Friday, 21st June 2024

ಸಿಂಧನೂರು ಪಿಡಬ್ಲುಡಿ ಕ್ಯಾಂಪ್ ಬಳಿ ಅಪಘಾತ: ವೃದ್ಧ ದಂಪತಿಗೆ ಗಾಯ

ರಾಯಚೂರು: ಜಿಲ್ಲೆ‌ ಸಿಂಧನೂರು ತಾಲ್ಲೂಕಿನ ಪಿಡಬ್ಲುಡಿ ಕ್ಯಾಂಪ್ ಬಳಿ ಮಂತ್ರಾಲ ಯಕ್ಕೆ ಹೋಗಿ ವಾಪಸ್‌ ಬರುತ್ತಿದ್ದ ವೇಳೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ.

ಇದರ ಪರಿಣಾಮವಾಗಿ ವೃದ್ಧ ದಂಪತಿಗೆ ಗಂಭೀರ ಗಾಯವಾಗಿದೆ. ಸತ್ಯನಾರಾಯಣ (63) ಹಾಗೂ ರಮಾದೇವಿ (50) ದಂಪತಿಗೆ ಗಂಭೀರ ಗಾಯವಾಗಿದೆ. ಸಂಬಂಧಿ ಶ್ರೀದೇವಿ ಹಾಗೂ ಕಾರು ಚಾಲಕ ಸತ್ಯನಾರಾಯಣಗೂ ಗಾಯವಾಗಿದೆ. ಕಾರ್ ನಲ್ಲಿದ್ದ ಇನ್ನಿಬ್ಬರ ಮಕ್ಕಳು ಅಪಾಯದಿಂದ ಪಾರಾಗಿದ್ದಾರೆ.

ಗಾಯಾಳುಗಳು ಮೂಲತಃ ಸಿಂಧನೂರು ತಾಲ್ಲೂಕಿನ ಪಗಡದಿನ್ನಿ ಗ್ರಾಮದಲ್ಲಿ ನಡೆದಿದೆ. ನಿನ್ನೆ ಕುಟುಂಬ ಸಮೇತರಾಗಿ ಮಂತ್ರಾ ಲಯ ರಾಯರ ದರ್ಶನಕ್ಕೆ ಹೋಗಿದ್ದ ವಾಪಾಸ್ ಬರ್ತಿದ್ದರು. ಈ ವೇಳೆ ದುರ್ಘಟನೆ ಸಂಭವಿಸಿದೆ.

ನಾಯಿ ಅಡ್ಡ ಬಂದ ಕಾರಣ ನಿಯಂತ್ರಣ ತಪ್ಪಿ ನಿಂತಿದ್ದ ಲಾರಿಗೆ ಕಾರು ಡಿಕ್ಕಿ ಹೊಡೆದಿದೆ. ಈ ರಭಸಕ್ಕೆ ಸತ್ಯನಾರಾಯಣ ಹಾಗೂ ರಮಾದೇವಿಗೆ ಗಂಭೀರ ಗಾಯವಾಗಿದೆ. ಗಾಯಾಳು ಹೆಚ್ಚಿನ ಚಿಕಿತ್ಸೆಗಾಗಿ ಇಬ್ಬರನ್ನು ಬಳ್ಳಾರಿಗೆ ಶಿಫ್ಟ್ ಮಾಡಲಾಗಿದೆ.

error: Content is protected !!