Monday, 16th September 2024

ಜೂನ್ 1 ರಿಂದ ಉತ್ತರ ಪ್ರದೇಶ ಅನ್ಲಾಕ್, ವಾರಾಂತ್ಯ ಕರ್ಫ್ಯೂ

ಲಖ್ನೋ: ನಗರದಲ್ಲಿ ಕಂಟೈನ್ಮೆಂಟ್ ವಲಯಗಳ ಹೊರಗಿನ ಮಾರುಕಟ್ಟೆ ಗಳನ್ನು ತೆರೆಯಲು ಅವಕಾಶ ನೀಡಲಾಗಿದೆ. ಈ ಮೂಲಕ ಲಾಕ್‌ಡೌನ್‌ ಜಾರಿ ಮಾಡಿದ್ದ ಉತ್ತರ ಪ್ರದೇಶ ಸರ್ಕಾರ ಅನ್ಲಾಕ್ ಪ್ರಕ್ರಿಯೆ ಆರಂಭಿಸಿದೆ.

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರ ಕರೋನಾ ಕರ್ಫ್ಯೂ ನಿರ್ಬಂಧ ಸಡಿಲ ಮಾಡುವತ್ತ ಹೆಜ್ಜೆ ಇಟ್ಟಿದೆ. ಸುಮಾರು 55 ಜಿಲ್ಲೆಗಳಲ್ಲಿ ಲಾಕ್ ಡೌನ್ ನಿರ್ಬಂಧ ಸಡಿಲಿಸಿದ್ದು, ಜೂನ್ 1 ರಿಂದ ಅನ್ಲಾಕ್ ಪ್ರಕ್ರಿಯೆ ಆರಂಭ ವಾಗಲಿವೆ. ಆದರೂ, ನಿರ್ಬಂಧಗಳು ಜಿಲ್ಲೆಗಳಲ್ಲಿ ಮುಂದುವರಿಯಲಿವೆ ಎಂದು ಸಿಎಂ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.

ಉತ್ತರಪ್ರದೇಶದಲ್ಲಿ ಭಾನುವಾರ 1900 ಕೋವಿಡ್ ಪ್ರಕರಣಗಳು ದಾಖಲಾಗಿದ್ದು 41,000 ಸಕ್ರಿಯ ಪ್ರಕರಣಗಳು ಇವೆ. ಜೂನ್ 1 ರಿಂದ ಕಂಟೈನ್ಮೆಂಟ್ ಹೊರಗಿನ ಮಾರುಕಟ್ಟೆ ತೆರೆಯಬಹುದು. ವಾರಾಂತ್ಯ ಕರ್ಫ್ಯೂ ಮುಂದುವರೆಯಲಿದೆ ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *