Tuesday, 23rd April 2024

ವೀರಶೈವ ಲಿಂಗಾಯಿತ ನಾಯಕರಿಗೆ ಸಿಎಂ ಸ್ಥಾನ ನೀಡಿ: ಡಾ.ಶಾಂತವೀರ ಮಹಾಸ್ವಾಮೀಜಿ

ಬೆಂಗಳೂರು: ಯಾವುದೇ ಕಾರಣಕ್ಕೂ ಸಿಎಂ ಬಿ.ಎಸ್.ಯಡಿಯೂರಪ್ಪ ಅವರನ್ನು ಬದಲಾವಣೆ ಮಾಡಬಾರದು. ಒಂದೊಮ್ಮೆ ಬದಲಾವಣೆ ಮಾಡುವುದದಾದರೆ ವೀರಶೈವ ಲಿಂಗಾಯಿತ ನಾಯಕರಿಗೆ ಸಿಎಂ ಸ್ಥಾನ ನೀಡಬೇಕು ಎಂದು ಕೊಳದಮಠದ ಡಾ.ಶಾಂತವೀರ ಮಹಾಸ್ವಾಮೀಜಿ ಆಗ್ರಹಿಸಿದ್ದಾರೆ.

ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಸರಿಯಲ್ಲ. ಕಳೆದ ಮಂಗಳವಾರ ಮಠಾಧೀಶರು ಭೇಟಿಯಾದ ವೇಳೆ ಯಡಿಯೂರಪ್ಪ ಹೈಕಮಾಂಡ್ ನಿರ್ಧಾರಕ್ಕೆ ಬದ್ಧ ಎಂದು ಹೇಳಿದ್ದಾರೆ.

ಒಂದು ವೇಳೆ ಹೈಕಮಾಂಡ್ ಸಿಎಂ ಬದಲಾವಣೆಗೆ ಮುಂದಾಗಿದ್ದರೆ ವೀರಶೈವ ಸಮುದಾಯದವರಿಗೆ ಸಿಎಂ ಹುದ್ದೆ ನೀಡಬೇಕು. ಅರವಿಂದ್ ಬೆಲ್ಲದ್ ಅಥವಾ ಯಾರನ್ನಾದರೂ ಸಿಎಂ ಮಾಡಲಿ ಎಂದು ಹೇಳುವ ಮೂಲಕ ಸಿಎಂ ಹುದ್ದೆಗೆ ಬೆಲ್ಲದ್ ಹೆಸರು ಪ್ರಸ್ತಾಪಿಸಿದ್ದಾರೆ.

ಯಾರ ಪರವಾಗಿಯೂ ನಾವು ಇಲ್ಲ, ವಿರೋಧವಾಗಿಯೂ ಇಲ್ಲ, ವೀರಶೈವ ಧರ್ಮ ಉಳಿಸುವುದಕ್ಕಾಗಿ ನಮ್ಮ ಹೋರಾಟ. ಯಡಿಯೂರಪ್ಪ ಬದಲಾವಣೆಯಾಗ ಬಾರದು ಎಂಬುದೇ ನಮ್ಮ ಉದ್ದೇಶ, ಆದರೆ ಒಂದೊಮ್ಮೆ ಬದಲಾದರೆ ವೀರಶೈವ ಲಿಂಗಾಯತರನ್ನೇ ಸಿಎಂ ಮಾಡಬೇಕು ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!