Wednesday, 29th May 2024

ಸಿಲಿಗುರಿಯಲ್ಲಿ ಕೆ.ಜಿ ಟೊಮೆಟೊ ದರ ₹155

ವದೆಹಲಿ: ದೇಶದ ಹಲವು ಭಾಗಗಳಲ್ಲಿ ಟೊಮೆಟೊ ದರ ₹100 ದಾಟಿದ್ದು, ಪಶ್ಚಿಮ ಬಂಗಾಳದ ಸಿಲಿಗುರಿಯಲ್ಲಿ ಕೆ.ಜಿ ಟೊಮೆಟೊ ದರ ₹155 ತಲುಪಿದೆ.

ಪಶ್ಚಿಮ ಬಂಗಾಳದ ಕೋಲ್ಕತ್ತದಲ್ಲಿ ಟೊಮೆಟೊ ದರ ಅತೀ ಹೆಚ್ಚು ಇದೆ. ಮುಂಬೈನಲ್ಲಿ ಅತಿ ಕಡಿಮೆ ಅಂದರೆ ಕೆ.ಜಿಗೆ ₹58 ಇದೆ.

ದೆಹಲಿ ಹಾಗೂ ಚೆನ್ನೈನಲ್ಲಿ ಕೆ.ಜಿಗೆ ಕ್ರಮವಾಗಿ ₹110 ಹಾಗೂ ₹117 ಇದೆ. ದೇಶದಾದ್ಯಂತ ಟೊಮೆಟೊ ದರ ಕೆ.ಜಿಗೆ ಸರಾಸರಿ ₹ 83.29 ಇದೆ. ಸಾಮಾನ್ಯವಾಗಿ ಕೆ.ಜಿಗೆ ₹100 ಇದೆ.

ಸಿಲಿಗುರಿಯಲ್ಲಿ ಟೊಮೆಟೊ ದರ ದೇಶದಲ್ಲೇ ಅತಿ ಹೆಚ್ಚು ಅಂದರೆ ಕೆ.ಜಿಗೆ ₹155 ಇದೆ ಎಂದು ದತ್ತಾಂಶದಿಂದ ಗೊತ್ತಾಗಿದೆ.

ದೆಹಲಿಯಲ್ಲಿ ಗುಣಮಟ್ಟ ಹಾಗೂ ಲಭ್ಯತೆ ಆಧಾರದಲ್ಲಿ ಟೊಮೆಟೊ ಕೆ.ಜಿಗೆ ₹120 – 140ಗೆ ಬಿಕರಿಯಾಗುತ್ತಿದೆ.

Leave a Reply

Your email address will not be published. Required fields are marked *

error: Content is protected !!