Saturday, 27th July 2024

ಸೆಪ್ಟೆಂಬರ್‌ನಿಂದ ರಷ್ಯಾದ ಸ್ಪುಟ್ನಿಕ್ V ಕೊರೊನಾ ಲಸಿಕೆ ಉತ್ಪಾದನೆ: ಸೀರಂ ಇನ್‌ಸ್ಟಿಟ್ಯೂಟ್

ನವದೆಹಲಿ: ಸೀರಂ ಇನ್‌ಸ್ಟಿಟ್ಯೂಟ್ ಸೆಪ್ಟೆಂಬರ್‌ನಿಂದ ರಷ್ಯಾದ ಸ್ಪುಟ್ನಿಕ್ V ಕೊರೊನಾ ಲಸಿಕೆಯನ್ನು ಉತ್ಪಾದಿಸಲಿದೆ ಎಂದು ರಷ್ಯಾದ ಕಂಪನಿ ಮಾಹಿತಿ ನೀಡಿದೆ.

ಪುಣೆಯಲ್ಲಿ ಲಸಿಕೆ ಉತ್ಪಾದನೆ ಶುರುವಾಗಲಿದೆ. ಪ್ರತಿ ವರ್ಷ ಭಾರತದಲ್ಲಿ 300 ಮಿಲಿಯನ್ ಕರೊನಾ ಲಸಿಕೆ ಉತ್ಪಾದಿಸಲಿದೆ ಎಂದಿದೆ. ಸೆಪ್ಟೆಂಬರ್‌ನಲ್ಲಿ ಉತ್ಪಾದನೆ ಶುರುವಾಗಲಿದೆ, ಸೀರಂ ಈಗಾಗಲೇ ಸೆಲ್ ಹಾಗೂ ವೆಕ್ಟರ್ ಮಾದರಿಗಳನ್ನು ಗಮಾಲಿಯಾ ಕೇಂದ್ರದಿಂದ ಪಡೆದುಕೊಂಡಿದೆ.

ಆರ್‌ಡಿಐಎಫ್ ಪಾಲುದಾರರಾಗಿರುವುದಕ್ಕೆ ಸಂತೋಷವಾಗಿದೆ, ಸ್ಪುಟ್ನಿಕ್ ಲಸಿಕೆಯು ಭಾರತ ಸೇರಿದಂತೆ ಇಡೀ ವಿಶ್ವಾದ್ಯಂತ ಪ್ರಚಲಿತದಲ್ಲಿರುವ ಲಸಿಕೆ ಯಾಗಿದೆ. ಆಗಸ್ಟ್‌ನಲ್ಲಿ 16 ರಿಂದ 18 ಕೋಟಿಯಷ್ಟು ಲಸಿಕೆಯನ್ನು ಉತ್ಪಾದಿಸಲಾಗುತ್ತದೆ. ಸೆಪ್ಟೆಂಬರ್‌ನಲ್ಲಿ 30 ಕೋಟಿ ಕೊರೊನಾ ಲಸಿಕೆ ಉತ್ಪಾದಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದ್ದಾರೆ. ಸಧ್ಯಕ್ಕೆ ಡಾ. ರೆಡ್ಡೀಸ್ ಲ್ಯಾಬೊರೇಟರಿ ಸ್ಪುಟ್ನಿಕ್ ಲಸಿಕೆ ಉತ್ಪಾದಿಸುತ್ತಿದೆ. ಲ್ಯಾಬೊರೇಟರಿಯು ಕೋವಿಡ್ 19 ಲಸಿಕೆ ಸ್ಪುಟ್ನಿಕ್ V ಪ್ರಾಯೋಗಿಕ ಯೋಜನೆ ಯನ್ನು 30 ನಗರಗಳಿಗೆ ವಿಸ್ತರಿಸಿದೆ.

ಹೈದರಾಬಾದ್ ನಲ್ಲಿ ಆರಂಭವಾದ ಲಸಿಕೆ ದೇಶದ 50ಕ್ಕೂ ಹೆಚ್ಚು ನಗರ ಮತ್ತು ಪಟ್ಟಣ ಪ್ರದೇಶಗಳಿಗೆ ವಿಸ್ತರಿಸುವಂತೆ ತ್ವರಿತಗೊಳಿಸಲಾಗುವುದು ಎಂದು ಟ್ವೀಟ್ ಮೂಲಕ ಹೇಳಿದೆ.

Leave a Reply

Your email address will not be published. Required fields are marked *

error: Content is protected !!