Saturday, 27th July 2024

2024ರ ಜನವರಿ 5 ರಿಂದ 9: 24ನೇ ಆವೃತ್ತಿಯ ಅವರೆ ಬೇಳೆ ಮೇಳ

ಬೆಂಗಳೂರು: ಮತ್ತೊಂದು ಬೃಹತ್‌ ಆಹಾರ ಮೇಳಕ್ಕೆ ಬೆಂಗಳೂರು ನಗರ ಸಿದ್ಧವಾಗುತ್ತಿದೆ.

2024ರ ಜನವರಿ 5 ರಿಂದ 9 ರವರೆಗೆ 24ನೇ ಆವೃತ್ತಿಯ ಅವರೆ ಬೇಳೆ ಮೇಳ ನ್ಯಾಷನಲ್ ಕಾಲೇಜು ಮೈದಾನದಲ್ಲಿ ನಡೆಯಲಿದೆ. ಈ ಮೇಳದಲ್ಲಿ ಅವರೆ ಬೇಳೆಯ ವಿವಿಧ ಖಾದ್ಯಗಳು ಜನರಿಗೆ ಲಭ್ಯವಾಗಲಿದೆ.

ಪ್ರತಿ ವರ್ಷದಂತೆ ಈ ವರ್ಷವೂ ದೊಡ್ಡ ಮಟ್ಟದ ಅವರೆ ಮೇಳ ನಡೆಯಲಿದ್ದು, ಅವರೆ ಕಾಯಿ ಐಸ್‌ಕ್ರೀಂ, ಅವರೆ ಕಾಯಿ ದೋಸೆ, ಅವರೆ ಮಂಚೂರಿ ಯನ್, ಅವರೆ ಪಫ್, ಅವರೆ ಹಲ್ವಾ, ಅವರೆ ವಡೆ, ಅವರೆ ಪಾಯಸ ಸೇರಿದಂತೆ ಸುಮಾರು ನೂರಕ್ಕೂ ಹೆಚ್ಚು ತಿನಿಸುಗಳು ಈ ಮೇಳದಲ್ಲಿ ಸಿಗಲಿದೆ.

‘ಈ ವರ್ಷದ ಅವರೆ ಮೇಳದಲ್ಲಿ ವಿವಿಧ ಖಾದ್ಯಗಳನ್ನು ಸವಿಯದೆ ಯಾರೂ ವಾಪಸ್‌ ಹೋಗದಂತೆ ಉತ್ತಮ ತಯಾರಿ ನಡೆಸುತ್ತಿದ್ದೇವೆ. ಕಳೆದ ವರ್ಷ ನ್ಯಾಷನಲ್ ಕಾಲೇಜು ಮೈದಾನದ ಒಂದು ಭಾಗವನ್ನು ಮಾತ್ರ ಮೇಳಕ್ಕೆ ಬಳಸಿಕೊಳ್ಳಲಾಗಿತ್ತು. ಆದರೆ ಈ ವರ್ಷ ಸಂಪೂರ್ಣ ಸ್ಥಳವನ್ನು ಬಳಸಿಕೊಳ್ಳುವುದರೊಂದಿಗೆ ಪಾರ್ಕಿಂಗ್ ಸೌಲಭ್ಯವನ್ನು ಕೂಡ ಒದಗಿಸಲಾಗುತ್ತಿದೆ.

ಮೆಟ್ರೋ ನಿಲ್ದಾಣ ಸಮೀಪವಿರುವುದರಿಂದ ಜನರು ಸುಲಭವಾಗಿ ಈ ಅವರೆ ಮೇಳಕ್ಕೆ ಬರಬಹುದು. ಕಳೆದ ವರ್ಷ ಸುಮಾರು 40 ಅಂಗಡಿಗಳಿದ್ದವು. ಆದರೆ ಈ ವರ್ಷ ಸ್ಟಾಲ್‌ಗಳ ಸಂಖ್ಯೆ ಹೆಚ್ಚಿಸಿದ್ದು, ಸುಮಾರು 80 ಅಂಗಡಿಗಳಿರಲಿವೆ. ಹೆಚ್ಚು ಬೇಡಿಕೆಯಿರುವ ತಿನಿಸುಗಳಿಗೆ ಹೆಚ್ಚಿನ ಕೌಂಟರ್‌ ತೆರೆಯ ಲಾಗುತ್ತದೆ. ಹಿರಿಯ ನಾಗರಿಕರಿಗಾಗಿ ವಿಶೇಷ ಕೌಂಟರ್ ಜೊತೆಗೆ, ಅವರಿಗಾಗಿ ಪ್ರತ್ಯೇಕ ಆಸನ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ ಎಂದು ವಿವರಿಸಿದ್ದಾರೆ.

ಮೊದಲೆಲ್ಲಾ ಅವರೇ ಮೇಳವನ್ನು ಬೆಂಗಳೂರಿನ ವಿವಿ ಪುರಂ ಫುಡ್‌ ಸ್ಟ್ರೀಟ್‌ನಲ್ಲಿ ನಡೆಸಲಾಗುತ್ತಿತ್ತು. ಆದರೆ ನವೀಕರಣದ ಕಾರಣ ಕಳೆದ ವರ್ಷದಿಂದ ನ್ಯಾಷನಲ್ ಕಾಲೇಜಿನಲ್ಲಿ ಈ ಅವರೆ ಮೇಳವನ್ನು ನಡೆಸಲಾಗುತ್ತಿದೆ. ಕಳೆದ ಬಾರಿ ನಿರೀಕ್ಷೆಗೂ ಮೀರಿ ಜನರು ಭಾಗಿಯಾಗಿದ್ದರು. ಕಳೆದ ವರ್ಷ ಸುಮಾರು ಐದು ಲಕ್ಷಕ್ಕೂ ಹೆಚ್ಚು ಜನರು ಈ ಮೇಳದಲ್ಲಿ ಭಾಗಿಯಾಗಿದ್ದರು.

Leave a Reply

Your email address will not be published. Required fields are marked *

error: Content is protected !!