Sunday, 26th May 2024

ಮತಗಟ್ಟೆ ಆವರಣದಲ್ಲೇ ಕುಸಿದು ಬಿದ್ದು ಮೃತಪಟ್ಟ ವೃದ್ದೆ

ಬೆಳಗಾವಿ: ಯರಗಟ್ಟಿ ತಾಲೂಕಿನ ಯರಝರ್ವಿಯಲ್ಲಿ ಬುಧವಾರ ಮತ ಚಲಾಯಿಸಲು ಬಂದಿದ್ದ ವೃದ್ದೆಯೊಬ್ಬರು ಮತಗಟ್ಟೆ ಆವರಣದಲ್ಲೇ ಕುಸಿದು ಬಿದ್ದು ಮೃತಪಟ್ಟಿದ್ದಾರೆ.

68 ವರ್ಷದ ಪಾರವ್ವ ಈಶ್ವರ ಸಿದ್ನಾಳ (ಪನದಿ) ಎಂಬುವವರೇ ಮೃತ ದುರ್ದೈವಿ.

ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಪಾರವ್ವ ತಮ್ಮ‌ ಹಕ್ಕು ಚಲಾಯಿಸಲು ಬಂದಿದ್ದರು. ಆದರೆ, ಮತದಾನಕ್ಕೂ ಮುನ್ನ ಮತಗಟ್ಟೆ ಆವರಣದಲ್ಲೇ ಕುಸಿದು ಬಿದ್ದು ಮೃತರಾಗಿದ್ದಾರೆ ಎಂದು ಎಂದು ಪೊಲೀಸರು ತಿಳಿಸಿದ್ದಾರೆ.

ಯರಝರ್ವಿ ಗ್ರಾಮ ಸವದತ್ತಿ ಯಲ್ಲಮ್ಮ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುತ್ತದೆ.

error: Content is protected !!