Thursday, 22nd February 2024

ಡಿಸೆಂಬರ್ 23, 24, 25ರಂದು ಕೆಸಿಸಿ ಕಪ್‌ ಪಂದ್ಯಾವಳಿ

ಬೆಂಗಳೂರು: ನಟ ಕಿಚ್ಚ ಸುದೀಪ್ ಮಾರ್ಗದರ್ಶನದಲ್ಲಿ ಆರಂಭವಾದ ಕನ್ನಡ ಚಲನಚಿತ್ರ ಕಪ್ ಕ್ರಿಕೆಟ್ ಪಂದ್ಯಾವಳಿಯ 4ನೇ ಆವೃತ್ತಿಗೆ ದಿನಗಣನೆ ಶುರುವಾಗಿದೆ. ಡಿಸೆಂಬರ್ 23, 24, 25ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಟೂರ್ನಿ ನಡೆಸುವುದಾಗಿ ಸುದೀಪ್ ಘೋಷಿಸಿದ್ದಾರೆ.

ಸಿನಿಮಾ, ಧಾರಾವಾಹಿ ಮತ್ತು ಮಾಧ್ಯಮ ಲೋಕದಲ್ಲಿ ಕೆಲಸ ಮಾಡುವವರ ಕ್ರಿಕೆಟ್‌ ಪಂದ್ಯಾವಳಿಗಾಗಿ ಕೆಸಿಸಿ ಕಪ್‌ ಸೀಸನ್ 4ರ ಹರಾಜು ಪ್ರಕ್ರಿಯೆ ಭಾನುವಾರ, ನ.26ರಂದು ಮುಗಿದಿದೆ. ಹೊಸಕೆರೆಹಳ್ಳಿಯ ನಂದಿಲಿಂಕ್ಸ್ ಗ್ರೌಂಡ್‌ನಲ್ಲಿ ಆಟಗಾರರ ಆಯ್ಕೆ ಪ್ರಕ್ರಿಯೆ ನಡೆಯಿತು.

ಕೆಸಿಸಿ ಹರಾಜು ಪ್ರಕ್ರಿಯೆಯಲ್ಲಿ ಬಹುತೇಕ ಕಲಾವಿದರು ಭಾಗಿಯಾಗಿದ್ದರು. ಕಳೆದ ಬಾರಿಯಂತೆ ಆರು ತಂಡಗಳು ಟೂರ್ನಿಯಲ್ಲಿ ಪಾಲ್ಗೊಳ್ಳಲಿವೆ. ಆರು ತಂಡಗಳಿಗೂ ಸ್ಟಾರ್ ನಟರು ನಾಯಕ ಆಗಿದ್ದಾರೆ.

ಕಿಚ್ಚ ಸುದೀಪ್, ಶಿವರಾಜ್‌ಕುಮಾರ್ (ಶಿವಣ್ಣ), ಗೋಲ್ಡನ್ ಸ್ಟಾರ್ ಗಣೇಶ್, ಡಾಲಿ ಧನಂಜಯ್, ದುನಿಯಾ ವಿಜಯ್, ರಿಯಲ್ ಸ್ಟಾರ್ ಉಪೇಂದ್ರ ಸೇರಿದಂತೆ ಹಲವರು ಹರಾಜಿನಲ್ಲಿ ಭಾಗಿಯಾಗಿದ್ದರು.

