Nirmal Kapoor: ನಟ ಅನಿಲ್ ಕಪೂರ್ ತಾಯಿಯ ಅಂತಿಮ ದರ್ಶನಕ್ಕೆ ಆಗಮಿಸಿದ ಬಾಲಿವುಡ್ ಗಣ್ಯರು
ಬಾಲಿವುಡ್ ನಟರಾದ ಅನಿಲ್ ಕಪೂರ್ (Anil Kapoor), ಸಂಜಯ್ ಕಪೂರ್ (Sanjay Kapoor) ಹಾಗೂ ಚಿತ್ರ ನಿರ್ಮಾಪಕ ಬೋನಿ ಕಪೂರ್ (Boni Kapoor) ಅವರ ತಾಯಿ ನಿರ್ಮಲ್ ಕಪೂರ್ (Nirmal Kapoor) ವಯೋಸಹಜ ಸಮಸ್ಯೆಗಳಿಂದ ಮೇ 2ರಂದು ನಿಧನರಾಗಿದ್ದು, ಅವರ ಅಂತ್ಯಕ್ರಿಯೆ ಮುಂಬೈನ ವಿಲೇ ಪಾರ್ಲೆ ಸ್ಮಶಾನದಲ್ಲಿ ನೆರವೇರಿಸಲಾಯಿತು. ಅವರ ಅಂತಿಮ ದರ್ಶನಕ್ಕಾಗಿ ಬಾಲಿವುಡ್ ನ ಅನೇಕ ತಾರೆಯರು, ಚಿತ್ರ ನಿರ್ಮಾಪಕರು ಆಗಮಿಸಿದ್ದರು.



ಕಳೆದ ವರ್ಷ ಸಪ್ಟೆಂಬರ್ನಲ್ಲಿ 90ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದ ಬಾಲಿವುಡ್ ನಟರಾದ ಅನಿಲ್ ಕಪೂರ್, ಸಂಜಯ್ ಕಪೂರ್ ಹಾಗೂ ಚಿತ್ರ ನಿರ್ಮಾಪಕ ಬೋನಿ ಕಪೂರ್ ಅವರ ತಾಯಿ ನಿರ್ಮಲ್ ಕಪೂರ್ ವಯೋಸಹಜ ಸಮಸ್ಯೆಗಳಿಂದ ಶುಕ್ರವಾರ ಕೋಕಿಲಾಬೆನ್ ಧೀರೂಭಾಯಿ ಅಂಬಾನಿ ಆಸ್ಪತ್ರೆಯಲ್ಲಿ ನಿಧನರಾದರು.

ನಿರ್ಮಲ್ ಕಪೂರ್ ಅವರ ಅಂತ್ಯಕ್ರಿಯೆಯನ್ನು ಮುಂಬೈನ ವಿಲೇ ಪಾರ್ಲೆ ಸ್ಮಶಾನದಲ್ಲಿ ನೆರವೇರಿಸಲಾಗಿದೆ. ಇದಕ್ಕೂ ಮುನ್ನ ಅವರ ಅಂತಿಮ ದರ್ಶನಕ್ಕಾಗಿ ಬೋನಿ ಕಪೂರ್ ಮತ್ತು ಶ್ರೀದೇವಿ ದಂಪತಿಯ ಮಕ್ಕಳಾದ ನಟಿ ಜಾಹ್ನವಿ ಕಪೂರ್ ಮತ್ತು ಖುಷಿ ಕಪೂರ್ ಆಗಮಿಸಿದರು. ವಿಲೇ ಪಾರ್ಲೆಯ ಸ್ಮಶಾನದಲ್ಲಿ ನಡೆದ ತಮ್ಮ ಅಜ್ಜಿ ನಿರ್ಮಲ್ ಕಪೂರ್ ಅವರ ಅಂತ್ಯಕ್ರಿಯೆಯಲ್ಲಿ ಅವರು ಪಾಲ್ಗೊಂಡರು.

ಪ್ರಸಿದ್ಧ ನಿರ್ಮಾಪಕ ಸುರಿಂದರ್ ಕಪೂರ್ ಅವರ ಪತ್ನಿಯಾಗಿರುವ ನಿರ್ಮಲ್ ಕಪೂರ್ ಅವರ ಅಂತ್ಯಕ್ರಿಯೆಯಲ್ಲಿ ಧರ್ಮ ಪ್ರೊಡಕ್ಷನ್ಸ್ ಸಿಇಒ ಅಪೂರ್ವ ಮೆಹ್ತಾ ಪಾಲ್ಗೊಂಡಿದ್ದರು. ಶ್ಯಾಮ್ ಕೌಶಲ್ ಅವರು ನಿರ್ಮಲ್ ಕಪೂರ್ ಅವರ ನಿವಾಸದ ಹೊರಗೆ ಅವರಿಗೆ ಗೌರವ ಸಲ್ಲಿಸಿದರು.

