Thursday, 19th September 2024

ವಾಟ್ಸ್’ಆ್ಯಪ್‌ನ ಹೊಸ ಗೌಪ್ಯತೆ ನೀತಿ: ಬದಲಾವಣೆ, ಏಕೆ?

ವಾಟ್ಸ್’‌‌ಆ್ಯಪ್ 2014ರಿಂದ ಫೇಸ್‌ಬುಕ್‌ನ ಅಂಗಸಂಸ್ಥೆಯಾಗಿದ್ದು, ಈ ಬದಲಾವಣೆಗಳ ಬಗ್ಗೆ 2021 ಜನವರಿ 4ರಂದೇ ಘೋಷಿಸಿತು

ದೆಹಲಿ: ವಾಟ್ಸ್‌‌ಆ್ಯಪ್ ಫೆಬ್ರವರಿ 8ರಿಂದ ತನ್ನ ಸೇವಾ ನಿಯಮಗಳಲ್ಲಿ (ಟಿಒಎಸ್) ಬದಲಾವಣೆ ಮಾಡುವುದಾಗಿ ಪ್ರಕಟಿಸಿದೆ.

ಬಳಕೆದಾರರು ಈ ಬದಲಾವಣೆಗಳನ್ನು ಒಪ್ಪಿಕೊಳ್ಳದಿದ್ದರೆ ವಾಟ್ಸ್‌‌ಆ್ಯಪ್ ಬಳಸಲು ಸಾಧ್ಯವಾಗುವುದಿಲ್ಲ. ವಾಟ್ಸ್‌ಆ್ಯಪ್ 2014ರಿಂದ ಫೇಸ್‌ಬುಕ್‌ನ (ಎಫ್‌ಬಿ) ಅಂಗಸಂಸ್ಥೆೆಯಾಗಿದ್ದು, ಈ ಬದಲಾವಣೆಗಳ ಬಗ್ಗೆ 2021 ಜನವರಿ 4ರಂದೇ ಘೋಷಿಸಿತ್ತು.

ಬದಲಾವಣೆಯ ಅಗತ್ಯವೇನು? 

ಫೇಸ್‌ಬುಕ್ ಇಂಕ್ (ಸಾಮಾಜಿಕ ವೇದಿಕೆ) ಎಫ್‌ಬಿ ಮೆಸೆಂಜರ್, ಇನ್‌ಸ್ಟಾಗ್ರಾಮ್ (ಎಫ್‌ಬಿ ಇದನ್ನು 2012ರಲ್ಲಿ ಖರೀದಿಸಿತ್ತು) ಮತ್ತು ವಾಟ್ಸ್‌‌ಆ್ಯಪ್ ನಲ್ಲಿ ತನ್ನ ಸೇವೆಗಳನ್ನು ಸಂಯೋಜಿಸಲು ಕೆಲಸ ಆರಂಭಿಸಿದೆ. ಈ ಸಂಬಂಧ ಮಾರ್ಕ್ ಜುಕರ್ ಬರ್ಗ್ ಅವರು 2020ರ ಅಕ್ಟೋಬರ್‌ನಲ್ಲೇ ಘೋಷಿಸಿದ್ದರು.

*ಇನ್‌ಸ್ಟಾ ಮತ್ತು ಎಫ್‌ಬಿ ಮೆಸೆಂಜರ್ ಅನ್ನು ಈಗಾಗಲೇ ಸಂಯೋಜಿಸಲಾಗಿದೆ. ಬಿಸಿನೆಸ್‌ಗೆ ಬಿ2ಬಿ ಅಥವಾ ಬಿ2ಸಿ ಭಾಷಣೆಗಾಗಿ
ವಾಟ್ಸ್‌‌ಆ್ಯಪ್ ಅನ್ನು ಹೇಗೆ ಬಳಸಬಹುದು ಎಂಬುದನ್ನು ಹೊಸ ಟಿಒಎಸ್ ವಿವರಿಸುತ್ತದೆ. ವಾಟ್ಸ್‌‌ಆ್ಯಪ್ ಸಹ ಹಣ ಪಾವತಿ ಆಯ್ಕೆಯನ್ನು ಹೊರತರುತ್ತಿರುವ ಹಿನ್ನೆಲೆಯಲ್ಲಿ ಎಫ್‌ಬಿ ಆ ಡೇಟಾವನ್ನು ಸಂಯೋಜಿಸುತ್ತಿದೆ.

*ವಾಟ್ಸ್‌‌ಆ್ಯಪ್ ನಿಮ್ಮ ಸಂದೇಶಗಳನ್ನು ಫೇಸ್‌ಬುಕ್ ನೊಂದಿಗೆ ಹಂಚಿಕೊಳ್ಳುತ್ತದೆಯೇ?

