Sunday, 8th September 2024

ರೇಖಾ ಪರಶುರಾಮ ಬೆಕಿನಾಳ ಅವಿರೋಧ ಆಯ್ಕೆ

ಬಸವನಬಾಗೇವಾಡಿ: ಪಟ್ಟಣದ ಪುರಸಭೆ ಅಧ್ಯಕ್ಷ ಸ್ಥಾನಕ್ಕೆ ಶನಿವಾರ ಜರುಗಿದ ಚುನಾವಣೆಯಲ್ಲಿ ೧೨ ನೇ ವಾರ್ಡಿನ ಪುರಸಭೆ ಸದಸ್ಯೆ ರೇಖಾ ಪರಶುರಾಮ ಬೆಕಿನಾಳ ಅವರು ಅವಿರೋಧವಾಗಿ ಆಯ್ಕೆಯಾದರು ಎಂದು ಚುನಾವಣಾಧಿಕಾರಿ ಯಾದ ತಹಸೀಲ್ದಾರ ವಿಜಯಕುಮಾರ ಕಡಕೋಳ ಘೋಷಿಸಿದರು.
ಪಟ್ಟಣದ ಪುರಸಭೆಯು ೨೩ ಸದಸ್ಯ ಬಲ ಹೊಂದಿದೆ. ಇದರಲ್ಲಿ ೧೨ ಜನ ಕಾಂಗ್ರೆಸ್ ಸದಸ್ಯರು, ೬ ಜನ ಬಿಜೆಪಿ ಸದಸ್ಯರು, ೫ ಜನ ಪಕ್ಷೇತರ ಸದಸ್ಯರಿದ್ದಾರೆ. ಚುನಾವಣೆ ಪ್ರಕ್ರಿಯೆಯಲ್ಲಿ ಪುರಸಭೆ ಸದಸ್ಯರು ಸೇರಿದಂತೆ ಸಂಸದರು, ಶಾಸಕರು ಸೇರಿ ಒಟ್ಟು ೨೫ ಸದಸ್ಯರು ಭಾಗವಹಿಸ ಬೇಕಾಗಿತ್ತು. ಇಂದು ಜರುಗಿದ ಚುನಾವಣೆಯಲ್ಲಿ ಶಾಸಕ ಶಿವಾನಂದ ಪಾಟೀಲ ಸೇರಿದಂತೆ ಒಟ್ಟು ೧೬ ಸದಸ್ಯರು ಭಾಗವಹಿಸಿದ್ದರು.
ಸಂಸದ ರಮೇಶ ಜಿಗಜಿಣಗಿ ಸೇರಿದಂತೆ ಒಟ್ಟು ೯ ಸದಸ್ಯರು ಗೈರು ಇದ್ದರು. ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಾತಿ ಹೊಂದಿದೆ. ಈ ಸ್ಥಾನಕ್ಕೆ ೧೨ ನೇ ವಾರ್ಡಿನ ಸದಸ್ಯೆ ರೇಖಾ ಪರಶುರಾಮ ಬೆಕಿನಾಳ ಒಬ್ಬರೇ ನಾಮಪತ್ರ ಸಲ್ಲಿಸಿದ್ದರು. ಒಟ್ಟು ೨೫ ಸದಸ್ಯರಲ್ಲಿ ೧೬ ಸದಸ್ಯರು ಸಭೆಗೆ ಹಾಜರಾಗಿದ್ದು ಕೋರಂ ಭರ್ತಿ ಇರುವದರಿಂದಾಗಿ ಸಭೆ ನಡೆಸ ಲಾಯಿತು. ಚುನಾವಣೆಯಲ್ಲಿ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದಾಗಿ ನಾಮಪತ್ರ ಸಲ್ಲಿಸಿದ್ದ ರೇಖಾ ಪರಶುರಾಮ ಬೆಕಿನಾಳ ಅವರನ್ನು ಅವಿರೋಧವಾಗಿ ಅಧ್ಯಕ್ಷರೆಂದು ಪ್ರಕಟಿಸಲಾಯಿತು ಎಂದು ತಹಸೀಲ್ದಾರ ವಿಜಯಕುಮಾರ ಕಡಕೋಳ ತಿಳಿಸಿ ದರು.
ಚುನಾವಣೆ ಪ್ರಕ್ರಿಯೆಯಲ್ಲಿ ಪುರಸಭೆ ಮುಖ್ಯಾಧಿಕಾರಿ ಬಿ.ಐ.ಹಿರೇಮಠ, ಪುರಸಭೆ ವ್ಯವಸ್ಥಾಪಕ ಎ.ಬಿ.ಕಲಾದಗಿ, ತಹಸೀಲ್ದಾರ ಸಿಬ್ಬಂದಿ ಬಿ.ಜಿ.ದಾನಿ ಸಹಾಯಕರಾಗಿ ಕಾರ್ಯನಿರ್ವಹಿಸಿದರು.
