Saturday, 27th July 2024

ತುಮಕೂರು: ಜಿಲ್ಲೆಯ ಸರಕಾರಿ ಪ್ರೌಢಶಾಲೆಯ 10 ಮಂದಿ ಶಿಕ್ಷಕರ ಬಂಧನ

ಶಿಕ್ಷಕರ ನೇಮಕ ಅಕ್ರಮ

ಪರೀಕ್ಷೆ ಬರೆಯದೆ ನೇಮಕಾತಿ

ತುಮಕೂರು: 2014-15ರಲ್ಲಿ ನಡೆದಿದ್ದ ಶಿಕ್ಷಕರ ನೇಮಕಾತಿಯಲ್ಲಿ ಅಕ್ರಮ ಸಂಬಂಧ, ಜಿಲ್ಲೆಯ 10 ಮಂದಿ ಸರಕಾರಿ ಪ್ರೌಢ ಶಾಲೆಯ ಶಿಕ್ಷಕರನ್ನು ಸಿಐಡಿ ಅಧಿಕಾರಿಗಳು ಬಂಧಿಸಿದ್ದಾರೆ.
ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆ ನೀಡಿದ್ದ ದೂರಿನನ್ವಯ ಪರೀಕ್ಷೆ ಬರೆಯದೆ ಶಿಕ್ಷಕ ಹುದ್ದೆ ಗಿಟ್ಟಿಸಿಕೊಂಡಿದ್ದ ನಕಲಿ ಶಿಕ್ಷಕರನ್ನು ಸಿಐಡಿ ಅಧಿಕಾರಿಗಳು ಬಂಧಿಸಿ ವಿಚಾರಣೆ ಕೈಗೊಂಡಿದ್ದಾರೆ.
ಅರ್ಜಿ ಸಲ್ಲಿಸದಿದ್ದರೂ ಅಕ್ರಮವಾಗಿ ಆರೋಪಿತರನ್ನು ಪ್ರೌಢಶಾಲಾ ಶಿಕ್ಷಕರಾಗಿ ನೇಮಕಾತಿ ಮಾಡಲಾಗಿತ್ತು ಈ ಸಂಬಂಧ ಇವರ ವಿರುದ್ಧ ಅಪರಾಧ ಸಂಖ್ಯೆ 56/2022, ಐಪಿಸಿ ಕಲಂ 34,420,465,468,471ರ ಅಡಿ ದೂರು ದಾಖಲಾಗಿತ್ತು. ಸದರಿ ಪ್ರಕರಣ ವನ್ನು ಸಿಐಡಿಗೆ ವಹಿಸುತಂತೆ ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಆಗ್ರಹಿಸಿತ್ತು.
ಬಂಧಿತ ಶಿಕ್ಷಕರು
1.ಚಿಕ್ಕನಾಯಕನಹಳ್ಳಿ ತಾಲೂಕಿನ ಬೋರನಕಣಿವೆ ಸರಕಾರಿ ಪ್ರೌಢಶಾಲೆಯ ಸಹಶಿಕ್ಷಕಿ ಶಮೀನಾಜ್ ಭಾನು.
2.ಕುಣಿಗಲ್ ತಾಲೂಕಿನ ಕೊಡವತ್ತಿ ಪ್ರೌಢಶಾಲೆಯ ಸಹಶಿಕ್ಷಕಿ ರಾಜೇಶ್ವರಿ.
3.ಕುಣಿಗಲ್ ತಾಲೂಕಿನ ಹೊಳಗೇರಿಪುರ ಪ್ರೌಢಶಾಲೆಯ ಸಹಶಿಕ್ಷಕ ಆರ್.ಹರೀಶ್.
4.ಕುಣಿಗಲ್ ತಾಲೂಕಿನ ನಾಗಸಂದ್ರ ಪ್ರೌಢಶಾಲೆಯ ಸಹಶಿಕ್ಷಕಿ ನಾಗರತ್ನ.
5.ಕುಣಿಗಲ್ ತಾಲೂಕಿನ ಅಮೃತೂರು ಕೆ.ಪಿ.ಎಸ್ ಶಾಲೆಯ ಸಹಶಿಕ್ಷಕ ಬಿ.ಎನ್.ನವೀನ್ ಕುಮಾರ್.
6.ತಿಪಟೂರು ತಾಲೂಕಿನ ಆಲ್ಬೂರು ಸರಕಾರಿ ಪ್ರೌಢಶಾಲೆಯ ಸಹಶಿಕ್ಷಕಿ ಕಮಲ.
7.ತುರುವೇಕೆರೆ ತಾಲೂಕಿನ ಹುಲಿಕಲ್ ಸರಕಾರಿ ಪ್ರೌಢಶಾಲೆಯ ಸಹಶಿಕ್ಷಕ ಬಿ.ಎನ್.ನವೀನ್.
8.ತುರುವೇಕೆರೆ ತಾಲೂಕಿನ ಹುಲಿಕಲ್ ಸರಕಾರಿ ಪ್ರೌಢಶಾಲೆಯ ಸಹಶಿಕ್ಷಕ ಹನುಮನಗೌಡ.
9.ತುರುವೇಕೆರೆ ತಾಲೂಕಿನ ಹುಲಿಕೆರೆ ಸರಕಾರಿ ಪ್ರೌಢಶಾಲೆಯ ಸಹಶಿಕ್ಷಕ ಬಿ.ಎಂ.ಪ್ರಸನ್ನ.
10.ಗುಬ್ಬಿ ತಾಲೂಕಿನ ಕೆ.ಮತ್ತಿಘಟ್ಟ ಸರಕಾರಿ ಸಂಯುಕ್ತ ಪ್ರೌಢಶಾಲೆಯ ಸಹಶಿಕ್ಷಕ ಎಸ್.ದೇವೇಂದ್ರ ನಾಯಕ.
error: Content is protected !!