Thursday, 19th September 2024

ಹೊಸ ಎತ್ತರಕ್ಕೆ ಏರಿದ ವಹಿವಾಟು: 48 ಸಾವಿರ ಅಂಕದತ್ತ ಓಟ

ಮುಂಬೈ: ಭಾರತದ ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಜನವರಿ 1, 2021ರ ಶುಕ್ರ ವಾರ ಹೊಸ ಎತ್ತರಕ್ಕೆ ಏರುವ ಮೂಲಕ ಹೊಸ ವರ್ಷದ ಮೊದಲ ದಿನದ ವಹಿವಾಟನ್ನು ಆರಂಭಿಸಿವೆ.

ಸೆನ್ಸೆಕ್ಸ್ ಸಾರ್ವಕಾಲಿಕ ಗರಿಷ್ಠ ಮಟ್ಟವಾದ 47,916.56 ಪಾಯಿಂಟ್ ಮುಟ್ಟಿ, ಇನ್ನೇನು 48 ಸಾವಿರ ಪಾಯಿಂಟ್ ಕಡೆಗೆ ತನ್ನ ಓಟದ ಗುರಿ ನೆಟ್ಟಂತಿದೆ.

ಇತ್ತ ನಿಫ್ಟಿ ಸಾರ್ವಕಾಲಿಕ ಗರಿಷ್ಠ ಮಟ್ಟವಾದ 14,028.90 ಪಾಯಿಂಟ್ ಮುಟ್ಟಿತು. ಆರಂಭದ ಗಳಿಕೆಯಲ್ಲಿ ನಿಫ್ಟಿ ಟಾಪ್ ಗೇಯ್ನರ್ಸ್ ಆಗಿ ಕಾಣಿಸಿಕೊಂಡಿದ್ದು ಮಹೀಂದ್ರಾ ಅಂಡ್ ಮಹೀಂದ್ರಾ, ಯುಪಿಎಲ್, ಟಿಸಿಎಸ್, ಎಸ್ ಬಿಐ ಮತ್ತು ಲಾರ್ಸನ್.