Saturday, 27th July 2024

ನಾಲ್ಕು ರಾಜ್ಯಗಳಲ್ಲಿ ಬಿಜೆಪಿಗೇ ಅಧಿಕಾರ: ನಳಿನ್ ಕುಮಾರ್ ವಿಶ್ವಾಸ

ಬೆಂಗಳೂರು: ಪಂಚರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿಯು ನಾಲ್ಕು ರಾಜ್ಯಗಳಲ್ಲಿ ಅಧಿಕಾರದ ಗದ್ದುಗೆ ಏರಲು ಸಿದ್ಧವಾಗಿ ರುವುದು ಈ ವರೆಗಿನ ಪ್ರಕಟಿತ ಫಲಿತಾಂಶದಿಂದ ವ್ಯಕ್ತವಾಗುತ್ತಿದೆ. ಒಂದು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಹೀನಾಯ ಸೋಲು ಅನುಭವಿಸಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷರು ಮತ್ತು ಸಂಸದರೂ ಆದ ನಳಿನ್‍ಕುಮಾರ್ ಕಟೀಲ್ ಅವರು ತಿಳಿಸಿದರು.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಬೆಳಿಗ್ಗೆ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಉತ್ತರ ಪ್ರದೇಶ, ಉತ್ತರಾಖಂಡ, ಮಣಿಪುರ ಹಾಗೂ ಗೋವಾಗಳಲ್ಲಿ ಬಿಜೆಪಿ ಅಧಿಕಾರದ ಗದ್ದುಗೆ ಏರುವ ವಿಶ್ವಾಸದಲ್ಲಿದೆ. ಪಂಜಾಬ್‍ ನಲ್ಲಿ ಅಧಿಕಾರ ಪಡೆದಿದ್ದ ಕಾಂಗ್ರೆಸ್ ಪಕ್ಷ ಹೀನಾಯ ಸೋಲು ಅನುಭವಿಸುವ ಹಾದಿ ಯಲ್ಲಿದೆ ಎಂದು ವಿಶ್ಲೇಷಿಸಿದರು.

ಈ ಫಲಿತಾಂಶ ನರೇಂದ್ರ ಮೋದಿ ಅವರ ಯುಗೋದಯದ ಫಲಿತಾಂಶ. ಜನತೆ ಮೋದಿ ಅವರ ಅಭಿವೃದ್ಧಿ ಕಾರ್ಯಗಳಿಗೆ ನೀಡಿದ ಮತ ಎಂದು ಅವರು ತಿಳಿಸಿದರು. ಕುಟುಂಬ ರಾಜಕಾರಣ ಜಾತಿ ರಾಜಕಾರಣದ ಮೂಲಕ ದೇಶದ ಏಳಿಗೆಗೆ ಕುತ್ತು ತಂದವರಿಗೆ ಸೋಲು ಉಂಟಾಗಿದೆ ಎಂದರು.

ಈ ಫಲಿತಾಂಶವು ಸ್ಥಿರ ಮತ್ತು ಅಭಿವೃದ್ಧಿ ಪರ ಯೋಜನೆಗಳಿಗೆ-ಜಗದ್ವಂದ್ಯ ಭಾರತದ ಪರಿಕಲ್ಪನೆಗೆ ಜನಾಶೀರ್ವಾದ ಎಂದು ತಿಳಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಆಡಳಿತಾವಧಿಯಲ್ಲಿ ಮಾಡಿದ ಸಾಧನೆಗಳನ್ನು ಜನರು ಗುರುತಿಸಿ ದ್ದಾರೆ. ಈ ಫಲಿತಾಂಶವು ಉತ್ತಮ ಕಾರ್ಯಕ್ರಮಗಳನ್ನು ಜನರು ಗುರುತಿಸಿದ್ದರ ಪ್ರತೀಕ ಮಾತ್ರವಲ್ಲ ಪ್ರಜಾಪ್ರಭುತ್ವ ವ್ಯವಸ್ಥೆ ಯನ್ನು ಕಡೆಗಣಿಸಿ ವ್ಯಕ್ತಿ ಪ್ರತಿμÉ್ಠಯನ್ನು ಮೆರೆದ ರಾಜಕೀಯ ದಳಗಳಿಗೆ ಮಾಡಿದ ಕಪಾಳಮೋಕ್ಷ ಎಂದು ಅವರಿ ಅಭಿಪ್ರಾಯ ಪಟ್ಟರು.

ಅಯೋಧ್ಯೆ ಶ್ರಿರಾಮ ಮಂದಿರ, ಭವ್ಯ ಕಾಶಿ- ದಿವ್ಯ ಕಾಶಿ ಮೊದಲಾದ ಕಾರ್ಯಗಳನ್ನು ಗುರುತಿಸಿ ಜನರು ಆಶೀರ್ವಾದ ನೀಡಿ ದ್ದಾರೆ ಎಂದು ನುಡಿದರು. ರಾಜ್ಯದಲ್ಲಿ ಅವಧಿಪೂರ್ವ ಚುನಾವಣೆಯ ಅಗತ್ಯ ನಮಗಿಲ್ಲ ಎಂದು ಅವರು ಪ್ರಶ್ನೆಗೆ ಉತ್ತರ ನೀಡಿದರು.

ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷರಾದ ನಿರ್ಮಲ್ ಕುಮಾರ್ ಸುರಾಣಾ, ರಾಜ್ಯದ ಸಚಿವರಾದ ಭೈರತಿ ಬಸವರಾಜ್, ಎನ್ ಮುನಿರತ್ನ, ಆನಂದ ಸಿಂಗ್, ಶಾಸಕರು ಮತ್ತು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಆರ್. ವಿಶ್ವನಾಥ್ ಮತ್ತು ರಾಜ್ಯ ಮುಖ್ಯ ವಕ್ತಾರರಾದ ಎಂ.ಜಿ. ಮಹೇಶ್ ಅವರು ಉಪಸ್ಥಿತರಿದ್ದರು.

error: Content is protected !!