Saturday, 23rd November 2024

ಷೇರುಪೇಟೆ ನಿಫ್ಟಿ 15.20 ಪಾಯಿಂಟ್‌ ಲಾಭ

ಮುಂಬೈ : ರಾಷ್ಟ್ರೀಯ ಷೇರುಪೇಟೆ ನಿಫ್ಟಿ 15.20 ಪಾಯಿಂಟ್‌ಗಳ ಲಾಭದೊಂದಿಗೆ 11,464.50 ಮಟ್ಟದಲ್ಲಿ ಮುಕ್ತಾಯವಾಯಿತು. ಇದಲ್ಲದೆ, ಇಂದು ಬಿಎಸ್‌ಇಯಲ್ಲಿ ಒಟ್ಟು 2,866 ಕಂಪನಿಗಳು ವಹಿವಾಟು ನಡೆಸಿದ್ದು, ಈ ಪೈಕಿ ಸುಮಾರು 1392 ಷೇರುಗಳು ವೇಗವಾಗಿ ವಹಿವಾಟು ನಡೆಸಿ ಮುಚ್ಚಲ್ಪಟ್ಟವು.

ಷೇರುಪೇಟೆ ಸೆನ್ಸೆಕ್ಸ್ 14.23 ಪಾಯಿಂಟ್ ಗಳಿಸಿ 38,854.55 ಪಾಯಿಂಟ್ಸ್‌ನಲ್ಲಿ ಕೊನೆಗೊಂಡಿದೆ. ಬಿಎಸ್‌ಇ ಮಿಡ್‌ಕ್ಯಾಪ್ ಮತ್ತು ಸ್ಮಾಲ್‌ಕ್ಯಾಪ್ ಸೂಚ್ಯಂಕಗಳು ಸೆನ್ಸೆಕ್ಸ್‌ನ ಮಾನದಂಡವನ್ನು ಮೀರಿಸಿದ್ದು, ಕ್ರಮವಾಗಿ 0.58 ಮತ್ತು 0.52 ರಷ್ಟು ಹೆಚ್ಚಾಗಿದೆ. ಐಟಿ ಷೇರುಗಳು ಉತ್ತಮ ವಹಿವಾಟು ನಡೆಸಿವೆ.

ಗಡಿ ಉದ್ವಿಗ್ನತೆಯ ನಡುವೆ ವಿದೇಶಾಂಗ ಸಚಿವ ಎಸ್‌. ಜೈ ಶಂಕರ್ ಮತ್ತು ಚೀನಾದ ಸಚಿವ ವಾಂಗ್ ಯಿ ನಡುವೆ ಮಾಸ್ಕೊದಲ್ಲಿನ ಮಾತುಕತೆಯು ಹೂಡಿಕೆದಾರರನ್ನು ಎಚ್ಚರದಿಂದಿರಿಸಿತು.

ಮತ್ತೊಂದೆಡೆ, ಮಾಧ್ಯಮ, ಹಣಕಾಸು ಸೇವೆಗಳು ಮತ್ತು ಖಾಸಗಿ ಬ್ಯಾಂಕಿಂಗ್ ಷೇರುಗಳು ಮಾರಾಟದ ಒತ್ತಡಕ್ಕೆ ಸಾಕ್ಷಿಯಾದವು.

ಲಾಭ ಗಳಿಕೆಯ ಷೇರುಗಳು:

ವಿಪ್ರೋ ಷೇರುಗಳು 9 ರೂ.ಗಳ ಏರಿಕೆ ಕಂಡು 293.30 ರೂ.

ಎಸ್‌ಬಿಐ ಷೇರುಗಳು 5 ರೂ.ಗಳ ಏರಿಕೆ ಕಂಡು 202.70 ರೂ.

ಟೆಕ್ ಮಹೀಂದ್ರಾ ಷೇರುಗಳು 15 ರೂ.ಗಳ ಏರಿಕೆ ಕಂಡು 765.15 ರೂ.

ಟಿಸಿಎಸ್ ಷೇರುಗಳು 43 ರೂ.ಗಳ ಏರಿಕೆ ಕಂಡು 2,374.10 ರೂ.

ಯುಪಿಎಲ್ ಷೇರುಗಳು 8 ರೂ.ಗಳ ಏರಿಕೆ ಕಂಡು 499.00 ರೂ.

ಇಳಿಕೆ ಕಂಡ ಷೇರುಗಳು:

ಜೀ ಎಂಟರ್‌ಟೈನ್‌ಮೆಂಟ್‌ನ ಷೇರುಗಳು ಇಳಿಕೆಯಾಗಿ 218.10 ರೂ., ಇಂಡಸ್‌ಇಂಡ್ ಬ್ಯಾಂಕಿನ ಷೇರುಗಳು 610.35 ರೂ., ಪವರ್ ಗ್ರಿಡ್ ಕಾರ್ಪೊರೇಶನ್‌ನ ಷೇರುಗಳು 175.15 ರೂ., ಕೋಲ್ ಇಂಡಿಯಾ ಷೇರುಗಳು 125.10 ರೂ.ಗೆ ತಲುಪಿದೆ. ಭಾರತಿ ಏರ್‌ಟೆಲ್ ಷೇರುಗಳು 6 ರೂ.ಗಳ ಕುಸಿತ ಕಂಡು 491.65 ರೂ.ಗೆ ತಲುಪಿದೆ.