಉದ್ದೇಶಿಸಿರುವ ಟ್ರಾಕ್ಟರ್ ಮೆರವಣಿಗೆ, ಪ್ರತಿಭಟನೆಗೆ ತಡೆಯಾಜ್ಞೆ ನೀಡಬೇಕೆಂದು ಕೇಂದ್ರ ಸರ್ಕಾರ ಸಲ್ಲಿಸಿರುವ ಅರ್ಜಿ ವಿಚಾರಣೆ ಸುಪ್ರೀಂ ಕೋರ್ಟ್ ನಲ್ಲಿ ಸೋಮವಾರ ನಡೆಯಲಿದೆ.

ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್ ಎ ಬೊಬ್ಡೆ ನೇತೃತ್ವದ ನ್ಯಾಯಪೀಠ ನಾಲ್ವರ ಸದಸ್ಯರ ಸಮಿತಿಯಿಂದ ಹೊರ ಬಂದಿರುವ ಭಾರತೀಯ ಕಿಸಾನ್ ಸಂಘಟನೆಯ ರಾಷ್ಟ್ರೀಯ ಅಧ್ಯಕ್ಷ ಭೂಪೀಂದರ್ ಸಿಂಗ್ ಮನ್ನ್ ಅವರನ್ನು ಮತ್ತೆ ತಂಡಕ್ಕೆ ಸೇರಿಸಿಕೊಳ್ಳುವ ಬಗ್ಗೆ ಕೂಡ ತೀರ್ಪು ನೀಡಲಿದೆ.

ಕೋರ್ಟ್ ರಚಿಸಿರುವ ತಂಡ ನೂತನ ಕೃಷಿ ಕಾಯ್ದೆ ಬಗ್ಗೆ ತನ್ನ ಮೊದಲ ಸಭೆಯನ್ನು ಮಂಗಳವಾರ ಹಮ್ಮಿಕೊಳ್ಳಲಿದ್ದು, ನಾಳೆಯೇ ಕೇಂದ್ರ ಸರ್ಕಾರ ಮತ್ತು ರೈತ ಮುಖಂಡರ ಮಧ್ಯೆ 10ನೇ ಸುತ್ತಿನ ಮಾತುಕತೆ ಕೂಡ ನಡೆಯಲಿದೆ.

ಸಮಿತಿಯಿಂದ ಒಬ್ಬ ಸದಸ್ಯರು ಹೊರನಡೆದಿದ್ದಾರೆ. ಸುಪ್ರೀಂ ಕೋರ್ಟ್ ಹೊಸ ಸದಸ್ಯರನ್ನು ನೇಮಕ ಮಾಡದಿದ್ದರೆ ಈಗಿರುವ ಮೂವರು ಸದಸ್ಯರು ಮುಂದುವರಿಯಲಿದ್ದಾರೆ ಎಂದರು.