Sunday, 8th September 2024

ಟ್ವಿಟರ್‌’ನಲ್ಲಿ ಯೋಗಿಗೆ 2.5 ಕೋಟಿ ಫಾಲೋವರ್‌..!

ಲಖನೌ: ತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಧಿಕೃತ ಟ್ವಿಟರ್‌ ಖಾತೆಯನ್ನು ಫಾಲೋ ಮಾಡುವವರ ಸಂಖ್ಯೆ 2.5 ಕೋಟಿಯಿಂತ ಹೆಚ್ಚಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ಯೋಗಿ ಆದಿತ್ಯನಾಥ್ ಅವರ ಜನಪ್ರಿಯತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಟ್ವಿಟರ್‌ ಖಾತೆಯಲ್ಲಿ 2.5 ಕೋಟಿ ಅನುಯಾ ಯಿಗಳನ್ನು ಹೊಂದಿರುವ ಮೊದಲ ಮುಖ್ಯಮಂತ್ರಿ ಎನಿಸಿಕೊಂಡಿದ್ದಾರೆ.

2015ರ ಸೆಪ್ಟೆಂಬರ್‌ನಲ್ಲಿ ಯೋಗಿ ಆದಿತ್ಯನಾಥ್‌ ಅಧಿಕೃತ ಟ್ವಿಟರ್‌ ಹ್ಯಾಂಡಲ್‌ ಪ್ರಾರಂಭವಾಗಿತ್ತು. 8 ವರ್ಷಗಳಲ್ಲೇ ಇಷ್ಟರ ಮಟ್ಟಿಗೆ ಜನಪ್ರಿಯತೆ ಸಾಧಿಸಿದ್ದಾರೆ. ಸಾಮಾಜಿಕ ತಾಲಜಾಣಗಳಲ್ಲಿ ಸಕ್ರಿಯ ಮುಖ್ಯಮಂತ್ರಿ, ರಾಜಕಾರಣಿ ಯೋಗಿ, ಇದೀಗ ಟ್ವಿಟರ್‌ನಲ್ಲಿ 2.5 ಕೋಟಿಗಿಂತ ಹೆಚ್ಚು ಅನುಯಾಯಿಗಳನ್ನು ಹೊಂದಿರುವ ಪ್ರಧಾನಿ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಸಾಲಿಗೆ ಸೇರಿಕೊಂಡಿದ್ದಾರೆ.

error: Content is protected !!