ಕಪೂರ್ ಕುಟುಂಬದ ಆಪ್ತ ಸ್ನೇಹಿತರಾಗಿರುವ ಚಲನಚಿತ್ರ ನಿರ್ಮಾಪಕ ಕರಣ್ ಜೋಹರ್, ನಟಿ ರಾಣಿ ಮುಖರ್ಜಿ ಕೂಡ ನಿರ್ಮಲ್ ಕಪೂರ್ ಅವರ ಅಂತಿಮ ದರ್ಶನ ಪಡೆದು ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡರು. ನಟ ಫರ್ದೀನ್ ಖಾನ್ ಕೂಡ ನಿರ್ಮಲ್ ಕಪೂರ್ ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ವಿಲೇ ಪಾರ್ಲೆ ಸ್ಮಶಾನಕ್ಕೆ ಆಗಮಿಸಿದ್ದರು.

ʼಹಮ್ ಪಾಂಚ್ʼ, ʼವೋ ಸಾತ್ ದಿನ್ʼ, ʼಲೋಫರ್ʼ, ʼಜುದಾಯಿʼ ಮತ್ತು ʼಹಮಾರಾ ದಿಲ್ ಆಪ್ಕೆ ಪಾಸ್ ಹೈʼ ಮುಂತಾದ ಚಿತ್ರಗಳಿಗೆ ಸಹ ನಿರ್ಮಾಪಕಿಯಾಗಿದ್ದ ನಿರ್ಮಲ್ ಕಪೂರ್ ಅವರ ನಿಧನದಿಂದ ದುಃಖಿತರಾಗಿರುವ ಕಪೂರ್ ಕುಟುಂಬಕ್ಕೆ ಧೈರ್ಯ ತುಂಬಲು ಚಲನಚಿತ್ರ ನಿರ್ಮಾಪಕ ಅಯಾನ್ ಮುಖರ್ಜಿ, ನಟ ಅನುಪಮ್ ಖೇರ್ ಕೂಡ ಆಗಮಿಸಿದ್ದರು.

ಅನಿಲ್ ಕಪೂರ್, ಅವರ ಸಹೋದರ ಸಂಜಯ್ ಕಪೂರ್ ಅವರು ತಾಯಿಗೆ ಅಂತಿಮ ನಮನ ಸಲ್ಲಿಸಲು ನಿರ್ಮಲ್ ಕಪೂರ್ ಅವರ ಮನೆಗೆ ಬಂದಿದ್ದರು. ಈ ವೇಳೆ ಇವರ ಸಹೋದರ ಮತ್ತು ಚಲನಚಿತ್ರ ನಿರ್ಮಾಪಕ ಬೋನಿ ಕಪೂರ್ ಕೂಡ ಜತೆ ಸೇರಿಕೊಂಡರು.

ನಟ ಅರ್ಜುನ್ ಕಪೂರ್ ತಮ್ಮ ಅಜ್ಜಿ ನಿರ್ಮಲ್ ಕಪೂರ್ ಅವರ ಮೃತ ದೇಹವನ್ನು ಹೊತ್ತ ಆಂಬ್ಯುಲೆನ್ಸ್ನೊಂದಿಗೆ ಸ್ಮಶಾನಕ್ಕೆ ಆಗಮಿಸಿದ್ದು, ನಟಿ ಸೋನಮ್ ಕಪೂರ್ ಕೂಡ ತಮ್ಮ ಅಜ್ಜಿಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ವಿಲೇ ಪಾರ್ಲೆ ಸ್ಮಶಾನಕ್ಕೆ ಆಗಮಿಸಿದರು. ನಿರ್ಮಲ್ ಕಪೂರ್ ಅವರ ಸೊಸೆ ಮಹೀಪ್ ಅವರ ಮಕ್ಕಳಾದ ಶನಯಾ ಮತ್ತು ಜಹಾನ್ ಅವರೊಂದಿಗೆ ಭಾಗವಹಿಸಿದರು.

ನಟ ಫರ್ಹಾನ್ ಅಕ್ತರ್ ಮತ್ತು ಅವರ ಪತ್ನಿ ಶಿಬಾನಿ ದಂಡೇಕರ್, ಚಿತ್ರ ನಿರ್ಮಾಪಕ ಹಾಗೂ ನಟ ಫರ್ಹಾನ್ ಸಹೋದರ ಜೋಯಾ ಅಖ್ತರ್ ಅವರು ಕೂಡ ನಿರ್ಮಲ್ ಕಪೂರ್ ಅವರಿಗೆ ಅಂತಿಮ ನಮನ ಸಲ್ಲಿಸಿದರು.