ನವದೆಹಲಿ: ಭಾರತೀಯ ಷೇರುಪೇಟೆಯ ನಾಗಾಲೋಟ ಮುಂದುವರಿದಿದೆ. ಸೆನ್ಸೆಕ್ಸ್ ಮತ್ತು ನಿಫ್ಟಿ ಮಂಗಳವಾರ ಭಾರೀ ಜಿಗಿತ ಕಂಡಿದೆ. ಸೆನ್ಸೆಕ್ಸ್ 834 ಪಾಯಿಂಟ್ಸ್ ಏರಿಕೆಗೊಂಡರೆ, ನಿಫ್ಟಿ 14,500ರ ಗಡಿದಾಟಿದೆ.
ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ 834.02 ಅಂಕಗಳಷ್ಟು ಏರಿಕೆಗೊಂಡು 49,398 ಅಂಕಗಳಷ್ಟು ದಾಖಲಿಸಿದರೆ, ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 239.85 ಏರಿಕೆಗೊಂಡು 14,521.15 ಅಂಕಗಳಿಗೆ ತಲುಪಿದೆ. ಇಂದಿನ ವಹಿವಾಟಿನಲ್ಲಿ 2,077 ಷೇರುಗಳು ಏರಿಕೆ ಸಾಧಿಸಿದರೆ, 861 ಷೇರುಗಳು ಕುಸಿದಿವೆ ಮತ್ತು 139 ಷೇರುಗಳ ಮೌಲ್ಯದಲ್ಲಿ ಯಾವುದೇ ಬದಲಾವಣೆ ಆಗಿಲ್ಲ.
ಏಷ್ಯಾದ ಮಾರುಕಟ್ಟೆಗಳು ಪ್ರತಿಬಿಂಬವಾಗಿ ಭಾರತೀಯ ಷೇರುಪೇಟೆ ಏರಿಕೆ ದಾಖಲಿಸಿದೆ. 2020 ರಲ್ಲಿ ಚೀನಾದ ಆರ್ಥಿಕತೆಯು ಬೆಳೆಯುತ್ತಿರುವ ಕೆಲವೇ ರಾಷ್ಟ್ರಗಳಲ್ಲಿ ಒಂದು ಎಂದು ಡೇಟಾ ತೋರಿಸಿದ ನಂತರ ಏಷ್ಯಾದ ಷೇರುಗಳು ಏರಿಕೆಯಾಗಿದೆ.