Wednesday, 11th December 2024

ಫುಡ್ ಡೆಲಿವರಿ ಬಾಯ್ ಜತೆ ವಾಸವಿದ್ದ ಶಂಕಿತ ಉಗ್ರ‌ನ ಬಂಧನ

ಬೆಂಗಳೂರು: ಮತ್ತೊಬ್ಬ ಶಂಕಿತ ಉಗ್ರ‌ನನ್ನು ವಶಕ್ಕೆ ಪಡೆದ ಸಿಸಿಬಿ ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ.

ಅಸ್ಸಾಂ ಮೂಲದ ಅಖ್ತರ್ ಹುಸೇನ್ ಲಷ್ಕರ್ ಎಂಬಾತನ್ನು ಭಾನುವಾರ ರಾತ್ರಿ ವಶಕ್ಕೆ ಪಡೆದಿದ್ದಾರೆ. ಫುಡ್ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ ಯುವಕರೊಂದಿಗೆ ತಿಲಕ್ ನಗರದ ಬಿಟಿಪಿ ಏರಿಯಾದ ಮನೆಯ ಮೂರನೇ ಮಹಡಿಯಲ್ಲಿ ವಾಸವಿದ್ದ.

ಉತ್ತರ ಭಾರತದಿಂದ ಪರಾರಿಯಾಗಿ ಬೆಂಗಳೂರಿಗೆ ಬಂದು ನೆಲೆಸಿದ್ದರ ಬಗ್ಗೆ ಗುಪ್ತಚರ ದಳದಿಂದ ಮಾಹಿತಿ ಬಂದ ಹಿನ್ನೆಲೆ ಶಂಕಿತ ಉಗ್ರ ವಾಸವಿದ್ದ ಮನೆ ಮೇಲೆ ದಾಳಿ 30ಕ್ಕೂ ಹೆಚ್ಚು ಸಿಸಿಬಿ ಪೊಲೀಸರು ದಾಳಿ ನಡೆಸಿ ಆತನನ್ನು ವಶಕ್ಕೆ ಪಡೆದಿದ್ದಾರೆ.

ತಿಲಕ್ ನಗರ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿದೆ. ಇತ್ತೀಚಿಗೆ ಬೆಂಗಳೂರಿನ ಓಕಳಿಪುರಂನಲ್ಲಿ ತಾಲಿಬ್​ ಹುಸೇಬ್​ ಎಂಬ ಶಂಕಿತ ಉಗ್ರನೊಬ್ಬನನ್ನು ಪೊಲೀಸರು ಬಂಧಿಸಿದ್ದರು.