Sunday, 23rd June 2024

ನಾಲ್ವರು ಐಪಿಎಸ್ ಅಧಿಕಾರಿಗಳ ವರ್ಗಾವಣೆ

ಬೆಂಗಳೂರು: ರಾಜ್ಯ ಸರ್ಕಾರವು ನಾಲ್ವರು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಗೊಳಿಸಿ ಆದೇಶಿಸಿದೆ.

ಈ ಸಂಬಂಧ ಆದೇಶ ಹೊರಡಿಸಿರುವ ರಾಜ್ಯ ಸರ್ಕಾರ ಇಂಟೆಲಿಜೆನ್ಸಿಯ ಡಿಸಿಪಿಯಾಗಿದ್ದ ಕೆ ಸಂತೋಷ್ ಬಾಬು ಅವರನ್ನು ರಾಮನಗರ ಎಸ್ಪಿಯಾಗಿ ವರ್ಗಾವಣೆ ಮಾಡಲಾಗಿದೆ. ರಾಮನಗರ ಎಸ್ಪಿ ಗಿರೀಶ್ ಅವರನ್ನು ವೈಟ್ ಫೀಲ್ಡ್ ಡಿಸಿಪಿಯಾಗಿ ನೇಮಕ ಮಾಡಲಾಗಿದೆ.

ಚಿತ್ರದುರ್ಗ ಜಿಲ್ಲೆಯ ಎಸ್ಪಿಯಾಗಿದ್ದ ಜಿ.ರಾಧಿಕಾ ಅವರನ್ನು ಬಿಎಂಟಿಸಿಯ ನಿರ್ದೇಶಕರನ್ನಾಗಿ ವರ್ಗಾವಣೆ ಮಾಡಲಾಗಿದೆ. ಬೆಂಗಳೂರಿನ ಸಿವಿಲ್ ರೈಟ್ಸ್ ಎನ್ಸ್ ಫೋರ್ಸಮೆಂಟ್ ಡೈರೆಕ್ಟರ್ ಆಗಿದ್ದ ಕೆ ಪರಶುರಾಮ ಅವರನ್ನು ಚಿತ್ರದುರ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನಾಗಿ ನೇಮಕ ಮಾಡಲಾಗಿದೆ.

error: Content is protected !!