Wednesday, 11th December 2024

696 ಬೂತ್‌ಗಳಲ್ಲಿ ಮರು ಮತದಾನ ಆರಂಭ

ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಪ್ರತಿಭಟನೆಗಳು ಮತ್ತು ಚುನಾವಣೋತ್ತರ ಹಿಂಸಾಚಾರದ ಘಟನೆಗಳು ಮುಂದು ವರೆದಿದ್ದು, ಮತದಾನ ಅಸಿಂಧು ಎಂದು ಘೋಷಿಸಲಾದ 696 ಬೂತ್‌ಗಳಲ್ಲಿ ಸೋಮವಾರ ಮರು ಮತದಾನ ಆರಂಭವಾಗಿದೆ.

ಶನಿವಾರ ನಡೆದ ಹಿಂಸಾಚಾರದ ಪಂಚಾಯತಿ ಚುನಾವಣೆಯಲ್ಲಿ, ರಾಜ್ಯದ ಮೂರು ಹಂತದ ಪಂಚಾಯತ್ ವ್ಯವಸ್ಥೆಯಲ್ಲಿ 73,887 ಸ್ಥಾನಗಳಿಗೆ ಚುನಾವಣೆಗೆ ಕಣದಲ್ಲಿದ್ದ 2.06 ಲಕ್ಷ ಅಭ್ಯರ್ಥಿಗಳಿಗೆ 61,636 ಬೂತ್‌ಗಳಲ್ಲಿ ಜನರು ಮತ ಚಲಾಯಿಸಿದ್ದಾರೆ ಆದರೆ ಇದೆಲ್ಲಾ ಅಸಿಂಧು ಎಂದು ಅಧಿಕಾರಿಗಳು ಹೇಳಿದ್ದಾರೆ.

ಈ ಹಿನ್ನೆಲೆಯಲ್ಲಿ ಮರು ಮತದಾನ ಆರಂಭಗೊಂಡಿದ್ದು, ಎಲ್ಲ ಮತಗಟ್ಟೆಗಳಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿದೆ. ಕೇಂದ್ರ ಪಡೆಯ ನಾಲ್ವರು ಸಿಬ್ಬಂದಿ ಸೇರಿದಂತೆ ರಾಜ್ಯ ಪೊಲೀಸರನ್ನು ಮತಗಟ್ಟೆಗಳಿಗೆ ನಿಯೋಜಿಸಲಾಗಿದೆ.

elecಸಂಜೆ ಐದು ಗಂಟೆಯವರೆಗೆ ಮರು ಮತದಾನ ನಡೆಯಲಿದೆ.