Thursday, 19th September 2024

ಟಾಟಾ ಗ್ರೂಪ್‌ ತೆಕ್ಕೆಗೆ ಏರ್‌ ಇಂಡಿಯಾ

ನವದೆಹಲಿ: ಏರ್‌ ಇಂಡಿಯಾ ವಿಮಾನಯಾನ ಕಂಪೆನಿಯ ಅಂತಿಮ ವಿಧಿವಿಧಾನಗಳು ಯಶಸ್ವಿ ಯಾಗಿ ಮುಕ್ತಾಯಗೊಂಡಿರುವ ಬಳಿಕ ಇದೀಗ ಏರ್‌ ಇಂಡಿಯಾ ಟಾಟಾ ಗ್ರೂಪ್‌ ಗೆ ಮರಳಿದೆ.

ಏರ್‌ ಇಂಡಿಯಾ ಕಚೇರಿಯಲ್ಲಿ ಅಧಿಕಾರಿಗಳು ಅಂತಿಮ ಹಸ್ತಾಂತರ ಪ್ರಕ್ರಿಯೆ ಪ್ರಾರಂಭಿಸುತ್ತಿದ್ದಂತೆ ಟಾಟಾ ಸನ್ಸ್‌ ಅಧ್ಯಕ್ಷ ಎನ್.‌ ಚಂದ್ರಶೇಖರನ್‌ ಪ್ರಧಾನಿ ಮೋದಿಯನ್ನು ಭೇಟಿ ಮಾಡಿದರು.

ಟಾಟಾ ಗ್ರೂಪ್, ಭಾರತದ ಉದ್ಯಮಶೀಲತಾ ಮನೋಭಾವ ಮತ್ತು ಅಭಿವೃದ್ಧಿಗಳಿಗೆ ಪ್ರಧಾನಿ ಮೋದಿಯವರ ಬದ್ಧತೆಯನ್ನು ಅಂಗೀಕರಿಸುವ ಹೇಳಿಕೆಯನ್ನು” ಬಿಡುಗಡೆ ಮಾಡಿದೆ. ಗರಿಷ್ಠ ಆಡಳಿತಕ್ಕೆ ತಮ್ಮ ಬದ್ಧತೆ ಏನೆಂಬುದನ್ನು ನಮ್ಮ ಪ್ರಧಾನಿ ಕಾರ್ಯರೂಪದಲ್ಲಿ ಪ್ರದರ್ಶಿಸಿದ್ದಾರೆ ಎಂದೂ ಹೇಳಿದೆ.

ಏರ್ ಇಂಡಿಯಾ ಹೂಡಿಕೆ ವಹಿವಾಟು ಮುಚ್ಚಲಾಗಿದೆ. ₹2,700 ಕೋಟಿ ಸರ್ಕಾರಕ್ಕೆ ಬಂದಿದೆ. ಷೇರುಗಳನ್ನು ಹೊಸ ಮಾಲೀಕರಾದ ತಾಲೇಸ್‌ಗೆ ವರ್ಗಾಯಿಸ ಲಾಗಿದೆ. ₹1,53,00 ಕೋಟಿ ಸಾಲವನ್ನು ಹೊಸ ಮಾಲೀಕರು ಒಪ್ಪಿಕೊಂಡಿದ್ದಾರೆ ಎಂದು ಹೂಡಿಕೆ ಮತ್ತು ಸಾರ್ವಜನಿಕ ಆಸ್ತಿ ನಿರ್ವಹಣೆ ಇಲಾಖೆಯ ಕಾರ್ಯದರ್ಶಿ ತುಹಿನ್ ಕಾಂತಾ ಪಾಂಡೆ ತಿಳಿಸಿದ್ದಾರೆ.