Wednesday, 11th December 2024

ಬೆಂಗಳೂರು ಬಂದ್: ನಾಳೆ ಬಸ್ ಸಂಚಾರ ಇಲ್ಲ

ಬೆಂಗಳೂರು: ಕಾವೇರಿ ಕಿಚ್ಚು ತೀವ್ರ ಸ್ವರೂಪ ಪಡೆಯುತ್ತಿದ್ದು, ಮಂಗಳವಾರ ಬೆಂಗಳೂರು ಬಂದ್ ಗೆ ವ್ಯಾಪಕ ಬೆಂಬಲ ಕೂಡ ವಿವಿಧ ಸಂಘಟನೆಗಳಿಂದ ವ್ಯಕ್ತವಾಗಿದೆ.

ಕೆ ಎಸ್ ಆರ್ ಟಿಸಿ ಹಾಗೂ ಬಿಎಂಟಿಸಿ ಸಿಬ್ಬಂದಿಗಳ ಒಕ್ಕೂಟ ಕೂಡ ಬಂದ್ ಗೆ ಬೆಂಬಲ ನೀಡಿದೆ. ಹೀಗಾಗಿ, ಮಂಗಳವಾರ ಬೆಂಗಳೂರು ನಗರದಲ್ಲಿ ಬಸ್ ಸಂಚಾರ ಬಂದ್ ಆಗಲಿದೆ.

ಸೆ.26ರಂದು ಬೆಂಗಳೂರು ಬಂದ್ ಗೆ ಕರೆ ನೀಡಲಾಗಿದೆ. ರೈತ ಸಂಘಟನೆಗಳು, ಕನ್ನಡಪರ ಸಂಘಟನೆಗಳು ಬಂದ್ ಗೆ ಕರೆ ಕೊಟ್ಟಿದ್ದು ಈವರೆಗೆ ನೂರಾರು ಸಂಘಟನೆಗಳು ಬಂದ್ ನಲ್ಲಿ ಭಾಗವಹಿಸುವುದಾಗಿ ಬೆಂಬಲ ಘೋಷಣೆ ಮಾಡಿದ್ದಾರೆ.

ಇದೀಗ ಕೆ ಎಸ್ ಆರ್ ಟಿ ಸಿ ಹಾಗೂ ಬಿಎಂಟಿಸಿ ಸಿಬ್ಬಂದಿ ಒಕ್ಕೂಟದ ಅಧ್ಯಕ್ಷ ಅನಂತ ಸುಬ್ಬರಾವ್ ಅವರು ಬೆಂಗಳೂರು ಬಂದ್ ಗೆ ಬೆಂಬಲ ಘೋಷಣೆ ಮಾಡಿದ್ದಾರೆ.

ನಾಳೆ ಕಾವೇರಿ ನದಿ ನೀರಿಗಾಗಿ ನಡೆಸಲಾಗುತ್ತಿರುವ ಬೆಂಗಳೂರು ಬಂದ್ ಗೆ ತಮ್ಮ ಸಂಘಟನೆಯಿಂದ ಬೆಂಬಲ ನೀಡುತ್ತಿದ್ದೇವೆ. ನಾಡು, ನೆಲ, ಜಲದ ವಿಷಯದಲ್ಲಿ ನಾವೆಂದೂ ಹಿಂದೆ ಸರಿಯುವುದಿಲ್ಲ ಎಂದು ತಿಳಿಸಿದ್ದಾರೆ.