IPL 2025: ʻಮಾದಕ ದ್ರವ್ಯ ಪರೀಕ್ಷೆಯಲ್ಲಿ ಪಾಸಿಟಿವ್ʼ-ಕ್ರಿಕೆಟ್‌ನಿಂದ ಅಮಾನತುಗೊಂಡ ಕಗಿಸೊ ರಬಾಡ!
ದಕ್ಷಿಣ ಆಫ್ರಿಕಾದ ವೇಗದ ಬೌಲರ್ ಕಗಿಸೊ ರಬಾಡ ವೈಯಕ್ತಿಕ ಕಾರಣಗಳಿಗಾಗಿ ಐಪಿಎಲ್ ಅನ್ನು ಅರ್ಧದಲ್ಲೇ ತೊರೆದು ಮನೆಗೆ ಮರಳಿದ್ದರು, ಆದರೆ ಈಗ ಅವರು ಮಾದಕ ದ್ರವ್ಯ ಪರೀಕ್ಷೆಯಲ್ಲಿ ಪಾಸಿಟಿವ್ ಆಗಿರುವುದರಿಂದ ತಾತ್ಕಾಲಿಕವಾಗಿ ನಿಷೇಧಕ್ಕೊಳಗಾಗಿದ್ದಾರೆ. ಈ ಹಿನ್ನೆಲೆಯಲ್ಲಿ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಇನ್ನುಳಿದ ಭಾಗದಿಂದ ಹೊರ ನಡೆದಿದ್ದಾರೆ ಎಂದು ತಿಳಿದುಬಂದಿದೆ.

ಮಾದಕ ದ್ರವ್ಯ ಬಳಿಸಿದ ಕಗಸೊ ರಬಾಡ ಅಮಾನತು.

ನವದೆಹಲಿ: ದಕ್ಷಿಣ ಆಫ್ರಿಕಾ ಹಾಗೂ ಗುಜರಾತ್ ಟೈಟನ್ಸ್ (Gujarat Titans) ತಂಡದ ವೇಗಿ ಕಗಿಸೊ ರಬಾಡ (Kagiso Rabada) ಮೊದಲ ಎರಡು ಪಂದ್ಯಗಳ ನಂತರ 2025ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಟೂರ್ನಿಯನ್ನು ತೊರೆದು ತಮ್ಮ ದೇಶಕ್ಕೆ ಮರಳಿದ್ದರು. ಅವರು ಗುಜರಾತ್ ಟೈಟನ್ಸ್ ತಂಡದ ಭಾಗವಾಗಿದ್ದಾರೆ. ಆರಂಭದಲ್ಲಿ ರಬಾಡ ವೈಯಕ್ತಿಕ ಕಾರಣಗಳಿಗಾಗಿ ಅವರ ದೇಶಕ್ಕೆ ತೆರಳಿದ್ದಾರೆಂದು ವರದಿಯಾಗಿತ್ತು. ಆದರೆ ವೈಯಕ್ತಿಕ ಕಾರಣ ಏನೆಂದು ಯಾರಿಗೂ ತಿಳಿದಿರಲಿಲ್ಲ. ಈಗ ರಬಾಡ ಸ್ವತಃ ದಕ್ಷಿಣ ಆಫ್ರಿಕಾಕ್ಕೆ ಮರಳಲು ಕಾರಣವನ್ನು ವಿವರಿಸುವ ಹೇಳಿಕೆಯನ್ನು ನೀಡಿದ್ದಾರೆ. ಕಳೆದ ವರ್ಷದ ಅಂತ್ಯದಲ್ಲಿ ಗುಜರಾತ್ ಟೈಟನ್ಸ್ 10.75 ಕೋಟಿ ರೂ.ಗಳನ್ನು ಖರ್ಚು ಮಾಡಿ ಕಗಿಸೊ ರಬಾಡ ಅವರನ್ನು ಖರೀದಿಸಿತ್ತು.
ದಕ್ಷಿಣ ಆಫ್ರಿಕಾದ ವೇಗದ ಬೌಲರ್ ಕಗಿಸೊ ರಬಾಡ ಮಾದಕ ದ್ರವ್ಯ ಸೇವನೆಗಾಗಿ ತಾತ್ಕಾಲಿಕವಾಗಿ ನಿಷೇಧಕ್ಕೊಳಗಾಗಿದ್ದಾರೆ. ಈ ಸುದ್ದಿ ಶನಿವಾರ ಹೊರಬಿದ್ದಿದೆ. ರಬಾಡ ಸ್ವತಃ ಹೇಳಿಕೆ ನೀಡಿ ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ನಿಯಮಗಳಿಗೆ ವಿರುದ್ಧವಾದ ದ್ರವ್ಯವನ್ನು ಬಳಸಿದಕ್ಕಾಗಿ ರಬಾಡ ಬೇಸರ ವ್ಯಕ್ತಪಡಿಸಿದ್ದಾರೆ. ಇದರಿಂದಾಗಿ ಅವರು ತಾತ್ಕಾಲಿಕವಾಗಿ ಕ್ರಿಕೆಟ್‌ನಿಂದ ದೂರ ಉಳಿಯಬೇಕಾಗುತ್ತದೆ. ಇದಕ್ಕಾಗಿ ಅವರು ಕ್ಷಮೆಯನ್ನೂ ಕೂಡ ಕೇಳಿದ್ದಾರೆ.