ಇಲ್ಲ. ಗೌಪ್ಯತೆ ನೀತಿಯು ನಿಮ್ಮ ವೈಯಕ್ತಿಕ ಚಾಟ್ಗಳನ್ನು ವಾಟ್ಸ್‌‌ಆ್ಯಪ್ ಬಯಸುವಂತೆ ಹಂಚಿಕೊಳ್ಳುವುದಿಲ್ಲ. ವಾಟ್ಸ್‌ಆ್ಯಪ್ ಎಂಡ್-ಟು- ಎಂಡ್ ಎನ್‌ಕ್ರಿಪ್ಟ್ ಆಗಿದ್ದು, ಯಾವುದೇ ಮೂರನೇ ವ್ಯಕ್ತಿಯು ಅವುಗಳನ್ನು ಓದಲು ಸಾಧ್ಯವಿಲ್ಲ. ಜನರು, ತಮ್ಮ ಸ್ನೇಹಿತರು ಅಥವಾ ಕುಟುಂಬದೊಂದಿಗೆ ಹೇಗೆ ಖಾಸಗಿಯಾಗಿ ಸಂವಹನ ನಡೆಸುತ್ತಾರೆ ಎಂಬುದರ ಮೇಲೂ ಪರಿಣಾಮ
ಬೀರುವುದಿಲ್ಲ. ಜನರ ಗೌಪ್ಯತೆ ರಕ್ಷಿಸಲು ವಾಟ್ಸ್ಆ್ಯಪ್ ಬದ್ಧವಾಗಿದೆ ಎಂದು ಸಂಸ್ಥೆ ತಿಳಿಸಿದೆ.

*ಫೇಸ್‌ಬುಕ್‌ನೊಂದಿಗೆ ಡೇಟಾ ವಿನಿಮಯ ಏಕೆ?
ಮಾಹಿತಿ ಸುರಕ್ಷತೆ, ಅತಿಯಾದ ಸ್ಪ್ಯಾಮ್‌ನಿಂದ ರಕ್ಷಣೆ ಹಾಗೂ ಹಿಂದಿನ ನಿಯಮಗಳಲ್ಲಿ ಬಳಕೆದಾರರು ಎದುರಿಸುತ್ತಿದ್ದ ಸಮಸ್ಯೆಗಳನ್ನು ಸುಧಾರಿಸಲು ಈ ಕ್ರಮ ಕೈಗೊಂಡಿದೆ.

*ವಾಟ್ಸ್‌‌ಆ್ಯಪ್ ಜಾಹೀರಾತುಗಳಿಗಾಗಿ ನಿಮ್ಮ ಡೇಟಾವನ್ನು ಬಳಸುತ್ತದೆ ಎಂದರ್ಥವೇ?
ಇದುವರೆಗೂ ವಾಟ್ಸ್‌‌ಆ್ಯಪ್ ಜಾಹೀರಾತುಗಳನ್ನು ತೋರಿಸಿಲ್ಲ. ವೈಯಕ್ತಿಕ ಸಂದೇಶಗಳನ್ನು ವಾಟ್ಸ್ ಆ್ಯಪ್‌ನಲ್ಲಿ ಜಾಹೀರಾತು ರೀತಿ ಬಳಸಲಾಗುತ್ತದೆ ಎಂದು ನೀವು ಚಿಂತೆ ಮಾಡುತ್ತಿದ್ದರೆ ಅದು ತಪ್ಪು. ಏಕೆಂದರೆ, ಅದು ಎನ್‌ಕ್ರಿಪ್ಟ್‌ ಆಗಿರುವುದರಿಂದ
ಸಾಧ್ಯವಿಲ್ಲ.

*ವಾಟ್ಸ್‌‌ಆ್ಯಪ್ ಸಂದೇಶಗಳನ್ನು ಸಂಗ್ರಹಿಸುತ್ತಿದೆಯೇ?
ಇಲ್ಲ ಎಂದು ಹೇಳುತ್ತಿದೆ. ಗೌಪ್ಯತೆ ನೀತಿಯ ಪ್ರಕಾರ, ಸಂದೇಶವನ್ನು ತಲುಪಿಸಿದ ನಂತರ, ಅದನ್ನು ಕಂಪನಿಯ ಸರ್ವರ್‌ಗಳಿಂದ ಅಳಿಸಲಾಗುತ್ತದೆ. ಸಂದೇಶವನ್ನು ತಕ್ಷಣವೇ ತಲುಪಿಸಲು ಸಾಧ್ಯವಾಗದಿದ್ದಾಗ ಮಾತ್ರ ಸಂಗ್ರಹಿಸುತ್ತದೆ. ನಂತರ ಸಂದೇಶವು ಅದರ ಸರ್ವರ್‌ಗಳಲ್ಲಿ 30 ದಿನಗಳವರೆಗೆ ಎನ್‌ಕ್ರಿಪ್ಟ್‌ ಮಾಡಲಾದ ರೂಪದಲ್ಲಿ ಉಳಿಯಬಹುದು. 30 ದಿನಗಳ ನಂತರವೂ ರವಾನೆಯಾಗದಿದ್ದರೆ ಸಂದೇಶವನ್ನು ಅಳಿಸಲಾಗುತ್ತದೆ.

