ನವದೆಹಲಿ: ಭಾರತೀಯ ಷೇರುಪೇಟೆ ಬುಧವಾರ ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ ಶೇ. 0.17ರಷ್ಟು ಕುಸಿತ ಕಂಡರೆ, ರಾಷ್ಟ್ರೀಯ ಷೇರುಪೇಟೆ ನಿಫ್ಟಿ ಶೇ. 0.20ರಷ್ಟು ಇಳಿಕೆ ಕಂಡು ಇಳಿಮುಖವಾಗಿದೆ.
ಸೆನ್ಸೆಕ್ಸ್ ಮಂಗಳವಾರ ಸತತ ಎರಡನೇ ವಹಿವಾಟಿನ ದಿನದಂದು 300 ಪಾಯಿಂಟ್‌ಗಳ ಕುಸಿತ ಕಂಡಿದ್ದು, ಇದಕ್ಕೂ ಮೊದಲು ಸೋಮವಾರ 800 ಪಾಯಿಂಟ್‌ಗಳ ಕುಸಿತದ ಬಳಿಕ ಸತತ ಮೂರು ದಿನಗಳು ಕುಸಿದಿದೆ.
ಬುಧವಾರ ಸೆನ್ಸೆಕ್ಸ್ 65.66 ಪಾಯಿಂಟ್ ಅಥವಾ 0.17% ರಷ್ಟು ಕುಸಿದು 37,668.42 ಕ್ಕೆ ಇಳಿದಿದೆ ಮತ್ತು ನಿಫ್ಟಿ 21.80 ಪಾಯಿಂಟ್ ಅಥವಾ 0.20% ಇಳಿದು 11,131.90 ಕ್ಕೆ ತಲುಪಿದೆ. ಸುಮಾರು 1213 ಷೇರುಗಳು ಮುಂದುವರೆದವು, 1382 ಷೇರುಗಳು ಕುಸಿದವು.