Saturday, 27th July 2024

ಬಿಬಿಎಂಪಿ ಕಾಯ್ದೆಗೆ ರಾಜ್ಯಪಾಲರ ಅಂಕಿತ: ಸರ್ಕಾರದಿಂದ ಅಧಿಸೂಚನೆ

ಬೆಂಗಳೂರು : ಬಿಬಿಎಂಪಿ ವ್ಯಾಪ್ತಿಯನ್ನು ಹಿಗ್ಗಿಸುವ ಮತ್ತು ಆಡಳಿತ ಯಂತ್ರದಲ್ಲಿ ಬದಲಾವಣೆ ತರುವ ಬಿಬಿಎಂಪಿ ಕಾಯ್ದೆಗೆ ರಾಜ್ಯಪಾಲರು ಅಂಕಿತ ಹಾಕಿದ್ದಾರೆ. ಈ ಸಂಬಂಧ ಸರ್ಕಾರ ಅಧಿಸೂಚನೆ ಹೊರಡಿಸಿದೆ.

ವಿಧಾನಮಂಡಲ ಅಧಿವೇಶನದಲ್ಲಿ ಬಿಬಿಎಂಪಿ ವಿಧೇಯಕಕ್ಕೆ ಅಂಗೀಕಾರ ಪಡೆಯಲಾಗಿತ್ತು. ಇದೀಗ ವಿಧಾನಮಂಡಲದಲ್ಲಿ ಅಂಗೀಕಾರ ಪಡೆದ ವಿಧೇಯಕಕ್ಕೆ ರಾಜ್ಯಪಾಲರು ಅಂಕಿತ ಹಾಕುವ ಮೂಲಕ ಬಿಬಿಎಂಪಿ ಕಾಯ್ದೆ ಜಾರಿಯಾಗಿದೆ.

ಅಧಿಸೂಚನೆ ಮೂಲಕ ಕಾಯ್ದೆ ಜಾರಿಯಾದ ಹಿನ್ನೆಲೆ ಮತ್ತು ಬಿಬಿಎಂಪಿ ಚುನಾವಣೆ ನಡೆಸುವ ಸಂಬಂಧ ಹೈ ಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿರುವುದರಿಂದ ಸರ್ಕಾರ ಬಿಬಿಎಂಪಿ ವಾರ್ಡ್ ಗಳನ್ನು 243ಗೆ ಹೆಚ್ಚಿಸುವ ಮರು ವಿಂಗಡನೆ ಪ್ರಕ್ರಿಯೆ ಪ್ರಾರಂಭಿಸಬಹುದಾಗಿದೆ.

ಮೇಯರ್ ಮತ್ತು ಉಪಮೇಯರ್ ಅಧಿಕಾರಾವಧಿ ಈಗಿನ ಒಂದು ವರ್ಷದಿಂದ ಎರಡೂವರೆ ವರ್ಷಕ್ಕೆ ಹೆಚ್ಚಾಗಲಿದೆ. ನೂತನ ಕಾಯ್ದೆಯ ಪ್ರಕಾರ ಬಿಬಿಎಂಪಿ ಸುತ್ತಲೂ ಇರುವ 1 ಕಿಲೋ ಮೀಟರ್‌ ವ್ಯಾಪ್ತಿಯ ಗ್ರಾಮ, ಗ್ರಾಮ ಪಂಚಾಯಿತಿ, ಪಟ್ಟಣ ಪಂಚಾ ಯಿತಿ ಹಾಗೂ ನಗರಸಭೆಗೆ ಸೇರಿದ ಪ್ರದೇಶಗಳು ಪಾಲಿಕೆ ವ್ಯಾಪ್ತಿಗೆ ಸೇರ್ಪಡೆಯಾಗಲಿವೆ. ಆ‌ ಮೂಲಕ ಬಿಬಿಎಂಪಿ ವಾರ್ಡ್ ಗಳ ಸಂಖ್ಯೆ 198 ರಿಂದ 243ಕ್ಕೆ ಏರಿಕೆಯಾಗಲಿದೆ.

ಬಿಬಿಎಂಪಿಗೆ ಪ್ರಸ್ತುತ ಇರುವ ಬಿಬಿಎಂಪಿ ಆಯುಕ್ತರ ಹುದ್ದೆಯನ್ನು ಮುಖ್ಯ ಹುದ್ದೆಯಾಗಿ ಮಾಡಲಾಗುತ್ತದೆ. ರಾಜ್ಯ ಸರ್ಕಾ​ರದ ಪ್ರಧಾನ ಕಾರ್ಯ​ದ​ರ್ಶಿಯ ಹುದ್ದೆಗಿಂತ ಕಡಿಮೆ ಇಲ್ಲ​ದ​ವ​ರ​ನ್ನು ಮುಖ್ಯ ಹುದ್ದೆಗೆ ನೇಮ​ಕ ಮಾಡಲಾಗುವುದು. ಮುಖ್ಯ ಆಯುಕ್ತರ ಅಧಿ​ಕಾರಾವಧಿ ಎರ​ಡು ವರ್ಷ​ಗ​ಳಿ​ಗಿಂತ ಕಡಿಮೆ ಇಲ್ಲ​ದಂತೆ ನಿಯೋ​ಜನೆ ಮಾಡಬೇಕು.

 

Leave a Reply

Your email address will not be published. Required fields are marked *

error: Content is protected !!