*ನೀವು ಗೌಪ್ಯತೆ ನೀತಿಯನ್ನು ಸ್ವೀಕರಿಸಬೇಕೇ?
ಹೌದು, ನೀವು ಇದನ್ನು ಬಯಸದಿದ್ದರೆ ನಿಮ್ಮ ಖಾತೆಯನ್ನು ಅಳಿಸಬಹುದು ಅಥವಾ ಇನ್ನೊಂದು ಸೇವೆಗೆ ಬದಲಾಯಿಸುವ ಹಕ್ಕು ಸಾಫ್ಟ್ವೇರ್ (ಬೈ ಡಿಫಾಲ್ಟ್‌) ಗಿದೆ. ಈಗಾಗಲೇ ಬಹಳಷ್ಟು ಜನರು ವಾಟ್ಸ್‌‌ಆ್ಯಪ್‌ನಿಂದ ಸಿಗ್ನಲ್‌ಗೆ ಬದಲಾಗುತ್ತಿದ್ದಾರೆ. ವಾಟ್ಸ್‌‌ಆ್ಯಪ್‌ನಂತೆಯೇ ಸಿಗ್ನಲ್ ಮತ್ತೊಂದು ಮೆಸೇಜಿಂಗ್ ಅಪ್ಲಿಕೇಷನ್. ಇದು ಉಚಿತ ಮತ್ತು ಎಂಡ್-ಟು-ಎಂಡ್ ಎನ್‌ಕ್ರಿಪ್ಟ್‌
ಆಗಿದೆ.

ಫೇಸ್‌ಬುಕ್‌ನೊಂದಿಗೆ ವಾಟ್ಸ್‌ ಆ್ಯಪ್ ಯಾವ ಡೇಟಾವನ್ನು ಹಂಚಿಕೊಳ್ಳುತ್ತದೆ?
ಫೇಸ್‌ಬುಕ್‌ನೊಂದಿಗೆ ಡೇಟಾ ವಿನಿಮಯವು ಈಗಾಗಲೇ ನಡೆಯುತ್ತಿದೆ. ಆದರೆ, ಐರೋಪ್ಯ ಒಕ್ಕೂಟದ ಬಳಕೆದಾರರು ಫೇಸ್‌ಬುಕ್‌ನೊಂದಿಗೆ ಡೇಟಾ ಹಂಚಿಕೆಯಿಂದ ಹೊರಗುಳಿಯಬಹುದಾದರೂ, ಪ್ರಪಂಚದ ಉಳಿದ ಭಾಗಗಳಿಗೆ ಇದೇ ಆಯ್ಕೆಯಲ್ಲ. ವಾಟ್ಸ್ಆ್ಯಪ್ ಈ ಮಾಹಿತಿಯನ್ನು ಫೇಸ್‌ಬುಕ್ ಮತ್ತು ಅದರ ಇತರ ಕಂಪನಿಗಳೊಂದಿಗೆ ಹಂಚಿಕೊಳ್ಳುತ್ತದೆ: ಖಾತೆ
ನೋಂದಣಿ ಮಾಹಿತಿ (ಫೋನ್ ಸಂಖ್ಯೆ), ವಹಿವಾ ಟು ಡೇಟಾ (ವಾಟ್ಸ್‌‌ಆ್ಯಪ್ ಈಗಗಲೇ ಭಾರತದಲ್ಲಿ ಪಾವತಿ ಸೇವೆ ಹೊಂದಿದೆ), ಸೇವೆಗೆ ಸಂಬಂಧಿಸಿದ ಮಾಹಿತಿ, ನೀವು ಇತರರೊಂದಿಗೆ ಹೇಗೆ ಸಂವಹನ ನಡೆಸುತ್ತೀರಿ (ವ್ಯವಹಾರಗಳು ಸೇರಿದಂತೆ),
ಮೊಬೈಲ್ ಸಾಧನದ ಮಾಹಿತಿ ಮತ್ತು ಐಪಿ ವಿಳಾಸ.