ವಿಜಯೋತ್ಸವಃ ಪುರಸಭೆಗೆ ರೇಖಾ ಬೆಕಿನಾಳ ಅವರು ಅಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾಗುವ ಸುದ್ದಿ ತಿಳಿಯು ತ್ತಿದ್ದಂತೆ ಪುರಸಭೆ ಮುಂಭಾಗ ಜಮಾಯಿಸಿದ್ದ ಕಾಂಗ್ರೆಸ್ ಮುಖಂಡರು, ಡಿಎಸ್‌ಎಸ್ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಪಟಾಕ್ಷಿ ಸಿಡಿಸಿ ಪರಸ್ಪರ ಗುಲಾಲು ಎರಚಿಕೊಂಡು ವಿಜಯೋತ್ಸವವನ್ನು ಆಚರಿಸಿದರು.
ನೂತನ ಅಧ್ಯಕ್ಷ ರೇಖಾ ಬೆಕಿನಾಳ ಅವರು ತಮ್ಮ ಮುಖಂಡರೊಂದಿಗೆ, ಕಾರ್ಯಕರ್ತರೊಂದಿಗೆ ಮೊದಲು ಡಾ.ಬಿ.ಆರ್. ಅಂಬೇಡ್ಕರ ವೃತ್ತಕ್ಕೆ ತೆರಳಿ ಡಾ.ಅಂಬೇಡ್ಕರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಮೆರವಣಿಗೆ ಮೂಲಕ ಆಗಮಿಸಿ ಬಸವೇಶ್ವರ ಪ್ರತಿಮೆಗೆ ಮಾಲಾರ್ಪಣೆ, ಬಸವೇಶ್ವರ ದೇವಸ್ಥಾನಕ್ಕೆ ತೆರಳಿ ಮೂಲನಂದೀಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿದರು.
ವಿಜಯೋತ್ಸವದಲ್ಲಿ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಈರಣ್ಣ ಪಟ್ಟಣಶೆಟ್ಟಿ, ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಸುರೇಶ ಹಾರಿ ವಾಳ, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಅಶೋಕ ಹಾರಿವಾಳ, ಮುಖಂಡರಾದ ಬಸವರಾಜ ಗೊಳಸಂಗಿ,ಬಸಣ್ಣ ದೇಸಾಯಿ, ಶರಣಪ್ಪ ಬೆಲ್ಲದ, ನಿಸಾರ ಚೌಧರಿ,ಶೇಖರ ಗೊಳಸಂಗಿ, ರವಿ ರಾಠೋಡ, ಸಂಕನಗೌಡ ಪಾಟೀಲ, ಡಿಎಸ್‌ಎಸ್ ಮುಖಂಡ ರಾದ ಮಹೇಶ ಬೆಕಿನಾಳ, ಅರವಿಂದ ಸಾಲವಾಡಗಿ, ಮಹಾಂತೇಶ ಸಾಸಾಬಾಳ, ಅಶೋಕ ಚಲವಾದಿ, ರಾಹುಲ ಕುಬಕಡ್ಡಿ, ಸಂಜೀವ ಕಲ್ಯಾಣಿ, ಪರಶು ಮ್ಯಾಗೇರಿ, ಪರಶುರಾಮ ಬೆಕಿನಾಳ, ಯಮನಪ್ಪ ಮಡಿಕೇಶ್ವರ, ಸೋಮು ನಡಗೇರಿ,ಪುಂಡಲೀಕ ಬ್ಯಾಳಿ, ಬಾಲು ಬೆಕಿನಾಳ, ರಮೇಶ ಮ್ಯಾಗೇರಿ, ಸುರೇಶ ನಡಗೇರಿ, ಸದಸ್ಯರಾದ ಜಗದೇವಿ ಗುಂಡಳ್ಳಿ, ಪ್ರವೀಣ ಪೂಜಾರಿ, ನಜೀರ ಗಣಿ, ರವಿ ನಾಯ್ಕೋಡಿ, ಅಬ್ದುಲ್‌ ರಹೀಮಾನ ಚೌಧರಿ, ಗೀತಾ ಬಾಗೇವಾಡಿ, ರಾಜು ಲಮಾಣಿ, ದೇವೇಂದ್ರ ಚವ್ಹಾಣ, ಸುಭಾಂಗಿಣಿ ಗಾಯಕವಾಡ, ಅನ್ನಪೂರ್ಣ ಕಲ್ಯಾಣಿ, ಪರಜಾನ ಚೌಧರಿ, ಲಕ್ಷ್ಮೀಬಾಯಿ ಬೆಲ್ಲದ ಸೇರಿದಂತೆ ಅನೇಕರು ಭಾಗವಹಿಸಿದ್ದರು.

error: Content is protected !!