ಇನ್ನು ಈ ಬಾರಿಯ ಪಂದ್ಯಾವಳಿಯಲ್ಲಿ ಕೆಲವು ಅಂತಾರಾಷ್ಟ್ರೀಯ ಮಾಜಿ ಕ್ರಿಕೆಟ್ ಆಟಗಾರರೂ ಭಾಗಿಯಾಗಲಿದ್ದಾರೆ. ಎಸ್.ಬದ್ರಿನಾಥ್, ಸುರೇಶ್ ರೈನಾ, ತಿಲಕರತ್ನೆ ದಿಲ್ಶಾನ್, ಮುರಳಿ ವಿಜಯ್, ರಾಬಿನ್ ಉತ್ತಪ್ಪ, ಹರ್ಷ್ವಲ್ ಗಿಬ್ಸ್ ತಲಾ ಒಂದೊಂದು ತಂಡದ ಪರವಾಗಿ ಆಡಲಿದ್ದಾರೆ. ಇದೇ ಮೊದಲ ಬಾರಿಗೆ ಕೆಸಿಸಿಯಲ್ಲಿ ತಮಿಳಿನ ವಿಕ್ರಾಂತ್ ಹಾಗೂ ತೆಲುಗಿನ ಪ್ರಿನ್ಸ್ ಭಾಗಿಯಾಗುತ್ತಿದ್ದಾರೆ.

1) ಗಂಗಾ ವಾರಿಯರ್ಸ್ – ಎಂಕೆಜೆ ಗ್ರೂಪ್

ಗೋಲ್ಡನ್ ಸ್ಟಾರ್ ಗಣೇಶ್ (ನಾಯಕ), ಮುರಳಿ ವಿಜಯ್, ರಾಜಕುಮಾರ, ಕರಣ್ ಆರ್ಯನ್, ಪ್ರತಾಪ್, ಸುನೀಲ್ ರಾವ್, ವಿಕಾಸ್, ಮಲ್ಲಿಕಾರ್ಜುನ್, ನಾಗಾರ್ಜುನ, ಗರುಡ ರಾಮ, ರೋಹಿತ್ ಪದಕಿ, ಚೇತನ್, ಕಾರ್ತಿಕ್, ರಾಜು ಗೌಡ, ಪ್ರಜ್ವಲ್.

2) ಹೊಯ್ಸಳ ಈಗಲ್ಸ್ – ಸೂರಜ್ ಪ್ರೊಡಕ್ಷನ್ಸ್

ಕಿಚ್ಚ ಸುದೀಪ್ (ನಾಯಕ), ತಿಲಕರತ್ನೆ ದಿಲ್ಶನ್, ಡಾರ್ಲಿಂಗ್ ಕೃಷ್ಣ, ನಂದ ಕಿಶೋರ್, ತ್ರಿವಿಕ್ರಮ್, ಅರುಣ್ ಬಚ್ಚನ್, ನವೀನ್ ರಘು, ವಾಸುಕಿ ವೈಭವ್, ಇಶಾನ್, ಸಚಿನ್ ಸಿ, ಮಹೇಶ್ ಕೃಷ್ಣ, ಜಗ್ಗಿ, ಎಸ್‌ಆರ್‌ಕೆ – ರಂಜಿತ್, ಹೇಮಂತ್, ರಾಜೇಶ್, ಸಂಜಯ್ ಅಶ್ವಿನ್, ಆದರ್ಶ್.

3) ವಿಜಯನಗರ ಪೇಟ್ರಿಯಾಟ್ಸ್ – ಕೆಆರ್‌ಜಿ ಸ್ಟುಡಿಯೋಸ್ & ಡಾಲಿ ಸಿನಿಮಾಸ್

ಜಯ್ ಕಾರ್ತಿಕ್ (ನಾಯಕ), ದುನಿಯಾ ವಿಜಯ್, ಹರ್ಷಲ್ ಗಿಬ್ಸ್, ಎನ್‌ಸಿ ಅಯ್ಯಪ್ಪ, ಪ್ರತಾಪ್ ನಾರಾಯಣ, ರಾಘವೇಂದ್ರ, ಪವನ್ ಕುಮಾರ್, ಆರ್ಯನ್, ಮಧು, ಸುದರ್ಶನ್, ಯಶವಂತ, ಮಂಜು ಪಾವಗಡ, ಗಿರಿ ವಿನೋದ್, ಪವನ್ ಒಡೆಯರ್, ಸಿದ್ದು, ದೇಸಾಯಿಗೌಡ.

Leave a Reply

Your email address will not be published. Required fields are marked *

error: Content is protected !!