IPL 2025: ಆರ್‌ಸಿಬಿ ಈ ಸಲ ಕಪ್ ಗೆಲ್ಲುವ ನೆಚ್ಚಿನ ತಂಡ ಎಂದ ಸುನೀಲ್ ಗವಾಸ್ಕರ್!
ಕಗಿಸೊ ರಬಾಡ ಹೇಳಿದ್ದೇನು?
"ಹೇಳಿದಂತೆ, ನಾನು ಇತ್ತೀಚೆಗೆ ವೈಯಕ್ತಿಕ ಕಾರಣಗಳಿಗಾಗಿ ಐಪಿಎಲ್ ಮಧ್ಯದಲ್ಲಿ ದಕ್ಷಿಣ ಆಫ್ರಿಕಾಕ್ಕೆ ಮರಳಿದ್ದೇನೆ. ನಾನು ಔಷಧಿ ಪರೀಕ್ಷೆಯಲ್ಲಿ ಪಾಸಿಟಿವ್ ಬಂದ ಕಾರಣ ಇದು ಸಂಭವಿಸಿದೆ. ನಾನು ನಿರಾಶೆಗೊಳಿಸಿದ ಎಲ್ಲ ಜನರಿಗೆ ನಾನು ಹೃತ್ಪೂರ್ವಕವಾಗಿ ಕ್ಷಮೆಯಾಚಿಸುತ್ತೇನೆ. ಕ್ರಿಕೆಟ್ ಆಡುವ ಸವಲತ್ತನ್ನು ನಾನು ಎಂದಿಗೂ ಹಗುರವಾಗಿ ತೆಗೆದುಕೊಳ್ಳುವುದಿಲ್ಲ. ಈ ಸವಲತ್ತು ನನಗಿಂತ ಬಹಳ ದೊಡ್ಡದು. ಇದು ನನ್ನ ವೈಯಕ್ತಿಕ ಆಕಾಂಕ್ಷೆಗಳನ್ನು ಮೀರಿದ್ದು," ಎಂದು ತಿಳಿಸಿದ್ದಾರೆ.
South Africa fast bowler Kagiso Rabada has revealed he is serving a provisional suspension after testing positive for a recreational drug. pic.twitter.com/nmM3km16Cc
— Sky Sports Cricket (@SkyCricket) May 3, 2025
ಎಲ್ಲರಿಗೂ ಧನ್ಯವಾದ ಅರ್ಪಿಸಿದ ರಬಾಡ
ತನ್ನ ಕಷ್ಟದ ಸಮಯದಲ್ಲಿ ಬೆಂಬಲಿಸಿದವರಿಗೆ ಕಗಿಸೊ ರಬಾಡ ಧನ್ಯವಾದ ಅರ್ಪಿಸಿದ್ದಾರೆ. "ಕಠಿಣ ಸನ್ನಿವೇಶದಲ್ಲಿ ನನಗೆ ಬೆಂಬಲಿಸಿದ ನನ್ನ ಏಜೆಂಟ್, ಕ್ರಿಕೆಟ್ ದಕ್ಷಿಣ ಆಫ್ರಿಕಾ ಮತ್ತು ಗುಜರಾತ್ ಟೈಟನ್ಸ್‌ಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ದಕ್ಷಿಣ ಆಫ್ರಿಕಾದ ಕ್ರಿಕೆಟಿಗರ ಸಂಘ ಮತ್ತು ನನ್ನ ಕಾನೂನು ತಂಡಕ್ಕೆ ಅವರ ಮಾರ್ಗದರ್ಶನ ಮತ್ತು ಸಲಹೆಗಾಗಿ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ. ಎಲ್ಲಕ್ಕಿಂತ ಮುಖ್ಯವಾಗಿ, ನನ್ನ ಸ್ನೇಹಿತರು ಮತ್ತು ಕುಟುಂಬದವರ ತಿಳುವಳಿಕೆ ಮತ್ತು ಪ್ರೀತಿಗಾಗಿ ನಾನು ಅವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ," ಎಂದು ಹೇಳಿದ್ದಾರೆ.
IPL 2025: ತಾವು ಎದುರಿಸಿದ ಅತ್ಯಂತ ಕಠಿಣ ಬೌಲರ್ ಅನ್ನು ಆರಿಸಿದ ವಿರಾಟ್ ಕೊಹ್ಲಿ!
ಕಗಿಸೊ ರಬಾಡ ಅವರು ಎಷ್ಟು ಸಮಯದವರೆಗೆ ನಿಷೇಧಕ್ಕೊಳಗಾಗಿದ್ದಾರೆ ಎಂಬುದರ ಕುರಿತು ಪೋಸ್ಟ್‌ನಲ್ಲಿ ಮಾಹಿತಿಯನ್ನು ನೀಡಿಲ್ಲ. ರಬಾಡ ಅವರನ್ನು ಎಷ್ಟು ಕಾಲ ನಿಷೇಧಿಸಲಾಗುತ್ತದೆ ಮತ್ತು ಅವರು ಯಾವಾಗ ಕ್ರಿಕೆಟ್‌ಗೆ ಮರಳಬಹುದು ಎಂಬುದು ತೀವ್ರ ಆಸಕ್ತಿಯನ್ನು ಕೆರಳಿಸಿದೆ. ಸದ್ಯಕ್ಕೆ, ರಬಾಡ ತಮ್ಮ ಅಭಿಮಾನಿಗಳು ಮತ್ತು ಹಿತೈಷಿಗಳು ತಾಳ್ಮೆಯಿಂದಿರುವಂತೆ ಮನವಿ ಮಾಡಿದ್ದಾರೆ.